ಭಾರತದಲ್ಲಿ ಶೀಘ್ರದಲ್ಲೇ ಡಿಜಿಟಲ್ ವಹಿವಾಟು ನಗದು ವಹಿವಾಟು ಮೀರಿ ಬೆಳೆಯಲಿದೆ: ಪ್ರಧಾನಿ ಮೋದಿ

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ದೇಶದಲ್ಲಿ ಹೆಚ್ಚು ಆದ್ಯತೆಯ ಪಾವತಿ ಕಾರ್ಯವಿಧಾನವಾಗುತ್ತಿರುವುದರಿಂದ ಡಿಜಿಟಲ್ ವಹಿವಾಟು ಶೀಘ್ರದಲ್ಲೇ ನಗದು ವಹಿವಾಟನ್ನು ಮೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ದೇಶದಲ್ಲಿ ಹೆಚ್ಚು ಆದ್ಯತೆಯ ಪಾವತಿ ಕಾರ್ಯವಿಧಾನವಾಗುತ್ತಿರುವುದರಿಂದ ಡಿಜಿಟಲ್ ವಹಿವಾಟು ಶೀಘ್ರದಲ್ಲೇ ನಗದು ವಹಿವಾಟನ್ನು ಮೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದ ಡಿಜಿಟಲ್ ಪಾವತಿ ವಿಧಾನ ಯುಪಿಐ ಮತ್ತು ಸಿಂಗಾಪುರ ದೇಶದ ಪೇನೌ ನಡುವಿನ ಗಡಿಯಾಚೆಗಿನ ಡಿಜಿಟಲ್ ಹಣ ಪಾವತಿ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿಯವರು, 2022ರಲ್ಲಿ ಯುಪಿಐ ಮೂಲಕ ಸುಮಾರು 2 ಟ್ರಿಲಿಯನ್ ಸಿಂಗಾಪುರ್ ಡಾಲರ್ ಅಂದರೆ ಸುಮಾರು 126 ಟ್ರಿಲಿಯನ್ ರೂಪಾಯಿಗಿಂತ ಹೆಚ್ಚು ಮೊತ್ತದ 74 ಬಿಲಿಯನ್ ವಹಿವಾಟುಗಳನ್ನು ಮಾಡಲಾಗಿದೆ ಎಂದು ಹೇಳಿದರು.

"ಅನೇಕ ತಜ್ಞರು ಶೀಘ್ರದಲ್ಲೇ ಭಾರತದ ಡಿಜಿಟಲ್ ವ್ಯಾಲೆಟ್ ವಹಿವಾಟುಗಳು ನಗದು ವಹಿವಾಟುಗಳನ್ನು ಹಿಂದಿಕ್ಕಲಿವೆ ಎಂದು ಅಂದಾಜಿಸಿದ್ದಾರೆ" ಎಂದು ಹೇಳಿದರು. UPI ಮೂಲಕ ಹೆಚ್ಚಿನ ಸಂಖ್ಯೆಯ ವಹಿವಾಟುಗಳು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಪಾವತಿ ವ್ಯವಸ್ಥೆಯು ಅತ್ಯಂತ ಸುರಕ್ಷಿತವಾಗಿದೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.

ಮೋದಿ ಅವರು ತಮ್ಮ ಸಿಂಗಾಪುರದ ಸಹವರ್ತಿ ಲೀ ಸಿಯೆನ್ ಲೂಂಗ್ ಅವರೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಯುಪಿಐ ಮತ್ತು ಸಿಂಗಾಪುರದ ಪೇನೌ ನಡುವಿನ ಗಡಿಯಾಚೆಗಿನ ಸಂಪರ್ಕಕ್ಕೆ ಚಾಲನೆ ನೀಡಿದರು. ಮೊದಲ ವಹಿವಾಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರ (MAS) ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಮಾಡಿದ್ದಾರೆ.

ಈ ಎರಡು ಪಾವತಿ ವ್ಯವಸ್ಥೆಗಳ ಸಂಪರ್ಕವು ಎರಡೂ ದೇಶಗಳ ನಿವಾಸಿಗಳಿಗೆ ಗಡಿಯಾಚೆಗಿನ ಹಣ ರವಾನೆಯನ್ನು ವೇಗವಾಗಿ ಮತ್ತು ವೆಚ್ಚ-ಪರಿಣಾಮಕಾರಿಯಾಗಿ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಇದು ಸಿಂಗಾಪುರದಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ, ಸಿಂಗಾಪುರದಿಂದ ಭಾರತಕ್ಕೆ ತ್ವರಿತ ಮತ್ತು ಕಡಿಮೆ-ವೆಚ್ಚದ ಹಣವನ್ನು ವರ್ಗಾವಣೆ ಮಾಡಲು ಸಹಾಯ ಮಾಡುತ್ತದೆ. 

ಫಿನ್‌ಟೆಕ್ ನಾವೀನ್ಯತೆಗಾಗಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. UPI ಯ ಪ್ರಯೋಜನಗಳು ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಇತರ ದೇಶಗಳಿಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com