
ನವದೆಹಲಿ: ಕಾಂಗ್ರೆಸ್ ಪಕ್ಷ ಆರಂಭಿಸಿದ ಕ್ರೌಡ್ ಫಂಡಿಂಗ್ ಅಭಿಯಾನಕ್ಕೆ 48 ಗಂಟೆಗಳಲ್ಲಿ 2.81 ಕೋಟಿ ರೂಪಾಯಿ ಹರಿದುಬಂದಿದೆ. ಅಭಿಯಾನ ಪ್ರಾರಂಭವಾದ ಕೇವಲ 48 ಗಂಟೆಗಳಲ್ಲೇ 1.13 ಲಕ್ಷ ಮಂದಿ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ.
ದೇಶಕ್ಕಾಗಿ ದೇಣಿಗೆ ಎಂಬ ಕ್ರೌಡ್ ಫಂಡಿಂಗ್ ಅಭಿಯಾನಕ್ಕೆ ಸೋಮವಾರ (ಡಿ.18) ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿ 1.38 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಪಕ್ಷಕ್ಕೆ ಬಂದಿರುವ ಶೇ.80 ರಷ್ಟು ದೇಣಿಗೆಯ ವಹಿವಾಟು ಯುಪಿಐ ನಿಂದ ನಡೆದಿದೆ. ಕಾಂಗ್ರೆಸ್ ಆಪ್ ಮೇಲೆ 20,000 ಸೈಬರ್ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಬಹುತೇಕ ಸೈಬರ್ ದಾಳಿಗಳು ವಿದೇಶದಿಂದ ನಡೆದಿದ್ದು, ದತ್ತಾಂಶ ಕದಿಯುವುದಕ್ಕೆ 1,340 ಬಾರಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇನ್ನಿತರ ಹಿರಿಯ ನಾಯಕರೂ ಸೇರಿ 32 ಕ್ಕೂ ಹೆಚ್ಚಿನ ಮಂದಿ ಪಕ್ಷಕ್ಕೆ 1 ಲಕ್ಷಕ್ಕಿಂತ ಹೆಚ್ಚಿನ ದೇಣಿಗೆ ನೀಡಿದ್ದಾರೆ.
ಮಹಾರಾಷ್ಟ್ರ (56 ಲಕ್ಷ) ರಾಜಸ್ಥಾನ (26 ಲಕ್ಷ) ದೆಹಲಿ (20 ಲಕ್ಷ) ಉತ್ತರ ಪ್ರದೇಶ (19 ಲಕ್ಷ) ಕರ್ನಾಟಕ (18 ಲಕ್ಷ) ಕಾಂಗ್ರೆಸ್ ಗೆ ಅತಿ ಹೆಚ್ಚು ದೇಣಿಗೆ ನೀಡಿರುವ ಪಕ್ಷಗಳಾಗಿವೆ. ಬಿಹಾರದಿಂದ ಅತಿ ಕಡಿಮೆ ದೇಣಿಗೆ ಪಕ್ಷಕ್ಕೆ ಬಂದಿದೆ.
Advertisement