'ಮಹಿಳೆಯರು ಯಾವತ್ತಿಗೂ ಪುರುಷರಿಗಿಂತ ಹೆಚ್ಚು ಶ್ರೇಷ್ಠರು': ಕಿರಣ್ ಬೇಡಿ; 12 ಸಾಧಕಿಯರಿಗೆ TNIE ದೇವಿ ಪ್ರಶಸ್ತಿ ಪ್ರದಾನ

'ನೀವು ಮಹಿಳೆಗೆ ಏನು ಕೊಟ್ಟರೂ ಆಕೆ ಅದನ್ನು ಶ್ರೇಷ್ಠಗೊಳಿಸುತ್ತಾಳೆ' ಇದು ಮಾಜಿ ಪೊಲೀಸ್ ಅಧಿಕಾರಿ ಹಾಗೂ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಮಾತು. ನಿನ್ನೆ ಚೆನ್ನೈನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ದೇವಿ ಪ್ರಶಸ್ತಿಗಳ 23 ನೇ ಆವೃತ್ತಿಯಲ್ಲಿ 12 ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಏರ್ಪಡಿಸಿದ್ದ ದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರೊಂದಿಗೆ ಮಾಜಿ ಐಪಿಎಸ್ ಅಧಿಕಾರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಏರ್ಪಡಿಸಿದ್ದ ದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರೊಂದಿಗೆ ಮಾಜಿ ಐಪಿಎಸ್ ಅಧಿಕಾರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ

ಚೆನ್ನೈ: 'ನೀವು ಮಹಿಳೆಗೆ ಏನು ಕೊಟ್ಟರೂ ಆಕೆ ಅದನ್ನು ಶ್ರೇಷ್ಠಗೊಳಿಸುತ್ತಾಳೆ' ಇದು ಮಾಜಿ ಪೊಲೀಸ್ ಅಧಿಕಾರಿ ಹಾಗೂ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಮಾತು. ನಿನ್ನೆ ಚೆನ್ನೈನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ದೇವಿ ಪ್ರಶಸ್ತಿಗಳ 23 ನೇ ಆವೃತ್ತಿಯಲ್ಲಿ 12 ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಬ್ರಿಟಿಷ್ ನ ಖ್ಯಾತ ಬರಹಗಾರ ವಿಲಿಯಂ ಗೋಲ್ಡಿಂಗ್ ಅವರ ಪ್ರಸಿದ್ಧ ಉಲ್ಲೇಖವನ್ನು ಉಲ್ಲೇಖಿಸಿದ ಕಿರಣ್ ಬೇಡಿ, “ಮಹಿಳೆಯರು ತಾವು ಪುರುಷರಿಗೆ ಸಮಾನರು ಎಂದು ನಟಿಸಿದರೆ ಅದು ಮೂರ್ಖತನ ಎಂದು ನಾನು ಭಾವಿಸುತ್ತೇನೆ. ಮಹಿಳೆಯರು ಪುರುಷರಿಗಿಂತ ತುಂಬಾ ಶ್ರೇಷ್ಠರಾಗಿದ್ದಾರೆ ಮತ್ತು ಯಾವಾಗಲೂ ಹಾಗೆಯೇ ಇರುತ್ತಾರೆ. ನೀವು ಮಹಿಳೆಗೆ ಏನನ್ನು ಕೊಟ್ಟರೂ ಅವಳು ಅದನ್ನು ಹೆಚ್ಚಿಸುತ್ತಾಳೆ. ನೀವು ಅವಳಿಗೆ ವೀರ್ಯವನ್ನು ಕೊಟ್ಟರೆ, ಅವಳು ನಿಮಗೆ ಮಗುವನ್ನು ನೀಡುತ್ತಾಳೆ. ಅವಳಿಗೆ ಮನೆ ಕೊಟ್ಟರೆ ಮನೆ ಕೊಡುತ್ತಾಳೆ. ಅವಳಿಗೆ ದಿನಸಿ ಕೊಟ್ಟರೆ ಊಟ ಕೊಡುತ್ತಾಳೆ. ನೀವು ಅವಳಿಗೆ ಒಂದು ನಗು ಕೊಟ್ಟರೆ, ಅವಳು ನಿಮಗೆ ಅವಳ ಹೃದಯವನ್ನು ನೀಡುತ್ತಾಳೆ. ಅವಳು ತನಗೆ ಕೊಟ್ಟಿದ್ದನ್ನು ಗುಣಿಸಿ ಹಿಗ್ಗಿಸುತ್ತಾಳೆ.”

