ಸತ್ಯ ಹೊರಬರುವವರೆಗೂ ಅದಾನಿ ಬಗ್ಗೆ ಪ್ರಶ್ನೆ ಕೇಳುತ್ತೇವೆ: ರಾಹುಲ್ ಗಾಂಧಿ

ಸಂಸತ್ತಿನಲ್ಲಿ ಉದ್ಯಮಿಗೆ ಬೆಂಬಲವಾಗಿ ನಿಂತ ಭಾರತೀಯ ಜನತಾ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸತ್ಯ ಹೊರಬರುವವರೆಗೂ ಗೌತಮ್ ಅದಾನಿ ಬಗ್ಗೆ ನಮ್ಮ ಪಕ್ಷ ಪ್ರಶ್ನೆಗಳನ್ನು....
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ರಾಯಪುರ: ಸಂಸತ್ತಿನಲ್ಲಿ ಉದ್ಯಮಿಗೆ ಬೆಂಬಲವಾಗಿ ನಿಂತ ಭಾರತೀಯ ಜನತಾ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸತ್ಯ ಹೊರಬರುವವರೆಗೂ ಗೌತಮ್ ಅದಾನಿ ಬಗ್ಗೆ ನಮ್ಮ ಪಕ್ಷ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತದೆ ಎಂದು ಭಾನುವಾರ ಹೇಳಿದ್ದಾರೆ.
  
ಇಂದು 85ನೇ ಸರ್ವಸದಸ್ಯರ ಮಹಾಧಿವೇಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯ ಮೂಲಕ ಕೈಗೊಂಡ "ತಪಸ್ಯ"ನ್ನು ಮುಂದುವರಿಸಲು ಪಕ್ಷ ಹೊಸ ಯೋಜನೆಯನ್ನು ರೂಪಿಸಬೇಕು ಮತ್ತು ಅದರಲ್ಲಿ ತಾವೂ ಸೇರಿದಂತೆ ಇಡೀ ದೇಶ ಭಾಗವಹಿಸಬೇಕು ಎಂದು ಹೇಳಿದ್ದಾರೆ. ಈ ಮೂಲಕ ಭಾರತ್ ಜೋಡೋದಂತಹ ಮತ್ತೊಂದು ಯಾತ್ರೆ ಕೈಗೊಳ್ಳುವ ಸೂಚನೆ ನೀಡಿದ್ದಾರೆ.

ಅದಾನಿ ವಿಚಾರದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಇಡೀ ಸಂಪತ್ತನ್ನು ಲೂಟಿ ಹೊಡೆಯುವ ಮೂಲಕ ಅದಾನಿ ದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

"ನಾವು ಸಂಸತ್ತಿನಲ್ಲಿ ಅದಾನಿಯೊಂದಿಗೆ ಪ್ರಧಾನಿಯ ಸಂಬಂಧವೇನು ಎಂದು ಕೇಳಿದಾಗ ನಮ್ಮ ಸಂಪೂರ್ಣ ಭಾಷಣವನ್ನೇ ತೆಗೆದುಹಾಕಲಾಗಿದೆ. ಆದರೆ ಅದಾನಿ ಸತ್ಯ ಹೊರಬರುವವರೆಗೆ ನಾವು ಸಂಸತ್ತಿನಲ್ಲಿ ಸಾವಿರಾರು ಬಾರಿ ಪ್ರಶ್ನೆ ಕೇಳುತ್ತೇವೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

"ಅದಾನಿಗೆ ಅವರ ಕಂಪನಿ ದೇಶಕ್ಕೆ 'ಹಾನಿ ಮಾಡುತ್ತಿದೆ' ಮತ್ತು 'ದೇಶದ ಸಂಪೂರ್ಣ ಮೂಲಸೌಕರ್ಯವನ್ನು ಕಸಿದುಕೊಳ್ಳುತ್ತಿದೆ" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com