ಚಂದ್ರಬಾಬು ನಾಯ್ಡು ಅವರ ಕಾರ್ಯಕ್ರಮದಲ್ಲಿ ಕಾಲ್ತುಳಿತ; ತನಿಖೆ ನಡೆಸಲು ಸಮಿತಿಯನ್ನು ನೇಮಿಸಿದ ಆಂಧ್ರ ಸರ್ಕಾರ

ವಿಧಾನಸಭೆ ವಿರೋಧ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಅವರ ಪ್ರತ್ಯೇಕ ಸಾರ್ವಜನಿಕ ಸಭೆಗಳಲ್ಲಿ ಸಂಭವಿಸಿದ ಕಂದುಕೂರು ಮತ್ತು ಗುಂಟೂರು ಕಾಲ್ತುಳಿತದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಆಂಧ್ರ ಪ್ರದೇಶ ಸರ್ಕಾರ ಶನಿವಾರ ನ್ಯಾಯಾಂಗ ಸಮಿತಿಯನ್ನು ನೇಮಿಸಿದೆ.
ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು
ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು
Updated on

ವಿಜಯವಾಡ: ವಿಧಾನಸಭೆ ವಿರೋಧ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಅವರ ಪ್ರತ್ಯೇಕ ಸಾರ್ವಜನಿಕ ಸಭೆಗಳಲ್ಲಿ ಸಂಭವಿಸಿದ ಕಂದುಕೂರು ಮತ್ತು ಗುಂಟೂರು ಕಾಲ್ತುಳಿತದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಆಂಧ್ರ ಪ್ರದೇಶ ಸರ್ಕಾರ ಶನಿವಾರ ನ್ಯಾಯಾಂಗ ಸಮಿತಿಯನ್ನು ನೇಮಿಸಿದೆ.

ಕುಂದಕೂರಿನಲ್ಲಿ ಡಿಸೆಂಬರ್ 28ರಂದು ನಡೆದ ನಾಯ್ಡು ಅವರ ಸಾರ್ವಜನಿಕ ಸಭೆಯ ವೇಳೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಎಂಟು ಕಾರ್ಯಕರ್ತರ ಸಾವಿಗೆ ಕಾರಣವಾದ ಮತ್ತು ಗುಂಟೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನವರಿ 1ರಂದು ಕಾಲ್ತುಳಿತದಿಂದ ಮೂವರು ಸಾವಿಗೀಡಾಗಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.

ಈ ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಆಂಧ್ರಪ್ರದೇಶ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಶೇಷಶಯನ ರೆಡ್ಡಿ ಅವರನ್ನು ನೇಮಿಸಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ, ಕಾಲ್ತುಳಿತಕ್ಕೆ ಕಾರಣವಾದ ವ್ಯಕ್ತಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ನೇಮಿಸಿದ ತನಿಖಾ ಆಯೋಗವು ಹೊಂದಿರುತ್ತದೆ. ಕಾರ್ಯಕ್ರಮದ ವ್ಯವಸ್ಥೆಗಳಲ್ಲಿ ಯಾವುದೇ ನ್ಯೂನತೆಗಳು ಅಥವಾ ಮಂಜೂರು ಮಾಡಿದ ಅನುಮತಿಗಳಲ್ಲಿ ಉಲ್ಲಂಘನೆಗಳಿದ್ದರೆ ಅದು ಗುರುತಿಸುತ್ತದೆ ಎಂದಿದೆ.

ಭವಿಷ್ಯದಲ್ಲಿ ಇಂತಹ ಗಂಭೀರ ಘಟನೆಗಳು ಸಂಭವಿಸುವುದನ್ನು ತಡೆಯಲು ಸಂಸ್ಥಿಕ ಕಾರ್ಯವಿಧಾನಗಳು ಮತ್ತು ಸುರಕ್ಷತೆಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡುತ್ತದೆ.

ನಿರ್ದೇಶನಗಳ ಪ್ರಕಾರ, ಆಯೋಗವು ತನ್ನ ವಿಚಾರಣೆಯನ್ನು ಪೂರ್ಣಗೊಳಿಸಲು ಮತ್ತು ಅದರ ವರದಿಯನ್ನು ರಾಜ್ಯ ಸರ್ಕಾರಕ್ಕೆ ನಿಗದಿಪಡಿಸಿದ ದಿನಾಂಕದಿಂದ ಒಂದು ತಿಂಗಳ ಅವಧಿಯಲ್ಲಿ ಸಲ್ಲಿಸಲು ನಿರ್ದೇಶಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com