ದೆಹಲಿ: ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಾಶ್ ರೂಂನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಚೀನಾ ಮಹಿಳೆ

ತನ್ನ ಕೆಲಸ ಕಳೆದುಕೊಂಡಿದ್ದರಿಂದ ಮತ್ತು ಇತ್ತೀಚೆಗಷ್ಟೇ ಬ್ರೇಕಪ್ ಮಾಡಿಕೊಂಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಚೀನಾದ ಮಹಿಳೆಯೊಬ್ಬರು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಾಶ್ ರೂಂನಲ್ಲಿ ರೇಜರ್‌ನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ನವದೆಹಲಿ: ತನ್ನ ಕೆಲಸ ಕಳೆದುಕೊಂಡಿದ್ದರಿಂದ ಮತ್ತು ಇತ್ತೀಚೆಗಷ್ಟೇ ಬ್ರೇಕಪ್ ಮಾಡಿಕೊಂಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಚೀನಾದ ಮಹಿಳೆಯೊಬ್ಬರು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಾಶ್ ರೂಂನಲ್ಲಿ ರೇಜರ್‌ನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶನಿವಾರ ಮುಂಜಾನೆ ಟರ್ಮಿನಲ್ 3 ರಲ್ಲಿ ಈ ಘಟನೆ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಮಹಿಳೆ ಬಹ್ರೇನ್‌ನಿಂದ ಶನಿವಾರ ತಡರಾತ್ರಿ ಟರ್ಮಿನಲ್ 3ಕ್ಕೆ ಬಂದಿಳಿದಿದ್ದರು.

ಆಕೆ ಮತ್ತೆ ಕೌಲಾಲಂಪುರಕ್ಕೆ ವಿಮಾನವನ್ನು ಏರಬೇಕಿತ್ತು. ಆದರೆ, ಮುಂಜಾನೆ 4 ಗಂಟೆಯ ಸುಮಾರಿಗೆ, ಆಕೆ ವಾಶ್‌ರೂಮ್‌ಗೆ ಹೋಗಿ ಗಂಟಲು ಮತ್ತು ಮಣಿಕಟ್ಟನ್ನು ತಾನೇ ಕತ್ತರಿಸಿಕೊಂಡಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

'ತಾನು ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದೇನೆ ಮತ್ತು ತನ್ನ ಗೆಳೆಯನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ' ಎಂದು ತನಿಖೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com