ಇದಕ್ಕೆ ತಮ್ಮ ಮಾತುಗಳನ್ನು ಸೇರಿಸಿದ ಕಿರಣ್ ಬೇಡಿ, "ನೀವು ಮಹಿಳೆಗೆ ಇಂಟರ್ನೆಟ್ ನೀಡಿದರೆ, ಅವಳು ಉದ್ಯಮವನ್ನು ರಚಿಸುತ್ತಾಳೆ, ನೀವು ನನಗೆ 14 ವರ್ಷ ವಯಸ್ಸಿನಲ್ಲಿದ್ದಾಗ NCC ಸಮವಸ್ತ್ರವನ್ನು ನೀಡಿದ್ದಿರಿ,  ನಾನು ಅದನ್ನು IPS ಸಮವಸ್ತ್ರವಾಗಿ ಪರಿವರ್ತಿಸಿದೆ" ಎಂದು ಹೇಳಿದರು. ವಿನಯದಿಂದ ಧೈರ್ಯವನ್ನು ಜಾಗೃತಗೊಳಿಸುವ ಪ್ರತಿಯೊಬ್ಬ ಮಹಿಳೆ ದುರ್ಗೆ, ತನ್ನಲ್ಲಿ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿಯೊಬ್ಬ ಮಹಿಳೆ ಕಾಳಿ, ಭಕ್ತಿಯು ಪಾರ್ವತಿ, ತನ್ನೊಳಗೆ ಪೋಷಿಸುವ ಅನ್ನಪೂರ್ಣೆ, ಪ್ರತಿಯೊಬ್ಬ ಮಹಿಳೆಯ ಸ್ನೇಹಿತೆ ಶಕ್ತಿ, ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ದೇವಿ ಎಂದು ಮಹಿಳೆಯನ್ನು ದೈವ ಸ್ವರೂಪಕ್ಕೆ ಹೋಲಿಸಿ ಕಿರಣ್ ಬೇಡಿ ಗುಣಗಾನ ಮಾಡಿದರು. 

ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು TNIEಯ ಸಿಇಒ ಲಕ್ಷ್ಮಿ ಮೆನನ್ ಸ್ವಾಗತಿಸಿದರು. ಇದು ನಾಲ್ಕನೇ ಬಾರಿಗೆ ದೇವಿ ಪ್ರಶಸ್ತಿಗಳನ್ನು ಚೆನ್ನೈನಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ದೇವಿ ಪ್ರಶಸ್ತಿಗಳು ತಮ್ಮ ಕೆಲಸದಲ್ಲಿ ಚೈತನ್ಯ ಮತ್ತು ಹೊಸತನವನ್ನು ಪ್ರದರ್ಶಿಸುವ ಅಸಾಧಾರಣ ಮಹಿಳೆಯರನ್ನು ಗುರುತಿಸಿ ನೀಡಲಾಗುತ್ತದೆ ಎಂದರು. 

ಈ ವರ್ಷದ ದೇವಿ ಪ್ರಶಸ್ತಿ ಆವೃತ್ತಿಯನ್ನು ಅದಾನಿ ಗ್ರೂಪ್, ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಅಹುಜಾಸನ್ಸ್ ಪ್ರಾಯೋಜಿಸಿದೆ. ದೇವಿ ಪ್ರಶಸ್ತಿಯನ್ನು ಡಿಸೆಂಬರ್ 2014 ರಲ್ಲಿ ಆರಂಭಿಸಲಾಯಿತು, ಮೊದಲ ಆವೃತ್ತಿಯನ್ನು ದೆಹಲಿಯಲ್ಲಿ ನಡೆಸಲಾಯಿತು. ಅಂದಿನಿಂದ, ದೇಶಾದ್ಯಂತ 200 ಕ್ಕೂ ಹೆಚ್ಚು ಗಮನಾರ್ಹ ಮಹಿಳೆಯರು ದೇವಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. 

