ಛತ್ತೀಸ್‌ಗಢದಲ್ಲಿ ಗುಂಪು ಘರ್ಷಣೆ: ಮತಾಂತರ ವಿರೋಧಿಸಿ ಚರ್ಚ್‌ಗಳಿಗೆ ಹಾನಿ, ಕಲ್ಲು ತೂರಾಟದಲ್ಲಿ ಎಸ್‌ಪಿಗೆ ಗಾಯ

ರಾಯ್‌ಪುರದಿಂದ ದಕ್ಷಿಣಕ್ಕೆ 350 ಕಿಮೀ ದೂರದಲ್ಲಿರುವ ಮಾವೋವಾದಿ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ಸೋಮವಾರ ನಡೆದ ಕಲ್ಲು ತೂರಾಟದಲ್ಲಿ ಪ್ರಮುಖ ಕ್ಯಾಥೋಲಿಕ್ ಚರ್ಚ್ ಅನ್ನು ಧ್ವಂಸಗೊಳಿಸಲಾಯಿತು ಮತ್ತು ಪ್ರತಿಭಟನಾಕಾರರ ಗುಂಪನ್ನು ತಡೆಯಲು ಯತ್ನಿಸಿದ ಪೊಲೀಸ್ ವರಿಷ್ಠಾಧಿಕಾರಿ ಸದಾನಂದ್ ಕುಮಾರ್ ಅವರ ತಲೆಗೆ ಗಾಯವಾಗಿದೆ.
ಧ್ವಂಸಗೊಂಡಿರುವ ಚರ್ಚ್ ಮತ್ತು ಗಾಯಗೊಂಡಿರುವ ಎಸ್‌ಪಿ ಸದಾನಂದ್ ಕುಮಾರ್
ಧ್ವಂಸಗೊಂಡಿರುವ ಚರ್ಚ್ ಮತ್ತು ಗಾಯಗೊಂಡಿರುವ ಎಸ್‌ಪಿ ಸದಾನಂದ್ ಕುಮಾರ್
Updated on

ರಾಯ್‌ಪುರ: ರಾಯ್‌ಪುರದಿಂದ ದಕ್ಷಿಣಕ್ಕೆ 350 ಕಿಮೀ ದೂರದಲ್ಲಿರುವ ಮಾವೋವಾದಿ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ಸೋಮವಾರ ನಡೆದ ಕಲ್ಲು ತೂರಾಟದಲ್ಲಿ ಪ್ರಮುಖ ಕ್ಯಾಥೋಲಿಕ್ ಚರ್ಚ್ ಅನ್ನು ಧ್ವಂಸಗೊಳಿಸಲಾಯಿತು ಮತ್ತು ಪ್ರತಿಭಟನಾಕಾರರ ಗುಂಪನ್ನು ತಡೆಯಲು ಯತ್ನಿಸಿದ ಪೊಲೀಸ್ ವರಿಷ್ಠಾಧಿಕಾರಿ ಸದಾನಂದ್ ಕುಮಾರ್ ಅವರ ತಲೆಗೆ ಗಾಯವಾಗಿದೆ. ಅಲ್ಲದೆ, ಪ್ರತಿಭಟನಾಕಾರರಿಂದ ಎರಡು ಸಣ್ಣ ಚರ್ಚ್‌ಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.

ಗಾಯಗೊಂಡ ಎಸ್‌ಪಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ನಾರಾಯಣಪುರದಲ್ಲಿ ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದ ಒಂದೆರಡು ಜಿಲ್ಲೆಗಳಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಜಿಲ್ಲೆಯಲ್ಲಿ ಉದ್ವಿಗ್ನತೆ ನೆಲೆಸಿರುವ ಹಿನ್ನೆಲೆಯಲ್ಲಿ ಬಸ್ತಾರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪಿ ಅವರು ಪ್ರದೇಶಕ್ಕೆ ಧಾವಿಸಿದರು.
ದಾಳಿಯಲ್ಲಿ ಕೆಲ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಬುಡಕಟ್ಟು ಗುಂಪಾದ ಆದಿವಾಸಿ ಸಮಾಜವು, ನಾರಾಯಣಪುರದ ಹಳ್ಳಿಗಳಲ್ಲಿ ಧಾರ್ಮಿಕ ಮತಾಂತರ ಮತ್ತು ಸಣ್ಣ ಘರ್ಷಣೆಗಳ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಯೋಜಿಸಿತ್ತು.

