ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದನೆ ಎಲ್ಲಿ ಕೊನೆಗೊಂಡಿದೆ: ಪ್ರತಿಪಕ್ಷಗಳ ಟೀಕೆ

ಜಮ್ಮು-ಕಾಶ್ಮೀರದ ರಜೌರಿ ಸೆಕ್ಟರ್‌ನ ಥಾನಮಂಡಿ ಪ್ರದೇಶದಲ್ಲಿ ಗುರುವಾರ ಎರಡು ಸೇನಾ ವಾಹನಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ಸೇನಾ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ನಾಯಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.  
ಸಂಜಯ್ ರಾವತ್, ಫಾರೂಖ್ ಅಬ್ದುಲ್ಲಾ
ಸಂಜಯ್ ರಾವತ್, ಫಾರೂಖ್ ಅಬ್ದುಲ್ಲಾ

ಶ್ರೀನಗರ: ಜಮ್ಮು-ಕಾಶ್ಮೀರದ ರಜೌರಿ ಸೆಕ್ಟರ್‌ನ ಥಾನಮಂಡಿ ಪ್ರದೇಶದಲ್ಲಿ ಗುರುವಾರ ಎರಡು ಸೇನಾ ವಾಹನಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ಸೇನಾ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ನಾಯಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.  

ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ ಕೊನೆಗೊಂಡಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

 ಭಯೋತ್ಪಾದನಾ ದಾಳಿಯ ಕುರಿತು ಗುರುವಾರ ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಇಂದು ಕೂಡ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಇದೆ, ಕೇವಲ ಒಂದು ಘಟನೆ ನಡೆದಿದೆ. ಭಯೋತ್ಪಾದನೆ ಕೊನೆಗೊಂಡಿಲ್ಲ. ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಪ್ರವಾಸೋದ್ಯಮ ವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಒಬ್ಬ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರೆ ಯಾರೂ ಕೂಡಾ ಇಲ್ಲಿಗೆ ಬರುವುದಿಲ್ಲ ಎಂದರು. 

ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮಾತನಾಡಿ, ಪೂಂಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಪುಲ್ವಾಮಾ ದಾಳಿಯ ಪುನರಾವರ್ತನೆಯಾಗಿದೆ. ಸರ್ಕಾರವು ನಿದ್ರಿಸುತ್ತಿದೆ. ಮತ್ತೆ ನಮ್ಮ ಯೋಧರ ತ್ಯಾಗದ ಮೇಲೆ ರಾಜಕೀಯ ಮಾಡಲು ಬಿಜೆಪಿಯವರು ಬಯಸುತ್ತೀರಾ? 2024 ರಲ್ಲಿ ಪುಲ್ವಾಮಾ ವಿಷಯದ ಬಗ್ಗೆ ಮತ್ತೊಮ್ಮೆ ಮತ ಕೇಳುತ್ತೀರಾ? ಪೂಂಚ್ ಘಟನೆಯ ಬಗ್ಗೆ ನಾವು ಪ್ರಶ್ನೆಗಳನ್ನು ಕೇಳಿದರೆ, ಅವರು ನಮ್ಮನ್ನು ದೆಹಲಿ ಅಥವಾ ದೇಶದಿಂದ ಹೊರಹಾಕುತ್ತಾರೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com