12 ಮಂದಿ ದೇವಿ ಪ್ರಶಸ್ತಿ ಪುರಸ್ಕೃತರು: 
ಡಾ ನಂದಿತಾ ಕೃಷ್ಣ: ಇತಿಹಾಸಗಾರ್ತಿ ಮತ್ತು ಲೇಖಕಿ
ಚೆನ್ನೈ ಮೂಲದ ಪರಿಸರವಾದಿ, ಇತಿಹಾಸಗಾರ್ತಿ ಮತ್ತು ಲೇಖಕಿ ನಂದಿತಾ ಕೃಷ್ಣ ಅವರು ಕುರುಂಬ ಕಲೆ, ಕೋಟಾ ಕುಂಬಾರಿಕೆ, ಮಾಮಲ್ಲಪುರಂನ ಸಾಂಪ್ರದಾಯಿಕ ಕಲೆಗಳ ಪುನರುಜ್ಜೀವನಕ್ಕಾಗಿ ಮತ್ತು ಶಾಲೆಗಳಲ್ಲಿ ತಮಿಳು ಜಾನಪದ ಕಲೆಯನ್ನು ಪರಿಚಯಿಸಲು ಶ್ರಮಿಸಿದ್ದಾರೆ. ಅವರು 23 ಪುಸ್ತಕಗಳನ್ನು ಬರೆದಿದ್ದಾರೆ. ಭಾರತದ ಪರಿಸರ ಪರಂಪರೆಯ ದಾಖಲಾತಿಯನ್ನು ಪ್ರವರ್ತಿಸಿದ್ದಾರೆ.

ವಿದ್ಯಾ ಸುಬ್ರಮಣಿಯನ್: ಕರ್ನಾಟಕ ಸಂಗೀತ ಗಾಯಕಿ
ವಿದ್ಯಾ ಸುಬ್ರಮಣಿಯನ್ ಅವರು ಮೇಸ್ಟ್ರೋ ಲಾಲ್ಗುಡಿ ಜಯರಾಮನ್ ಅವರ ಶಿಷ್ಯೆ, ವಿದ್ಯಾ ಸುಬ್ರಮಣಿಯನ್ ಅಕಾಡೆಮಿಯ ಸಂಸ್ಥಾಪಕರಾಗಿದ್ದಾರೆ, ಇದು ಒಂದು ದಶಕದಿಂದ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತ ಮತ್ತು ಇತರ ಸಾಂಪ್ರದಾಯಿಕ ಭಾರತೀಯ ಕಲೆಗಳಲ್ಲಿ ತರಬೇತಿಯನ್ನು ನೀಡುತ್ತಿದೆ. 

ವಿಶಾಖ ಹರಿ: ಗಾಯಕ
ಕಲೈಮಾಮಣಿ ವಿಶಾಖ ಹರಿ ಅವರು ಪುರಾತನ ಕಲಾ ಪ್ರಕಾರವಾದ ಹರಿಕಥೆ ಅಥವಾ ಕಥಾ ಕೀರ್ತನದ ಅಭ್ಯಾಸಿ. ಅವರು ಹಿಂದಿನ ವರ್ಷಗಳ ಶ್ರೇಷ್ಠ ಸಂಯೋಜಕರ ಹಾಡುಗಳೊಂದಿಗೆ ಮೌಲ್ಯಗಳ ಕಥೆಗಳನ್ನು ಹೆಣೆಯುತ್ತಾರೆ. ಸಂಗೀತ ಮತ್ತು ಕಥೆಯನ್ನು ಬೆರೆಸಿ ಪ್ರಪಂಚದಾದ್ಯಂತ ಪ್ರೀತಿ ಮತ್ತು ಶಾಂತಿಯ ಸಂದೇಶಗಳನ್ನು ಹರಡುತ್ತಾರೆ.

