ದೆಹಲಿ: ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ, ಪತ್ರ ಪತ್ತೆ!

ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿದ್ದು, ಘಟನ ಸ್ಥಳ ಚಾಣಕ್ಯಪುರಿ ರಾಜತಾಂತ್ರಿಕ ಆವರಣದಲ್ಲಿ ಪೊಲೀಸರು ಪತ್ರವೊಂದನ್ನು ವಶಕ್ಕೆ ಪಡೆದಿದ್ದಾರೆ.
ಇಸ್ರೇಲ್ ರಾಯಭಾರ ಕಚೇರಿ
ಇಸ್ರೇಲ್ ರಾಯಭಾರ ಕಚೇರಿ

ನವದೆಹಲಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿದ್ದು, ಘಟನ ಸ್ಥಳ ಚಾಣಕ್ಯಪುರಿ ರಾಜತಾಂತ್ರಿಕ ಆವರಣದಲ್ಲಿ ಪೊಲೀಸರು ಪತ್ರವೊಂದನ್ನು ವಶಕ್ಕೆ ಪಡೆದಿದ್ದಾರೆ.

ಈ ಪತ್ರವನ್ನು ಇಸ್ರೇಲ್ ನ ರಾಯಭಾರಿಗೆ ಉದ್ದೇಶಿಸಲಾಗಿದೆ ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. 

ಸಂಜೆ 5:53 ಕ್ಕೆ ರಾಯಭಾರ ಕಚೇರಿಯ ಹಿಂಭಾಗದಲ್ಲಿರುವ ಜಿಂದಾಲ್ ಹೌಸ್‌ನಿಂದ "ಜೋರಾದ ಧ್ವನಿ" ಕೇಳಿಸಿತ್ತು.  ಆ ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದ ನಂತರ, ಕ್ರೈಂ ಬ್ರಾಂಚ್, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ವಿಧಿವಿಜ್ಞಾನ ವಿಭಾಗದ ತಂಡಗಳು ಸ್ಥಳಕ್ಕೆ ಧಾವಿಸಿದ್ದವು. ಘಟನೆಯಲ್ಲಿ ಯಾರಿಗೂ ಹಾನಿಯುಂಟಾಗಿಲ್ಲ. 

ಈ ಪ್ರದೇಶದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಲಾಯಿತು. ರಾಷ್ಟ್ರೀಯ ತನಿಖಾ ಸಂಸ್ಥೆ ತಂಡವೂ ಸ್ಥಳವನ್ನು ಪರಿಶೀಲಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸ್ಫೋಟ ಹಾಗೂ ಸ್ಥಳದಲ್ಲಿ ಪತ್ರ ಸಿಕ್ಕಿರುವುದು 2021 ರಲ್ಲಿ ರಾಯಭಾರ ಕಚೇರಿಯ ಎದುರು ನಡೆದ ಸ್ಫೋಟವನ್ನು ನೆನಪಿಸುತ್ತದೆ, ಅಂದು ನಡೆದ ಸ್ಫೋಟದಲ್ಲಿ ಕೆಲವು ಕಾರುಗಳು ಹಾನಿಗೊಳಗಾಗಿದ್ದವು. ಎನ್ಐಎ ಆ ಘಟನೆಯ ತನಿಖೆ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com