ಬಾಲ್ಯ ವಿವಾಹ ಪಿಡುಗು: ಹೇಳಿದಂತೆ ಮಾಡುತ್ತಿರುವ ಅಸ್ಸಾಂ ಸಿಎಂ; ಇದುವರೆಗೆ 1,800 ಜನರ ಬಂಧನ!

ಬಾಲ್ಯ ವಿವಾಹ ವಿರುದ್ಧ ಬೃಹತ್ ಶಿಸ್ತುಕ್ರಮ ಕೈಗೊಳ್ಳುತ್ತೇವೆ. ಅಪರಾಧಿಗಳನ್ನು ಬಂಧಿಸಿ ಬೃಹತ್ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದು ಅದರಂತೆ ಇದೀಗ 1,800 ಮಂದಿಯನ್ನು ಬಂಧಿಸಲಾಗಿದೆ.
ಹಿಮಂತ್ ಬಿಸ್ವಾ ಶರ್ಮಾ
ಹಿಮಂತ್ ಬಿಸ್ವಾ ಶರ್ಮಾ
Updated on

ಗುವಾಹಟಿ: ಬಾಲ್ಯ ವಿವಾಹ ವಿರುದ್ಧ ಬೃಹತ್ ಶಿಸ್ತುಕ್ರಮ ಕೈಗೊಳ್ಳುತ್ತೇವೆ. ಅಪರಾಧಿಗಳನ್ನು ಬಂಧಿಸಿ ಬೃಹತ್ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದು ಅದರಂತೆ ಇದೀಗ 1,800 ಮಂದಿಯನ್ನು ಬಂಧಿಸಲಾಗಿದೆ.

ಅಸ್ಸಾಂನಲ್ಲಿ ಕಳೆದ ಹದಿನೈದು ದಿನಗಳೊಳಗೆ 4,004 ಬಾಲ್ಯ ವಿವಾಹ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಮತ್ತು 14-18 ವರ್ಷದೊಳಗಿನ ವಿವಾಹಿತರನ್ನು ಬಾಲ್ಯ ವಿವಾಹ ನಿಷೇಧ ಕಾಯಿದೆ, 2006ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಇದುವರೆಗೆ ಅಸ್ಸಾಂ ಪೊಲೀಸರು ರಾಜ್ಯಾದ್ಯಂತ 4,004 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಪೊಲೀಸ್ ಕ್ರಮ ತೀವ್ರಗೊಳ್ಳುವ ಸಾಧ್ಯತೆಯಿದೆ. ಫೆಬ್ರವರಿ 3ರಿಂದ ಪ್ರಕರಣಗಳ ವಿಚಾರಣೆ ಆರಂಭವಾಗಲಿದ್ದು ಎಲ್ಲರೂ ಸಹಕರಿಸಬೇಕಾಗಿ ವಿನಂತಿ ಎಂದು ಟ್ವೀಟಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಮಾತನಾಡಿ ಇಲ್ಲಿಯವರೆಗೂ ಅಸ್ಸಾಂ ಪೊಲೀಸರು ರಾಜ್ಯಾದ್ಯಂತ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಇದುವರೆಗೆ 1,800 ಜನರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ತಿಂಗಳು ರಾಜ್ಯ ಸಚಿವ ಸಂಪುಟವು ಬಾಲ್ಯ ವಿವಾಹದ ಪಿಡುಗಿನ ವಿರುದ್ಧ ಬೃಹತ್ ಶಿಸ್ತುಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿತ್ತು. 

ಧುಬ್ರಿ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಗರಿಷ್ಠ ಪ್ರಕರಣಗಳು ದಾಖಲು
ಬಾಲ್ಯವಿವಾಹ ಕಾಯ್ದೆಯಡಿ ದಾಖಲಾದ ಈ 4004 ಪ್ರಕರಣಗಳ ಕುರಿತು ಮಾತನಾಡಿದರೆ 15 ಜಿಲ್ಲೆಗಳ ಪೈಕಿ ಧುಬ್ರಿ ಜಿಲ್ಲೆಯಲ್ಲಿ ಗರಿಷ್ಠ 370 ಪ್ರಕರಣಗಳು ದಾಖಲಾಗಿವೆ. ಕಮಿಷನರೇಟ್‌ನಲ್ಲಿ ಎರಡನೇ ಸಂಖ್ಯೆಯಲ್ಲಿ 192 ಮತ್ತು ಗೋಲ್‌ಪಾರಾ ಜಿಲ್ಲೆಯಲ್ಲಿ ಮೂರನೇ ಸಂಖ್ಯೆಯಲ್ಲಿ 157 ಪ್ರಕರಣಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com