ಚರ್ಚ್‌ಗಳ ಮೇಲಿನ ದಾಳಿ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕ್ರೈಸ್ತರಿಂದ ಪ್ರತಿಭಟನೆ

ದೇಶದ ವಿವಿಧ ಭಾಗಗಳಲ್ಲಿ ಚರ್ಚುಗಳ ಮೇಲಿನ ದಾಳಿ, ಹಿಂಸಾಚಾರ ಮತ್ತು ಕ್ರೈಸ್ತರ ಬಂಧನ ಖಂಡಿಸಿ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಭಾನುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.
ಕ್ರೈಸ್ತರಿಂದ ಪ್ರತಿಭಟನೆ
ಕ್ರೈಸ್ತರಿಂದ ಪ್ರತಿಭಟನೆ
Updated on

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಚರ್ಚುಗಳ ಮೇಲಿನ ದಾಳಿ, ಹಿಂಸಾಚಾರ ಮತ್ತು ಕ್ರೈಸ್ತರ ಬಂಧನ ಖಂಡಿಸಿ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಭಾನುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.

"ಜನರನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ. ಚರ್ಚ್‌ಗಳ ಮೇಲೆ ದಾಳಿ ಮಾಡಲಾಗುತ್ತಿದೆ, ನಮ್ಮ ಜನರನ್ನು ಥಳಿಸಲಾಗುತ್ತಿದೆ ಮತ್ತು ಬಂಧಿಸಲಾಗುತ್ತಿದೆ. ಇದರಿಂದ ಕ್ರೈಸ್ತರು ಭಯಭೀತರಾಗಿದ್ದಾರೆ" ಎಂದು ಉತ್ತರ ಪ್ರದೇಶದ ಸ್ಟೀವನ್ ಅವರು ಹೇಳಿದ್ದಾರೆ.

2021 ರಲ್ಲಿ ದೇಶದಲ್ಲಿ ನಮ್ಮ ಸಮುದಾಯದ ಸದಸ್ಯರ ಮೇಲೆ 525 ದೌರ್ಜನ್ಯ ಪ್ರಕರಣಗಳು ಮತ್ತು 2022 ರಲ್ಲಿ 600 ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂದು ಅವರು ತಿಳಿಸಿದರು.

"ಉತ್ತರ ಪ್ರದೇಶದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 2020 ರಲ್ಲಿ 70 ಇತ್ತು. ಆದರೆ 2022 ರಲ್ಲಿ ಅದು 183 ಕ್ಕೆ ಏರಿಕೆಯಾಗಿದೆ" ಎಂದು ಅವರು ಹೇಳಿದ್ದಾರೆ.

ಬಲವಂತದ ಮತಾಂತರದ ಆರೋಪದ ಮೇಲೆ ರಾಜ್ಯ ಪೊಲೀಸರು ಜನರನ್ನು ಬಂಧಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಫತೇಪುರ ನಿವಾಸಿ ಶಿವಪಾಲ್ ಅವರು ಆರೋಪಿಸಿದ್ದಾರೆ.

"ಛತ್ತೀಸ್‌ಗಢ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಇತರ ಹಲವು ರಾಜ್ಯಗಳಲ್ಲಿ ಚರ್ಚ್‌ಗಳ ಮೇಲೆ ದಾಳಿ ಮಾಡಲಾಗುತ್ತಿದೆ ಮತ್ತು ನಮ್ಮ ಸಮುದಾಯದವರಿಗೆ ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ ಅವರ ವಿರುದ್ಧ ಸುಳ್ಳು ಆರೋಪಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ನಾವು ನಮ್ಮ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಇಲ್ಲಿಗೆ ಬಂದಿದ್ದೇವೆ" ಎಂದು ದೆಹಲಿಯ ಪಂಜಾಬಿ ಬಾಗ್‌ ನಿವಾಸಿ ಪೂನಂ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com