ಮತ್ತೆ ಮೂರು ಸಂಸದರ ಅಮಾನತು
ಮತ್ತೆ ಮೂರು ಸಂಸದರ ಅಮಾನತು

ಕಲಾಪಕ್ಕೆ ಅಡ್ಡಿ: ಮತ್ತೆ ಇಬ್ಬರು ಸಂಸದರ ಅಮಾನತು, ಒಟ್ಟು ಸಂಖ್ಯೆ 143ಕ್ಕೆ ಏರಿಕೆ

ಕಲಾಪಕ್ಕೆ ಅಡ್ಡಿ ಪಡಿಸಿ, ಸದನದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಮತ್ತೆ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದ್ದು, ಆ ಮೂಲಕ ಅಮಾನತಗೊಂಡ ಸಂಸದರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.
Published on

ನವದೆಹಲಿ: ಕಲಾಪಕ್ಕೆ ಅಡ್ಡಿ ಪಡಿಸಿ, ಸದನದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಮತ್ತೆ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದ್ದು, ಆ ಮೂಲಕ ಅಮಾನತಗೊಂಡ ಸಂಸದರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.

ಇಂದು ಕಲಾಪಕ್ಕೆ ಅಡ್ಡಿ ಪಡಿಸಿ, ಸದನದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಕೇರಳ ಕಾಂಗ್ರೆಸ್ ಸಂಸದ ಥಾಮಸ್ ಚಾಜಿಕಡನ್ (ಮಣಿ) ಮತ್ತು ಸಿಪಿಐಎಂ ಸಂಸದ ಎ ಎಂ ಆರಿಫ್ ಅವರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆ ಅಮಾನತು ಮಾಡಿದೆ. ಈ ಮೂಲಕ ಅಮಾನತುಗೊಂಡ ಸಂಸದರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಇದು ಸಂಸತ್ ಕಲಾಪದ ಇತಿಹಾಸದಲ್ಲೇ ಅತ್ಯಧಿಕ ಎಂದು ಹೇಳಲಾಗಿದೆ.

ಕಳೆದ ವಾರದಿಂದ ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪದ ಬಗ್ಗೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸತ್ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಭಾಷಣ ಮಾಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com