ವಂಚಕ ಸುಕೇಶ್ ಚಂದ್ರಶೇಖರ್ ಜೈಲು ಕೋಣೆಯಿಂದ 1.5 ಲಕ್ಷ ಮೌಲ್ಯದ ಚಪ್ಪಲಿ, 80 ಸಾವಿರ ಮೌಲ್ಯದ ಜೀನ್ಸ್ ವಶ

ದೆಹಲಿ ಕಾರಾಗೃಹ ಇಲಾಖೆಯು ಮಂಡೋಲಿ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಅವರ ಸೆಲ್ ಮೇಲೆ ದಾಳಿ ನಡೆಸಿತು. ದಾಳಿಯಲ್ಲಿ 1.5 ಲಕ್ಷ ರೂಪಾಯಿ ಮೌಲ್ಯದ ಗುಸ್ಸಿ (Gucci) ಚಪ್ಪಲಿ ಮತ್ತು 80,000 ರೂಪಾಯಿ ಮೌಲ್ಯದ ಎರಡು ಜೀನ್ಸ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸುಕೇಶ್ ಚಂದ್ರಶೇಖರ್
ಸುಕೇಶ್ ಚಂದ್ರಶೇಖರ್

ನವದೆಹಲಿ: ದೆಹಲಿ ಕಾರಾಗೃಹ ಇಲಾಖೆಯು ಮಂಡೋಲಿ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಅವರ ಸೆಲ್ ಮೇಲೆ ದಾಳಿ ನಡೆಸಿತು. ದಾಳಿಯಲ್ಲಿ 1.5 ಲಕ್ಷ ರೂಪಾಯಿ ಮೌಲ್ಯದ ಗುಸ್ಸಿ (Gucci) ಚಪ್ಪಲಿ ಮತ್ತು 80,000 ರೂಪಾಯಿ ಮೌಲ್ಯದ ಎರಡು ಜೀನ್ಸ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇತ್ತೀಚಿನ ಕಾರ್ಯಾಚರಣೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುತ್ತಿವೆ. ವಂಚಕ ಸುಕೇಶ್ ಜೈಲರ್ ದೀಪಕ್ ಶರ್ಮಾ ಅವರ ಮುಂದೆ ಅಳುತ್ತಿರುವುದನ್ನು ತೋರಿಸಿದೆ.

ದಾಳಿಯಲ್ಲಿ ಕಾರಾಗೃಹ ಇಲಾಖೆ ಮತ್ತು ಇತರ ಭದ್ರತಾ ಸಿಬ್ಬಂದಿ ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿಗಳೆಂದು ಹೇಳಿಕೊಳ್ಳುವ ಮೂಲಕ ಮಾಜಿ ರೆಲಿಗೇರ್ ಪ್ರಮೋಟರ್ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ವಂಚಿಸಿದ ಹೊಸ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಸುಕೇಶ್ ಚಂದ್ರಶೇಖರ್ ಅವರನ್ನು ಬಂಧಿಸಿದೆ.

33 ವರ್ಷದ ಚಂದ್ರಶೇಖರ್ ಅವರನ್ನು ಕಳೆದ ವಾರ ಸ್ಥಳೀಯ ಜೈಲಿನಿಂದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಯಿತು.

ನಂತರ ದೆಹಲಿ ನ್ಯಾಯಾಲಯವು ಅವರನ್ನು ಒಂಬತ್ತು ದಿನಗಳ ಇ.ಡಿ ಕಸ್ಟಡಿಗೆ ಕಳುಹಿಸಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com