ಧರ್ಮದ ಸೋಗಿನಲ್ಲಿ ಅವಹೇಳನಕಾರಿ ಟೀಕೆಗಳ ನೋವು ಅರ್ಥವಾಗೋದು ಮಹಿಳೆ, ಶೂದ್ರರಿಗೆ ಮಾತ್ರ: ಎಸ್ ಪಿ ಪ್ರಧಾನ ಕಾರ್ಯದರ್ಶಿ ಮೌರ್ಯ 

ಧರ್ಮದ ಸೋಗಿನಲ್ಲಿ ಬರುವ ಅವಹೇಳನಕಾರಿ ಟೀಕೆಗಳ ನೋವು ಅರ್ಥವಾಗೋದು ಮಹಿಳೆ ಹಾಗೂ ಶೂದ್ರರಿಗೆ ಮಾತ್ರ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ
ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ

ಲಖನೌ: ಧರ್ಮದ ಸೋಗಿನಲ್ಲಿ ಬರುವ ಅವಹೇಳನಕಾರಿ ಟೀಕೆಗಳ ನೋವು ಅರ್ಥವಾಗೋದು ಮಹಿಳೆ ಹಾಗೂ ಶೂದ್ರರಿಗೆ ಮಾತ್ರ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.

ಉತ್ತರ ಪ್ರದೇಶದ ಒಬಿಸಿಯ ಪ್ರಮುಖ ನಾಯಕರಾಗಿರುವ ಮೌರ್ಯ, ರಾಮಚರಿತ ಮಾನಸದ ಬಗ್ಗೆ ಹೇಳಿಕೆ ನೀಡಿ ಇತ್ತೀಚೆಗೆ ಸುದ್ದಿಯಾಗಿದ್ದರು, ಅದಲ್ಲಿನ ಶ್ಲೋಕಗಳು ಜಾತಿ ಆಧಾರದಲ್ಲಿ ಸಮಾಜದ ದೊಡ್ಡ ವರ್ಗವಕ್ಕೆ ಅವಮಾನ ಮಾಡಿದೆ, ಅಂಥಹ ಗ್ರಂಥಗಳನ್ನು ನಿಷೇಧಿಸಬೇಕು ಎಂದು ಹೇಳಿದ್ದರು.
 
ಮೌರ್ಯ, ಮಹಿಳೆಯರು ಹಾಗೂ ಶೂದ್ರರ ನೋವನ್ನು ಮಹಾತ್ಮ ಗಾಂಧಿ ಅವರನ್ನು ಬ್ರಿಟೀಷರು ರೈಲಿನಿಂದ ಹೊರಗೆ ತಳ್ಳಿರುವುದಕ್ಕೆ ಹೋಲಿಕೆ ಮಾಡಿದ್ದಾರೆ.

ಬ್ರಿಟೀಷರು ಭಾರತೀಯರನ್ನು ನಾಯಿಗಳೆಂದು ಕರೆದು ರೈಲಿನಿಂದ ಹೊರಗೆ ತಳ್ಳಿದ್ದ ನೋವು ಗಾಂಧಿ ಅವರಿಗೆ ಮಾತ್ರ ಅನುಭವಕ್ಕೆ ಬಂದಿತ್ತು. ಅಂತೆಯೇ ಧರ್ಮದ ಸೋಗಿನಲ್ಲಿ ಮಹಿಳೆಯರು ಹಾಗೂ ಶೂದ್ರರೆಡೆಗಿನ ಅವಮಾನಕಾರಿ ಹೇಳಿಕೆಗಳು ಅರ್ಥವಾಗೋದು ಅವರಿಗೆ ಮಾತ್ರವೇ ಎಂದು ಮೌರ್ಯ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. 

ಬಿಜೆಪಿಯ ಈ ಹಿಂದಿನ ಸರ್ಕಾರದಲ್ಲಿ ಮೌರ್ಯ ಸಚಿವರಾಗಿದ್ದರು. 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಅವರು ಎಸ್ ಪಿ ಸೇರ್ಪಡೆಯಾಗಿ ಫಾಜಿಲ್ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com