ಕಾಂಗ್ರೆಸ್ ಗೆ ಬೇಕಾಗಿರುವುದು ಒಗ್ಗಟ್ಟು, ಶಿಸ್ತು ಮತ್ತು ಸಂಕಲ್ಪ: ಮಲ್ಲಿಕಾರ್ಜು ಖರ್ಗೆ

ಪಕ್ಷವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಎದುರಿಸಬಹುದು. ಆದರೆ ಪಕ್ಷಕ್ಕೆ ಬೇಕಾಗಿರುವುದು ಒಗ್ಗಟ್ಟು, ಶಿಸ್ತು ಮತ್ತು ಸಂಕಲ್ಪ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದ್ದಾರೆ.
ಮಲ್ಲಿಕಾರ್ಜು ಖರ್ಗೆ
ಮಲ್ಲಿಕಾರ್ಜು ಖರ್ಗೆ
Updated on

ರಾಯಪುರ: ಪಕ್ಷವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಎದುರಿಸಬಹುದು. ಆದರೆ ಪಕ್ಷಕ್ಕೆ ಬೇಕಾಗಿರುವುದು ಒಗ್ಗಟ್ಟು, ಶಿಸ್ತು ಮತ್ತು ಸಂಕಲ್ಪ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದ್ದಾರೆ.

ಛತ್ತೀಸ್‌ಗಢದ ನವ ರಾಯಪುರದಲ್ಲಿ ನಡೆದ ಪಕ್ಷದ 85ನೇ ಸರ್ವಸದಸ್ಯರ ಮಹಾಧಿವೇಶನದಲ್ಲಿ ಸಮಾರೋಪ ಭಾಷಣ ಮಾಡಿದ ಖರ್ಗೆ, ಅಧಿವೇಶನವು ಕೊನೆಗೊಳ್ಳಬಹುದು. ಆದರೆ ಇದು "ಹೊಸ ಕಾಂಗ್ರೆಸ್" ನ ಆರಂಭಕ್ಕೆ ನಾಂದಿ ಹಾಡುತ್ತದೆ ಎಂದು ಹೇಳಿದರು.

ಇಂದು ನಮ್ಮ ಮುಂದೆ ಹಲವು ಸವಾಲುಗಳಿವೆ. ಆದರೆ ಕಾಂಗ್ರೆಸ್‌ಗೆ ಯಾವುದನ್ನೂ ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಕ್ಷಕ್ಕೆ ಬೇಕಿರುವುದು ಒಗ್ಗಟ್ಟು, ಶಿಸ್ತು ಮತ್ತು ದೃಢಸಂಕಲ್ಪ. ಪಕ್ಷದ ಬಲದಲ್ಲಿ ನಮ್ಮ ಶಕ್ತಿ ಅಡಗಿದೆ ಎಂದರು.

"ರಾಷ್ಟ್ರಮಟ್ಟದಲ್ಲಿ ನಮ್ಮ ನಡವಳಿಕೆಯು ಪ್ರತಿ ಹಂತದಲ್ಲಿರುವ ಕೋಟಿಗಟ್ಟಲೆ ಪಕ್ಷದ ಸಹೋದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ" ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

ಕಾಲಾನಂತರದಲ್ಲಿ ಅನೇಕ ವಿಷಯಗಳು ಬದಲಾಗುತ್ತವೆ. ಜನರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳು ಬದಲಾಗುತ್ತವೆ. ಹೊಸ ಸವಾಲುಗಳು ಹೊರಹೊಮ್ಮುತ್ತವೆ. ಅವುಗಳನ್ನು ಎದುರಿಸಲು ಹೊಸ ಮಾರ್ಗಗಳು ಸಹ ಕಂಡುಕೊಳ್ಳಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com