ಗೋದಾವರಿ ಎಕ್ಸ್ ಪ್ರೆಸ್ ರೈಲು
ದೇಶ
ತೆಲಂಗಾಣ: ಹಳಿತಪ್ಪಿದ ಗೋದಾವರಿ ಎಕ್ಸ್ ಪ್ರೆಸ್ ರೈಲು
ವಿಶಾಖಪಟ್ಟಣಂ-ಸಿಕಂದರಾಬಾದ್ ನಡುವೆ ಸಂಚರಿಸುತ್ತಿದ್ದ ಗೋದಾವರಿ ಎಕ್ಸ್ ಪ್ರೆಸ್ ರೈಲು ಹೈದರಾಬಾದ್ ಬಳಿ ಹಳಿತಪ್ಪಿದೆ.
ವಿಶಾಖಪಟ್ಟಣಂ-ಸಿಕಂದರಾಬಾದ್ ನಡುವೆ ಸಂಚರಿಸುತ್ತಿದ್ದ ಗೋದಾವರಿ ಎಕ್ಸ್ ಪ್ರೆಸ್ ರೈಲು ಹೈದರಾಬಾದ್ ಬಳಿ ಹಳಿತಪ್ಪಿದೆ.
ಬಿಬಿನಗರ್-ಘಟ್ಕೆಸರ್ ನಡುವೆ ಹಳಿತಪ್ಪಿದ್ದು, ಅದೃಷ್ಟವಶಾತ್ ಈ ವರೆಗೂ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ.
ಅಧಿಕಾರಿಗಳ ಮಾಹಿತಿಯ ಪ್ರಕಾರ, ಎಸ್-1, ಎಸ್-4 ಜಿಎಸ್ ಹಾಗೂ ಎಸ್ಎಲ್ಆರ್ ಕೋಚ್ ಗಳು ಹಳಿತಪ್ಪಿದ್ದು, ಪ್ರಯಾಣಿಕರಿಗೆ ಗಾಯಗಳು ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಘಟನೆ ಬೆನ್ನಲ್ಲೇ ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಸಲಾಗಿದ್ದು, ಎಸ್ ಸಿಆರ್ ಪ್ರಯಾಣಿಕರ ಬಗ್ಗೆ ಮಾಹಿತಿಗಾಗಿ ಹೆಲ್ಪ್ ಲೈನ್ ನಂಬರ್ 040 27786666 ನ್ನು ಪ್ರಾರಂಭಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