ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ವಸ್ತುವಿನಿಂದ ತಯಾರಿಸಲಾದ ಜಾಕೆಟ್ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ
ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ವಸ್ತುವಿನಿಂದ ತಯಾರಿಸಲಾದ ಜಾಕೆಟ್ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ

ಪ್ಲಾಸ್ಟಿಕ್ ಬಾಟಲಿ ಮರುಬಕೆಯಿಂದ ತಯಾರಿಸಲಾದ ಜಾಕೆಟ್ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ತಿಗೆ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಿದ ವಸ್ತುಗಳಿಂದ ತಯಾರಿಸಿದ ತೋಳಿಲ್ಲದ ವಿಶೇಷ ಜಾಕೆಟ್ ಧರಿಸಿ ಬಂದಿದ್ದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ತಿಗೆ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಿದ ವಸ್ತುಗಳಿಂದ ತಯಾರಿಸಿದ ತೋಳಿಲ್ಲದ ವಿಶೇಷ ಜಾಕೆಟ್ ಧರಿಸಿ ಬಂದಿದ್ದರು.

ಬೆಳಿಗ್ಗೆ ರಾಜ್ಯಸಭೆಯಲ್ಲಿ ಕುಳಿತಿದ್ದಾಗ ಪ್ರಧಾನಿಯವರು ತಿಳಿ ನೀಲಿ ಬಣ್ಣದ 'ಸದ್ರಿ' ಹಾಫ್ ಜಾಕೆಟ್ ಅನ್ನು ಧರಿಸಿದ್ದರು.
ಮೋದಿ ಧರಿಸಿದ್ದ ಜಾಕೆಟ್ ಅನ್ನು ಏಕಬಳಕೆಯ ಪೆಟ್ ಬಾಟಲಿಗಳನ್ನು ಮರುಬಳಕೆ ಮಾಡಿದ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಭಾರತ ಇಂಧನ ಸಪ್ತಾಹ-2023’ಕ್ಕೆ ಫೆಬ್ರುವರಿ 06ರಂದು ಪ್ರಧಾನಿ ಮೋದಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಇಂಡಿಯನ್‌ ಆಯಿಲ್ ಕಾರ್ಪೋರೇಷನ್‌ (ಐಒಸಿ) ತಯಾರಿಸಿರುವ ಸೌರಶಕ್ತಿ ಆಧಾರಿತ ಕುಕ್‌ಟಾಪ್‌ ಹಾಗೂ ಬಳಸಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ತಯಾರಿಸಿರುವ ವಸ್ತ್ರಗಳನ್ನು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ನರೇಂದ್ರ ಮೋದಿಯವರಿಗೆ ಇಂಡಿಯನ್ ಆಯಿಲ್​ನ ಅಧ್ಯಕ್ಷರು ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಿಂದ ತಯಾರಿಸಿದ ಪೇಟ ಮತ್ತು ಹಾಫ್ ಕೋಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com