ಡಾ ಗಗನ್‌ದೀಪ್ ಕಾಂಗ್: ವೈದ್ಯ ಮತ್ತು ವಿಜ್ಞಾನಿ
ಗಗನ್‌ದೀಪ್ ಕಾಂಗ್ ಅವರು ಪ್ರಸ್ತುತ ಲಸಿಕೆಗಳು ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಕೆಲಸ ಮಾಡುತ್ತಿದ್ದಾರೆ, ಭಾರತದಲ್ಲಿ ಮಕ್ಕಳ ಮತ್ತು ಕರುಳಿನ ಸಾಂಕ್ರಾಮಿಕ ರೋಗಗಳ ಮೇಲೆ ಒತ್ತು ನೀಡುತ್ತಾರೆ. ಎಂಟರ್ಟಿಕ್ ಸೋಂಕುಗಳ ಪ್ರಸರಣ, ಅಭಿವೃದ್ಧಿ ಮತ್ತು ತಡೆಗಟ್ಟುವಿಕೆ ಮತ್ತು ಮಕ್ಕಳಲ್ಲಿ ಅವುಗಳ ಪರಿಣಾಮಗಳ ಕುರಿತಾದ ಅವರ ಸಂಶೋಧನೆಯು ರೋಗಗಳ ತಡೆಗಟ್ಟುವಿಕೆಗೆ ಹೊಸ ಒಳನೋಟಗಳಿಗೆ ಕಾರಣವಾಗಿದೆ.

ರಾಧಿಕಾ ಸಂತಾನಕೃಷ್ಣನ್: ಸಮಾಜ ಸೇವಕಿ 
ರಾಧಿಕಾ ಸಂತಾನಕೃಷ್ಣನ್ ಅವರು ತಮ್ಮ ಜೀವನವನ್ನು ದೊಡ್ಡ ಸಾಮಾಜಿಕ ಉದ್ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಡಾ ಸೆಲ್ವಿ ರಾಧಾಕೃಷ್ಣ ಅವರ ಬೆಂಬಲದೊಂದಿಗೆ ಶ್ರೀ ಧನ್ವಂತ್ರಿ ಟ್ರಸ್ಟ್‌ನ ಪೆನ್ ನಾಲಂ ಎಂಬ ಘಟಕವನ್ನು ಪ್ರಾರಂಭಿಸಿದ್ದಾರೆ. ಸ್ತನ, ಗರ್ಭಕಂಠ ಮತ್ತು ಬಾಯಿಯ ಕ್ಯಾನ್ಸರ್‌ಗಳ ಅರಿವು ಮತ್ತು ಚಿಕಿತ್ಸೆಯಲ್ಲಿ ಅವರು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ

ಡಾ ಪಿ ಪೂರ್ಣ ಚಂದ್ರಿಕಾ: ವೈದ್ಯಕೀಯ ವೃತ್ತಿಪರ
ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‌ನಲ್ಲಿ ಮನೋವೈದ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಪಿ ಪೂರ್ಣಾ ಚಂದ್ರಿಕಾ ಅವರು ಜನರೊಂದಿಗೆ ಸೌಹಾರ್ದಯುತ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಮಾದರಿ ವ್ಯಕ್ತಿಯಾಗಿ ಪರಿವರ್ತನೆಗೊಂಡಿದ್ದಾರೆ. ವಿಕಲಚೇತನ ರೋಗಿಗಳ ಅಗತ್ಯತೆಗಳ ಬಗ್ಗೆ ತೀವ್ರವಾಗಿ ಗಮನ ಹರಿಸುತ್ತಾರೆ

