ಲಂಚ ಪ್ರಕರಣದಲ್ಲಿ ಪಂಜಾಬ್ ಎಎಪಿ ಶಾಸಕ ಅಮಿತ್ ರತ್ತನ್ ಕೋಟ್ಫಟ್ಟಾ ಬಂಧನ
ಚಂಡೀಗಢ: ಪಂಜಾಬ್‌ನ ಬಟಿಂಡಾ ಗ್ರಾಮಾಂತರ ಕ್ಷೇತ್ರದ ಎಎಪಿ ಶಾಸಕ ಅಮಿತ್ ರತ್ತನ್ ಕೋಟ್ಫಟ್ಟಾ ಅವರನ್ನು ಲಂಚ ಪ್ರಕರಣದಲ್ಲಿ ವಿಜಿಲೆನ್ಸ್ ಬ್ಯೂರೋ ಬಂಧಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಅದೇ ಪ್ರಕರಣದಲ್ಲಿ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಅವರ ಆಪ್ತ ಸಹಾಯಕ ರಶೀಮ್ ಗಾರ್ಗ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಈ ಶಾಸಕರನ್ನು ಬಂಧಿಸಿದೆ.
ಕೋಟ್ಫಟ್ಟಾ ಅವರನ್ನು ಬಂಧಿಸಲಾಗಿದೆ ಎಂದು ಬ್ಯೂರೋದ ಉನ್ನತ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಬಂಧನದ ನಂತರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, 'ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಮತ್ತು ತಪ್ಪಿತಸ್ಥರು ಯಾರಾದರೂ ಶಿಕ್ಷೆಗೆ ಗುರಿಯಾಗುತ್ತಾರೆ. ಲಂಚವನ್ನು ಯಾರಿಂದಲೂ, ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ. ಪಂಜಾಬಿನ ಜನರ ನಂಬಿಕೆ, ಪ್ರೀತಿ ಮತ್ತು ನಿರೀಕ್ಷೆಗಳು ನನ್ನ ಸ್ಫೂರ್ತಿಯನ್ನು ಹೆಚ್ಚಿಸುತ್ತವೆ ಎಂದು ಪಂಜಾಬಿಯಲ್ಲಿ ಟ್ವೀಟ್ ಮಾಡಿದ್ದಾರೆ.
'ಜನರ ಹಣವನ್ನು ದೋಚುವವರಿಗೆ ಯಾವುದೇ ಕರುಣೆ ಇರುವುದಿಲ್ಲ' ಎಂದು ಮಾನ್ ಹೇಳಿದ್ದಾರೆ.
ಕಾನೂನು ಎಲ್ಲರಿಗೂ ಸಮಾನವಾಗಿದೆ. ಬುಧವಾರ ಸಂಜೆ ರಾಜಪುರದಿಂದ ಶಾಸಕರನ್ನು ಬಂಧಿಸಲಾಗಿದ್ದು, ಇದೀಗ ಬಂಧಿಸಲಾಗಿದೆ. ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಪೊಲೀಸರು ಅವರನ್ನು ಕಸ್ಟಡಿಗೆ ಕೋರಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಫೆಬ್ರುವರಿ 16 ರಂದು ಬಟಿಂಡಾದ ಘುಡಾ ಗ್ರಾಮದ ಮುಖ್ಯಸ್ಥರ ಪತಿ ನೀಡಿದ ದೂರಿನ ಮೇರೆಗೆ, ಆರೋಪಿಯು 25 ಲಕ್ಷ ರೂಪಾಯಿ ಸರ್ಕಾರದ ಅನುದಾನವನ್ನು ಬಿಡುಗಡೆ ಮಾಡಲು 5 ಲಕ್ಷ ರೂಪಾಯಿ ಲಂಚಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಗಾರ್ಗ್ ಎಂಬಾತನ್ನು ಬಂಧಿಸಲಾಯಿತು.
ಬಟಿಂಡಾದಲ್ಲಿ ವಿಜಿಲೆನ್ಸ್ ಬ್ಯೂರೋದ ತಂಡಕ್ಕೆ 4 ಲಕ್ಷ ರೂಪಾಯಿ ನಗದು ಜೊತೆ ಗಾರ್ಗ್ ಸಿಕ್ಕಿಬಿದ್ದಿದ್ದಾರೆ. ಕೊಟ್ಫಟ್ಟಾ ಈ ಹಿಂದೆ ಗಾರ್ಗ್ ಜೊತೆ ಯಾವುದೇ ಸಂಬಂಧವಿಲ್ಲ ಎಂದಿದ್ದರು.
ವಿರೋಧ ಪಕ್ಷಗಳು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ದೂಷಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