ನಿವೃತ್ತ ನ್ಯಾಯಮೂರ್ತಿ ಸೈಯದ್ ಅಬ್ದುಲ್ ನಜೀರ್
ನಿವೃತ್ತ ನ್ಯಾಯಮೂರ್ತಿ ಸೈಯದ್ ಅಬ್ದುಲ್ ನಜೀರ್

ರಾಜ್ಯಪಾಲರಾಗಿ ಅಬ್ದುಲ್‌ ನಜೀರ್ ನೇಮಕ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ: ಕಾಂಗ್ರೆಸ್

ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್‌ ಅಬ್ದುಲ್‌ ನಜೀರ್‌ ಅವರನ್ನು ನೇಮಿಸಿರುವ ಕುರಿತು ಕಾಂಗ್ರೆಸ್‌, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. 

ನವದೆಹಲಿ: ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್‌ ಅಬ್ದುಲ್‌ ನಜೀರ್‌ ಅವರನ್ನು ನೇಮಿಸಿರುವ ಕುರಿತು ಕಾಂಗ್ರೆಸ್‌, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತನ್ನದೇ ಆದ ದಿವಂಗತ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆಯನ್ನು ನೆನಪಿಸಿದ್ದು, ಅವರು "ನಿವೃತ್ತಿ ನಂತರ ದೊರಕುವ ಹುದ್ದೆಗಳು, ನಿವೃತ್ತಿಗೂ ಮೊದಲು ನೀಡಲಾಗುವ ತೀರ್ಪುಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಿದ್ದರು.

“ನಿಮ್ಮ(ಬಿಜೆಪಿ) ಉನ್ನತ ನಾಯಕರಲ್ಲಿ ಒಬ್ಬರಾದ ಅರುಣ್ ಜೇಟ್ಲಿ ಅವರು, ಸೆಪ್ಟೆಂಬರ್ 5, 2013 ರಂದು ಸದನದಲ್ಲಿ ಮತ್ತು ಹೊರಗೆ ಹಲವಾರು ಬಾರಿ ನಿವೃತ್ತಿಯ ನಂತರದ ಹುದ್ದೆಯ ಬಯಕೆಯು ನಿವೃತ್ತಿಯ ಪೂರ್ವ ತೀರ್ಪುಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಿದ್ದರು. ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬಿಜೆಪಿ, ಈ ಹಿಂದೆಯೂ ಇದೇ ರೀತಿಯ ನೇಮಕಾತಿಗಳನ್ನು ಮಾಡಲಾಗಿದೆ. “ಮಾಜಿ ನ್ಯಾಯಾಧೀಶರು ಲೆಕ್ಕವಿಲ್ಲದಷ್ಟು ಬಾರಿ ವಿವಿಧ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. ನಿವೃತ್ತಿಯ ನಂತರ ನ್ಯಾಯಾಧೀಶರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡುವುದರ ವಿರುದ್ಧ ನಮ್ಮ ಸಂವಿಧಾನವು ಏನನ್ನೂ ಹೇಳುವುದಿಲ್ಲ ಎಂದು ಬಿಜೆಪಿ ಮುಖ್ಯ ವಕ್ತಾರ ಅನಿಲ್ ಬಲುನಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com