ಮಣಿಪುರ: ತಾಯಿ ಮತ್ತು ಪತ್ನಿಗೆ ಬಂದೂಕು ತೋರಿಸಿ ಗಾಯಕನನ್ನು ಅಪಹರಿಸಿದ ದುಷ್ಕರ್ಮಿಗಳು!

ಮಣಿಪುರದ ಗಾಯಕ ಮತ್ತು ಸಾಹಿತಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಮಾಹಿತಿಯ ಪ್ರಕಾರ, ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗಾಯಕನ ಹೆಂಡತಿ ಮತ್ತು ತಾಯಿಗೆ ಬಂದೂಕು ತೋರಿಸಿ ನಂತರ ಗಾಯಕನನ್ನು ಅಪಹರಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ.
ಅಖು ಚಿಂಗಾಂಗ್‌ಬಾಮ್
ಅಖು ಚಿಂಗಾಂಗ್‌ಬಾಮ್

ಮಣಿಪುರದ ಗಾಯಕ ಮತ್ತು ಸಾಹಿತಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಮಾಹಿತಿಯ ಪ್ರಕಾರ, ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗಾಯಕನ ಹೆಂಡತಿ ಮತ್ತು ತಾಯಿಗೆ ಬಂದೂಕು ತೋರಿಸಿ ನಂತರ ಗಾಯಕನನ್ನು ಅಪಹರಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಪೊಲೀಸರ ಪ್ರಕಾರ, ಘಟನೆ ಇಂದು ನಡೆದಿದ್ದು ಬಂದೂಕುದಾರಿಗಳು ಮಣಿಪುರದ ಗಾಯಕ ಅಖು ಚಿಂಗಾಂಗ್‌ಬಾಮ್ ಅವರನ್ನು ಅಪಹರಿಸಿದ್ದಾರೆ. ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿರುವ ಗಾಯಕ ಅಖು ಚಿಂಗಾಂಗ್ಬಾಮ್ ಇಂಫಾಲ್ ಪೂರ್ವದ ಖುರೈ ನಿವಾಸಿ. 

ಚಿಂಗಾಂಗ್ಬಾಮ್ ಗೀತರಚನೆಕಾರ-ಗಾಯಕ ಮತ್ತು ಸ್ಥಳೀಯ ರಾಕ್ ಬ್ಯಾಂಡ್ ಇಂಫಾಲ್ ಟಾಕೀಸ್ ಸಂಸ್ಥಾಪಕ. ಮೇ 3ರಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜಾತಿ ಹಿಂಸಾಚಾರ ನಡೆಯುತ್ತಿದೆ.

ಹಿಂಸಾಚಾರ ಹೇಗೆ ಪ್ರಾರಂಭವಾಯಿತು?
ಮೇ 3 ರಂದು ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಮಣಿಪುರ (ATSUM) 'ಬುಡಕಟ್ಟು ಏಕತಾ ಮಾರ್ಚ್' ನಡೆಸಿತ್ತು. ಈ ರ್ಯಾಲಿಯನ್ನು ಚುರಾಚಂದ್‌ಪುರದ ತೊರ್ಬಾಂಗ್ ಪ್ರದೇಶದಲ್ಲಿ ನಡೆಸಲಾಯಿತು. ಮೈತೇಯಿ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯ ವಿರುದ್ಧ ರ್ಯಾಲಿ ನಡೆಸಲಾಯಿತು. ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಈ ರ್ಯಾಲಿಯಲ್ಲಿ ಆದಿವಾಸಿಗಳು ಮತ್ತು ಆದಿವಾಸಿಗಳಲ್ಲದವರ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com