'ನಾರಾಯಣಪುರದಲ್ಲಿ ಆಯೋಜಿಸಿದ್ದ ತಮ್ಮ ಪ್ರತಿಭಟನೆಯಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಲು ನಾನು ಮತ್ತು ಜಿಲ್ಲಾಧಿಕಾರಿಗಳು ಮುಖಂಡರನ್ನು ಕೇಳಿಕೊಂಡರೂ ಆದಿವಾಸಿ ಸಮಾಜದ ಪ್ರತಿಭಟನಾ ರ್ಯಾಲಿ ಒರಟಾಯಿತು. ಚರ್ಚ್ ಅನ್ನು ಧ್ವಂಸಗೊಳಿಸುವುದನ್ನು ತಡೆಯಲು ಮತ್ತು ಯಾವುದೇ ಅಹಿತಕರ ಘಟನೆಯನ್ನು ತಡೆಯಲು ನಾನು ಮತ್ತು ನನ್ನ ತಂಡ ಮುಂದಾದೆವು. ಆದರೆ, ಯಾರೋ ನನ್ನ ಮೇಲೆ ಕಲ್ಲು ತೂರಿದರು. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾ ಪೊಲೀಸ್‌ ಮುಖ್ಯಸ್ಥ ಕುಮಾರ್‌ ತಿಳಿಸಿದ್ದಾರೆ.

'ತಮ್ಮ ಪ್ರತಿಭಟನೆಯಿಂದ ಯಾವುದೇ ಕಾನೂನು ಸುವ್ಯವಸ್ಥೆ ಹದಗೆಡುವುದಿಲ್ಲ ಎಂದು ಆದಿವಾಸಿ ಸಮಾಜದ ಮುಖಂಡರು ಜಿಲ್ಲಾಡಳಿತಕ್ಕೆ ಭರವಸೆ ನೀಡಿದ್ದರು. ಆದರೆ, 'ಅವರ ಭರವಸೆಯ ಹೊರತಾಗಿಯೂ ಹಿಂಸಾತ್ಮಕ ಘಟನೆ ಸಂಭವಿಸಿದೆ. ಸತ್ಯಾಂಶ ಸಂಗ್ರಹಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಚರ್ಚ್‌ಗಳು ಮತ್ತು ವಾಸಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ' ಎಂದು ನಾರಾಯಣಪುರ ಕಲೆಕ್ಟರ್ ಅಜೀತ್ ವಸಂತ್ ತಿಳಿಸಿದ್ದಾರೆ.

ಶಾಂತಿಯುತ ಬುಡಕಟ್ಟು ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ಪದೇ ಪದೇ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರವನ್ನು ಪ್ರತಿಪಕ್ಷ ಬಿಜೆಪಿ ಟೀಕಿಸಿದೆ. ಶಾಂತಿ ಕದಡಲು ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.

'ಬಿಜೆಪಿಗೆ ಸಮಸ್ಯೆಗಳ ಕೊರತೆ ಇರುವಲ್ಲಿ ಅವರು ಕೋಮು ಕಾರ್ಡ್ ಅವರು ಬಳಸುತ್ತಾರೆ' ಎಂದು ಕಾಂಗ್ರೆಸ್ ವಕ್ತಾರ ಸುಶೀಲ್ ಆನಂದ್ ಶುಕ್ಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com