ಆರ್‌ಜೆಡಿಯಿಂದ ಬಿಹಾರಕ್ಕೆ ಶೀಘ್ರದಲ್ಲೇ ಹೊಸ ಸಿಎಂ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಬಿಹಾರ ಮುಖ್ಯಮಂತ್ರಿಗೆ ಬಿಜೆಪಿ ನೇತೃತ್ವದ ಎನ್ ಡಿಎಯ ಎಲ್ಲಾ ಬಾಗಿಲುಗಳು ಮುಚ್ಚಲ್ಪಟ್ಟಿವೆ ಎಂದು ಗುರುವಾರ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳುವ ಮೂಲಕ ನಿತೀಶ್ ಕುಮಾರ್ ಬಿಜೆಪಿಗೆ ಮರಳುವ ಸಾಧ್ಯತೆಯ ಊಹಾಪೋಹಗಳಿಗೆ ತೆರೆ ಎಳೆದರು. 
ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರ ಸಿಎಂ ನಿತೀಶ್ ಕುಮಾರ್

ನವದೆಹಲಿ: ಬಿಹಾರ ಮುಖ್ಯಮಂತ್ರಿಗೆ ಬಿಜೆಪಿ ನೇತೃತ್ವದ ಎನ್ ಡಿಎಯ ಎಲ್ಲಾ ಬಾಗಿಲುಗಳು ಮುಚ್ಚಲ್ಪಟ್ಟಿವೆ ಎಂದು ಗುರುವಾರ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳುವ ಮೂಲಕ ನಿತೀಶ್ ಕುಮಾರ್ ಬಿಜೆಪಿಗೆ ಮರಳುವ ಸಾಧ್ಯತೆಯ ಊಹಾಪೋಹಗಳಿಗೆ ತೆರೆ ಎಳೆದರು. 

ನಿತೀಶ್ ಸಾಮಾಜಿಕ ಬೆಂಬಲವನ್ನು ಕಳೆದುಕೊಂಡಿರುವುದರಿಂದ ಬಿಹಾರದಲ್ಲಿನ ಆಡಳಿತಾರೂಢ ಜೆಡಿಯು ಶೀಘ್ರದಲ್ಲೇ ಅಸ್ತಿತ್ವ ಕಳೆದುಕೊಳ್ಳಲಿದೆ. ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ  ಜನನ ನಿಯಂತ್ರಣ ಕುರಿತ ಹೇಳಿಕೆಯಿಂದಾಗಿ ವ್ಯಾಪಕ ಟೀಕೆಗೊಳಗಾಗಿದ್ದ ನಿತೀಶ್  ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

ನಿತೀಶ್ ಕುಮಾರ್ ಅವರು ಎನ್‌ಡಿಎಗೆ ಮರಳುವ ಎಲ್ಲಾ ಬಾಗಿಲುಗಳು ಮುಚ್ಚಿವೆ. ವಿಧಾನಸಭೆಯಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರು ತಕ್ಷಣ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು, ಅವರ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ಗಮನಿಸಿದರೆ ಅವರು ಆ ಹುದ್ದೆಗೆ ಅರ್ಹರಲ್ಲ ಎಂದು ಸಿಂಗ್ ಗುರುವಾರ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.

ನಿತೀಶ್ 2017 ರಲ್ಲಿ 'ಮಹಾಘಟಬಂಧನ್' ಒಕ್ಕೂಟದಿಂದ ಹೊರನಡೆದು ಎನ್ಡಿಎ ಜೊತೆಗೆ ಮೈತ್ರಿಯೊಂದಿಗೆ ಸರ್ಕಾರ ರಚಿಸಿದ್ದರು. ಆದಾಗ್ಯೂ, ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ಎರಡನೇ ಬಾರಿಗೆ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆರ್‌ಜೆಡಿ ಜತೆ ಕೈಜೋಡಿಸಿ ಹೊಸ ಸರ್ಕಾರ ರಚಿಸಿ ಮತ್ತೆ ಮುಖ್ಯಮಂತ್ರಿಯಾದರು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿದ್ದಾರೆ. 

ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜೆಡಿ (ಯು) ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕುರಿತು ಮಾತನಾಡಿದ ಕೇಂದ್ರ ಸಚಿವರು, ಜೆಡಿಯು ಮಿತ್ರಪಕ್ಷ ಆರ್‌ಜೆಡಿಯಿಂದ ಬಿಹಾರಕ್ಕೆ ಶೀಘ್ರದಲ್ಲೇ ಹೊಸ ಸಿಎಂ ಬರಲಿದ್ದಾರೆ ಎಂದು ಹೇಳಿದ್ದಾರೆ.

"ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್-ಜಿ ಅವರ ದಿನಗಳು ಎಣಿಸಲ್ಪಟ್ಟಿವೆ. ಅವರು ಇನ್ನೂ ಕೆಲವು ದಿನಗಳು ಮಾತ್ರ ಹುದ್ದೆಯಲ್ಲಿ ಇರುತ್ತಾರೆ. ಲಾಲು ಪ್ರಸಾದ್ ಯಾದವ್ ಅವರು 'ಚಕ್ರವ್ಯೂಹ ರಚಿಸಿದ್ದಾರೆ. ಈ 'ಚಕ್ರವ್ಯೂ'ದ ಮೊದಲ ಹೆಜ್ಜೆ ಅವಧ್ ಬಿಹಾರಿ ಚೌಧರಿ ಅವರನ್ನು ಬಿಹಾರ ಅಸೆಂಬ್ಲಿ ಸ್ಪೀಕರ್ ಮಾಡಲಾಗಿದೆ. ನಿತೀಶ್ ಕುಮಾರ್ ಅತೀ ಶೀಘ್ರದಲ್ಲಿ ಮಾಜಿ ಸಿಎಂ ಆಗಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಿಹಾರ ಆರ್ ಜೆಡಿಯಿಂದ ಸಿಎಂ ಆಗಲಿದ್ದಾರೆ ಎಂದು ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com