ರಾಮಮಂದಿರ ಉದ್ಘಾಟನೆಗೆ ಸೀತಾಮಾತೆ ತವರು ನೇಪಾಳದಿಂದ ವಿಶೇಷ ಉಡುಗೊರೆ

ಮುಂದಿನ ತಿಂಗಳು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಶ್ರೀರಾಮನ ಧರ್ಮಪತ್ನಿ ಸೀತಾಮಾತೆಯ ತವರು ನೇಪಾಳದಿಂದ ವಿಶೇಷ ಉಡುಗೊರೆಗಳು ಆಗಮಿಸುತ್ತಿವೆ.
ನೇಪಾಳದಿಂದ ರಾಮಮಂದಿರಕ್ಕೆ ವಿಶೇಷ ಉಡುಗೊರೆ
ನೇಪಾಳದಿಂದ ರಾಮಮಂದಿರಕ್ಕೆ ವಿಶೇಷ ಉಡುಗೊರೆ
Updated on

ಅಯೋಧ್ಯೆ: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಶ್ರೀರಾಮನ ಧರ್ಮಪತ್ನಿ ಸೀತಾಮಾತೆಯ ತವರು ನೇಪಾಳದಿಂದ ವಿಶೇಷ ಉಡುಗೊರೆಗಳು ಆಗಮಿಸುತ್ತಿವೆ.

ನೇಪಾಳದಿಂದ ಅಯೋಧ್ಯೆಗೆ ವಿವಿಧ ರೀತಿಯ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳನ್ನು ಒಳಗೊಂಡ ವಿಶೇಷ ಸ್ಮಾರಕಗಳನ್ನು ಕಳುಹಿಸಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ರಾಷ್ಟ್ಪೀಯ ಮಾಧ್ಯಮಗಳು ವರದಿ ಮಾಡಿದ್ದು, ಸ್ಮರಣಿಕೆಗಳನ್ನು ವಿತರಿಸಲು ಜನಕಪುರಧಾಮ-ಅಯೋಧ್ಯಧಾಮ ಪ್ರಯಾಣವನ್ನು ಕೈಗೊಳ್ಳಲಾಗುವುದು ಎಂದು ಮೈ ರಿಪಬ್ಲಿಕಾ ಪತ್ರಿಕೆ ವರದಿ ಮಾಡಿದೆ.

ಜನವರಿ 18 ರಂದು ಪ್ರಾರಂಭವಾಗುವ ಪ್ರಯಾಣವು ಜನವರಿ 20 ರಂದು ಅಯೋಧ್ಯೆಯಲ್ಲಿ ಮುಕ್ತಾಯಗೊಳ್ಳಲಿದೆ ಮತ್ತು ಅದೇ ದಿನ ಸ್ಮಾರಕಗಳನ್ನು ಶ್ರೀ ರಾಮ ಜನ್ಮಭೂಮಿ ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಜಾನಕಿ ದೇವಸ್ಥಾನದ ಜಂಟಿ ಮಹಾಂತ ರಾಮರೋಷನ್ ದಾಸ್ ವೈಷ್ಣವ್ ತಿಳಿಸಿದ್ದಾರೆ.

ಜನವರಿ 22 ರಂದು ಪ್ರತಿಷ್ಠಾಪನೆ ಸಮಾರಂಭ ನಡೆಯಲಿದ್ದು, ಜನಕ್‌ಪುರಧಾಮ್‌ನಿಂದ ಜಲೇಶ್ವರ ನಾಥ್, ಮಲಂಗ್ವಾ, ಸಿಮ್ರೌಂಗಧ್, ಗಧಿಮಾಯಿ, ಬಿರ್‌ಗುಂಜ್ ಮೂಲಕ ಬೇಟಿಯಾ, ಕುಶಿನಗರ, ಸಿದ್ಧಾರ್ಥನಗರ, ಗೋರಖ್‌ಪುರ ಮಾರ್ಗವಾಗಿ ಉತ್ತರ ಪ್ರದೇಶದ ಅಯೋಧ್ಯೆ ತಲುಪಲಿದೆ.

ಇದಕ್ಕೂ ಮುನ್ನ ನೇಪಾಳದ ಕಾಳಿಗಂಡಕಿ ನದಿ ದಡದಿಂದ ಸಂಗ್ರಹಿಸಿದ ಶಾಲಿಗ್ರಾಮ ಕಲ್ಲುಗಳನ್ನು ಶ್ರೀರಾಮನ ಪ್ರತಿಮೆ ಮಾಡಲು ಅಯೋಧ್ಯೆಗೆ ಕಳುಹಿಸಲಾಗಿದ್ದು, ಉದ್ಘಾಟನಾ ದಿನದಂದು ಅದನ್ನು ದೇವಾಲಯದಲ್ಲಿ ಸ್ಥಾಪಿಸಲಾಗುವುದು ಎಂದು ಪತ್ರಿಕೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com