ದೇಶದ 25 ಹೈಕೋರ್ಟ್ ಗಳಲ್ಲಿ ಸುಮಾರು 60 ಲಕ್ಷ, ಸುಪ್ರೀಂ ಕೋರ್ಟ್ ನಲ್ಲಿ 69 ಸಾವಿರ ಪ್ರಕರಣ ಬಾಕಿ: ಕೇಂದ್ರ ಸರ್ಕಾರ

ಸುಪ್ರೀಂ ಕೋರ್ಟ್ ನಲ್ಲಿ ಸುಮಾರು 69,000 ಕೇಸ್ ಗಳು ಬಾಕಿಯಿದ್ದರೆ, ದೇಶದ 25 ಹೈಕೋರ್ಟ್ ಗಳಲ್ಲಿ  60 ಲಕ್ಷ ಪ್ರಕರಣಗಳು ಇತ್ಯರ್ಥವಾಗಬೇಕಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಸುಮಾರು 69,000 ಕೇಸ್ ಗಳು ಬಾಕಿಯಿದ್ದರೆ, ದೇಶದ 25 ಹೈಕೋರ್ಟ್ ಗಳಲ್ಲಿ  60 ಲಕ್ಷ ಪ್ರಕರಣಗಳು ಇತ್ಯರ್ಥವಾಗಬೇಕಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 

ಸುಪ್ರೀಂಕೋರ್ಟ್ ವೆಬ್ ಸೈಟ್ ನಲ್ಲಿನ ವಿವರಗಳನ್ನು ಉಲ್ಲೇಖಿಸಿ, ಫೆಬ್ರವರಿ 1ರವರೆಗೂ ಸುಪ್ರೀಂಕೋರ್ಟ್ ನಲ್ಲಿ ಸುಮಾರು 69, 511 ಕೇಸ್ ಗಳು ಬಾಕಿ ಇರುವುದಾಗಿ ಕಾನೂನು ಸಚಿವ ಕಿರಣ್ ರಿಜಿಜು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. 

ಫೆಬ್ರವರಿ 1, 2023 ರಂದು ರಾಷ್ಟ್ರೀಯ  ನ್ಯಾಯಾಂಗ ಮಾಹಿತಿ ಗ್ರೀಡ್ (ಎನ್ ಜೆಡಿಸಿ)ಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ದೇಶಾದ್ಯಂತ ಹೈಕೋರ್ಟ್ ಗಳಲ್ಲಿ 59, 87,477 ಕೇಸ್ ಗಳು ಬಾಕಿಯಿವೆ ಎಂದು ಅವರು ತಿಳಿಸಿದರು. 

ಈ ಪೈಕಿ ದೇಶದ ಅತ್ಯಂತ ದೊಡ್ಡ ಹೈಕೋರ್ಟ್ ಅಲಹಾಬಾದ್ ಹೈಕೋರ್ಟ್ ನಲ್ಲಿ 10. 30 ಲಕ್ಷ ಕೇಸ್ ಗಳು ಬಾಕಿ ಉಳಿದಿವೆ. ಸಿಕ್ಕಿಂ ಹೈಕೋರ್ಟ್ ನಲ್ಲಿ ಕನಿಷ್ಠ 171 ಕೇಸ್ ಗಳು ಬಾಕಿಯಿವೆ.

ಬಾಕಿ ಪ್ರಕರಣಗಳ ವಿಲೇವಾರಿಗೆ ಪೂರಕ ವಾತವಾರಣ ನಿರ್ಮಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ರಿಜಿಜು ಸದನಕ್ಕೆ ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com