ಪಂಜಾಬ್: ನಷ್ಟದಲ್ಲಿರುವ ಪಿಎಸ್‌ಪಿಸಿಎಲ್ ಗೆ ಮತ್ತೆ 27,420 ಕೋಟಿ ರೂ. ವಿದ್ಯುತ್ ಸಬ್ಸಿಡಿ ಹೊರೆ

ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ 300 ಯುನಿಟ್ ವಿದ್ಯುತ್ ಸಬ್ಸಿಡಿಯಿಂದಾಗಿ ವರ್ಷಕ್ಕೆ 2,550 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ 300 ಯುನಿಟ್ ವಿದ್ಯುತ್ ಸಬ್ಸಿಡಿಯಿಂದಾಗಿ ವರ್ಷಕ್ಕೆ 2,550 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುತ್ತಿದೆ.

ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್(PSPCL) 2022-23ನೇ ಸಾಲಿಗೆ ತನ್ನ ಸಬ್ಸಿಡಿ ಅಂದಾಜು ಪರಿಷ್ಕರಿಸಿದ್ದು, ಒಟ್ಟು ವಿದ್ಯುತ್ ಸಬ್ಸಿಡಿ ಬಿಲ್ 27,420 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಈ ಹಿಂದಿನ ಅಂದಾಜು 15,845.63 ಕೋಟಿ ರೂಪಾಯಿ ಸಬ್ಸಿಡಿ ಸೇರಿದಂತೆ ಪಿಎಸ್‌ಪಿಸಿಎಲ್‌ಗೆ ಒಟ್ಟು 24,865.63 ಕೋಟಿ ರೂ.ಸಬ್ಸಿಡಿ ಬಾಕಿ ಇದೆ.

2022-23 ರ ಆರ್ಥಿಕ ವರ್ಷಕ್ಕೆ 300 ಯೂನಿಟ್‌ಗಳ ಉಚಿತ ವಿದ್ಯುತ್ ನೀಡುವ ದೃಷ್ಟಿಯಿಂದ ಅಂದಾಜು ಸಬ್ಸಿಡಿಯನ್ನು 4,354.37 ಕೋಟಿ ರೂ. ಹೆಚ್ಚಿಸಲಾಗಿದ್ದು, ಈಗ ಸಬ್ಸಿಡಿ 18,396 ಕೋಟಿ ರೂ.ಗೆ ಹೆಚ್ಚಳವಾಗಿದೆ.

ಇತ್ತೀಚೆಗಷ್ಟೇ ಪಂಜಾಬ್ ಸರ್ಕಾರ 9,020 ಕೋಟಿ ರೂಪಾಯಿಗಳ ಕ್ಯಾರಿ ಫಾರ್ವರ್ಡ್ ಅನ್ನು ಐದು ಸಮಾನ ಕಂತುಗಳಲ್ಲಿ ಪಿಎಸ್‌ಪಿಸಿಎಲ್‌ ನೀಡಲು ನಿರ್ಧರಿಸಿತ್ತು.

ಈ ವರ್ಷ ಪಿಎಸ್‌ಪಿಸಿಎಲ್‌ಗೆ ಸರ್ಕಾರ ಪಾವತಿಸಬೇಕಾಗಿರುವ ಕ್ಯಾರಿ ಫಾರ್ವರ್ಡ್ ಮೊತ್ತವು 1,804 ಕೋಟಿ ರೂಪಾಯಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಪಿಎಸ್‌ಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಸ್ವಿರ್ ಸಿಂಗ್ ಧೀಮಾನ್ ಅವರು, “ಪಿಎಸ್‌ಪಿಸಿಎಲ್ ನಷ್ಟದಲ್ಲಿ ಓಡುತ್ತಿದೆ. ಆದ್ದರಿಂದ ಸರ್ಕಾರವು ಸಬ್ಸಿಡಿ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು ಮತ್ತು ಸರ್ಕಾರಿ ಇಲಾಖೆಗಳು ಬಾಕಿ ಉಳಿಸಿಕೊಂಡಿರುವ  ಸುಮಾರು 2,600 ಕೋಟಿ ರೂ. ವಿದ್ಯುತ್ ಬಿಲ್‌ಗಳನ್ನು ಪಾವತಿಸಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com