

ನವದೆಹಲಿ: ದೇಶದಾದ್ಯಂತ ಲೋಕಸಭೆ ಚುನಾವಣೆಯ ಕಾವು ಏರುತ್ತಿದ್ದು, ಎಲ್ಲಾ ಪಕ್ಷಗಳು ಮುಂದಿನ ಚುನಾವಣೆಯನ್ನು ಗೆದ್ದೇ ತೀರುವ ತವಕದಲ್ಲಿ ತಂತ್ರಗಳನ್ನು ರೂಪಿಸುತ್ತಿವೆ. ಇದೀಗ ಬಿಜೆಪಿ ಕೂಡ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಮತ್ತೆ ಮೂರನೇ ಬಾರಿಗೆ ಅಧಿಕಾರಕ್ಕೇರುವ ಉತ್ಸಾಹದಲ್ಲಿದೆ.
ಕಳೆದ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳ ಸಾಧನೆಯ ಆಧಾರದ ಮೇಲೆ 'ದುರ್ಬಲ ಸ್ಥಾನಗಳು' ಎಂದು ವರ್ಗೀಕರಿಸಲಾದ 160 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವತ್ತ ಬಿಜೆಪಿ ವಿಶೇಷ ಗಮನ ಹರಿಸಿದ್ದು, ಒಟ್ಟಾರೆ ಪಕ್ಷ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಆರಂಭವಾದ ಎರಡು ದಿನಗಳ ಸಭೆಯ ನಂತರ, ಸಾರ್ವತ್ರಿಕ ಚುನಾವಣೆಗೆ ಫೆಬ್ರುವರಿ ವೇಳೆಗೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮೊದಲೇ ಬಿಜೆಪಿ ಹಲವಾರು 'ದುರ್ಬಲ ಸ್ಥಾನಗಳಿಗೆ' ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಪದಾಧಿಕಾರಿಗಳು ‘ಮೋದಿ ಕಿ ಗ್ಯಾರಂಟಿ’ ಎಂಬ ಘೋಷಣೆಯ ಮೇಲೆ ಜನರ ವಿಶ್ವಾಸವನ್ನು ಗಳಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಕೇಳಿಕೊಂಡರು.
ಶನಿವಾರ, ಪಕ್ಷದ ನಾಯಕರು ಶೇ 55 ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವ ಮೂಲಕ 350ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ನಿರ್ಧರಿಸಿದ್ದಾರೆ. ಒಂಬತ್ತು ವರ್ಷಗಳಲ್ಲಿ ಮಾಡಿದ ಸರ್ಕಾರದ ಕೆಲಸಗಳನ್ನು ಜನರ ಮುಂದಿಡುವ ಮೂಲಕ ಪಕ್ಷ ಉತ್ತಮ ಸಾಧನೆ ಮಾಡಬಹುದು ಎಂದು ಪಕ್ಷ ನಂಬುತ್ತದೆ.
ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು 2024 ರಲ್ಲಿ ಮೂರನೇ ಬಾರಿಗೆ ಸ್ಪಷ್ಟ ಬಹುಮತವನ್ನು ಪಡೆಯಲು ಪಕ್ಷದ ಕಾರ್ಯತಂತ್ರವನ್ನು ಶನಿವಾರ ಮಂಡಿಸಿದರು.
ಸಭೆಯ ಫಲಿತಾಂಶದ ಬಗ್ಗೆ ಬಿಜೆಪಿ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡದಿದ್ದರೂ, 'ದುರ್ಬಲ' ಎಂದು ಗುರುತಿಸಲ್ಪಟ್ಟಿರುವ 160 ಲೋಕಸಭಾ ಸ್ಥಾನಗಳ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿವೆ ಎಂದು ಮೂಲಗಳು ಸುಳಿವು ನೀಡಿವೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಪಕ್ಷದ ಮೂಲಗಳು, ಶುಕ್ರವಾರ ಮತ್ತು ಶನಿವಾರ ನಡೆದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ನಾಯಕರಿಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ ಮತ್ತು ಯೋಜನೆ ಕುರಿತು ತಿಳಿಸಲಾಗಿದೆ ಎಂದಿವೆ.
ದಕ್ಷಿಣ ಭಾರತದಲ್ಲಿ ಪಕ್ಷವು 49ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು 'ದುರ್ಬಲ' ಎಂದು ಗುರುತಿಸಿದೆ. ನಂತರ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳನ್ನು ದುರ್ಬಲ ಎಂದು ಗುರುತಿಸಲಾಗಿದೆ.
'ಶನಿವಾರ, ಅಮಿತ್ ಶಾ ಅವರು ರಾಜ್ಯ ಘಟಕಗಳ ಮುಖ್ಯಸ್ಥರು ಮತ್ತು ಎಲ್ಲಾ ಮುಂಭಾಗದ ಸಂಘಟನೆಗಳ ಮುಖ್ಯಸ್ಥರು ಸೇರಿದಂತೆ ಪದಾಧಿಕಾರಿಗಳೊಂದಿಗೆ ಈ ಸ್ಥಾನಗಳಿಗೆ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು' ಎಂದು ಪಕ್ಷದ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರು ಸೇರಿದಂತೆ ಬಡವರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಜನರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದುವ ಅಗತ್ಯವನ್ನು ಅಮಿತ್ ಶಾ ಒತ್ತಿ ಹೇಳಿದರು.
ರಾಷ್ಟ್ರೀಯ ಪದಾಧಿಕಾರಿಗಳ ಸಭೆಯ ಎರಡನೇ ದಿನವನ್ನು 3 ಸೆಷನ್‌ಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಅಧಿವೇಶನದಲ್ಲಿ ಸಲಹೆಗಳು, ವಿವಿಧ ಯೋಜನೆಗಳ ಕುರಿತು ಪ್ರತಿಕ್ರಿಯೆ ಮತ್ತು ಜನರ ಗ್ರಹಿಕೆಗಳನ್ನು ತೆಗೆದುಕೊಳ್ಳಲಾಯಿತು. ಪ್ರಮುಖ ನಾಯಕರೊಂದಿಗೆ ಹಲವು ಸುತ್ತಿನ ಪ್ರಸ್ತುತಿಗಳು ಮತ್ತು ಪ್ರಶ್ನೋತ್ತರ ಅವಧಿಗಳು ನಡೆದವು.
Advertisement