ವಿಜಯಲಕ್ಷ್ಮಿ ನಾಚಿಯಾರ್: ವಾಣಿಜ್ಯೋದ್ಯಮಿ
ವಿಜಯಲಕ್ಷ್ಮಿ ನಾಚಿಯಾರ್ ಅವರು ಅಪ್ಪಾಚಿ ಇಕೋ-ಲಾಜಿಕ್ ಕಾಟನ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಸಾವಯವ ಮತ್ತು ಸಮರ್ಥನೀಯ ಫಾರ್ಮ್-ಟು-ಫ್ಯಾಶನ್ ಬ್ರ್ಯಾಂಡ್ ಎಥಿಕಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಜವಳಿ ಬಗ್ಗೆ ಒಲವು ಹೊಂದಿರುವ ಅವರು ಭಾರತದ ಅತ್ಯುತ್ತಮ ಕೈಮಗ್ಗ ಸಂಪ್ರದಾಯದ ತಯಾರಿಕೆ ಮತ್ತು ಪುನರುಜ್ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಿಯದರ್ಶಿನಿ ಗೋವಿಂದ್: ನೃತ್ಯಗಾರ್ತಿ 
ಪ್ರಿಯದರ್ಶಿನಿ ಗೋವಿಂದ್ ಅವರು ಪ್ರಸ್ತುತ ಪೀಳಿಗೆಯ ಭರತನಾಟ್ಯ ನೃತ್ಯಗಾರರಲ್ಲಿ ಅಗ್ರಗಣ್ಯರು. ಸಂಪ್ರದಾಯದ ಅನುಸರಣೆಗೆ ಹೆಸರುವಾಸಿಯಾದ ನೃತ್ಯಗಾರ್ತಿ. ಸಾಂಪ್ರದಾಯಿಕವಾಗಿ ಹೊಸ ನೃತ್ಯ ಸಂಯೋಜನೆಯನ್ನು ಸಂಯೋಜಿಸುತ್ತಾರೆ, ಆ ಮೂಲಕ ಭರತನಾಟ್ಯದ ಎಲ್ಲೆಗಳನ್ನು ನಿಧಾನವಾಗಿ ಮರು ವ್ಯಾಖ್ಯಾನಿಸುತ್ತಾರೆ

ಜೋಷ್ನಾ ಚಿನಪ್ಪ: ಕ್ರೀಡಾಪಟು
ಭಾರತೀಯ ಮಹಿಳಾ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನಪ್ಪ ಅವರು 2003 ರಲ್ಲಿ 19 ವರ್ಷದೊಳಗಿನವರ ವಿಭಾಗದಲ್ಲಿ ಬ್ರಿಟಿಷ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 2022 ರಲ್ಲಿ ಅವರು ಅನಾಹತ್ ಸಿಂಗ್ ಅವರನ್ನು ಸೋಲಿಸಿ ದಾಖಲೆಯ 19 ನೇ ಬಾರಿಗೆ ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದರು. 

ಡಾ ರಮ್ಯಾ ಎಸ್ ಮೂರ್ತಿ: ಉದ್ಯಮಿ
ಡಾ ರಮ್ಯಾ ಎಸ್ ಮೂರ್ತಿ ಅವರು ಚೆನ್ನೈನ ನಿಮಾಯಾ ರೋಬೋಟಿಕ್ಸ್ ಸಂಸ್ಥಾಪಕರು ಮತ್ತು ನಿರ್ದೇಶಕರು.  ಐಒಟಿ-ಆಧಾರಿತ ಕ್ಲೌಡ್-ಮಾನಿಟರ್ಡ್ ಸಾಧನ ಮತ್ತು ತರಬೇತಿ ವಿಧಾನವನ್ನು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಹೊಂದಿರುವ ಮಕ್ಕಳಲ್ಲಿ ಕಲಿಕೆಯ ದರವನ್ನು ಶೇಕಡಾ 60ಕ್ಕಿಂತ ಹೆಚ್ಚು ವೇಗಗಳೊಸುವಲ್ಲಿ ತೊಡಗಿದ್ದಾರೆ.

ಅನುರಾಧಾ ಕೃಷ್ಣಮೂರ್ತಿ ಮತ್ತು ನಮ್ರತಾ ಸುಂದರೇಶನ್: ಉದ್ಯಮಿಗಳು
ಅನುರಾಧಾ ಕೃಷ್ಣಮೂರ್ತಿ ಅವರು ಎರಡು ದಶಕಗಳ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಂಗವಿಕಲರ (PWD) ಉದ್ಯೋಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉಪಕ್ರಮಗಳನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಂಗವಿಕಲರಿಗಾಗಿ ಕೌಶಲ್ಯ ಅಭಿವೃದ್ಧಿ ಉಪಕ್ರಮವಾದ ಕ್ಯಾನ್ ಡು ಮುಖ್ಯಸ್ಥರಾಗಿದ್ದಾರೆ. ನಮ್ರತಾ ಸುಂದರೇಶನ್ ಅವರು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದು, ಈಗ ನೈಸರ್ಗಿಕ ಚೀಸ್ ತಯಾರಿಕೆಯಲ್ಲಿ ಶಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com