ಮದ್ಯ ಹಗರಣ: ವಕೀಲರ ಶುಲ್ಕಕ್ಕಾಗಿ ರೂ.25.25 ಕೋಟಿ ವ್ಯಯಿಸಿದ ದೆಹಲಿ ಸರ್ಕಾರ

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ತನ್ನ ಪರವಾಗಿ ಹೋರಾಡುತ್ತಿರುವ ವಕೀಲರಿಗೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು 25.25 ಕೋಟಿ ರೂ.ಗಳನ್ನು ಪಾವತಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
Updated on

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ತನ್ನ ಪರವಾಗಿ ಹೋರಾಡುತ್ತಿರುವ ವಕೀಲರಿಗೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು 25.25 ಕೋಟಿ ರೂ.ಗಳನ್ನು ಪಾವತಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ 18 ತಿಂಗಳುಗಳಲ್ಲಿ ವಕೀಲರ ಶುಲ್ಕಕ್ಕಾಗಿ ದೆಹಲಿ ಸರ್ಕಾರದ ಒಟ್ಟು ಖರ್ಚು 28.10 ಕೋಟಿ ರೂ.ಗಳಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜಭವನದ ಮೂಲಗಳ ಪ್ರಕಾರ, ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ಅವರು 25.25 ಕೋಟಿ ರೂ.ಗಳಲ್ಲಿ 18.97 ಕೋಟಿ ರೂ.ಗಳನ್ನು ಪಡೆದಿದ್ದರೆ, ಮತ್ತೊಬ್ಬ ವಕೀಲ ರಾಹುಲ್ ಮೆಹ್ರಾ ಅವರು ಜೈಲು ಪಾಲಾಗಿರುವ ಸಚಿವ ಸತ್ಯೇಂದ್ರ ಜೈನ್ ಅವರ ಪ್ರಕರಣಗಳಲ್ಲಿ ಆಗಾಗ ಹಾಜರಾಗಿ 5.30 ಕೋಟಿ ರೂಗಳನ್ನು ಪಡೆದುಕೊಂಡಿದ್ದಾರೆಂದು ತಿಳಿಸಿದೆ.

ಸಿಂಘ್ವಿ ಅವರು 2021-22ರಲ್ಲಿ 14.85 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದು, ನಂತರ ರೂ.4.1 ಕೋಟಿ ಪಡೆದೂಕೊಂಡಿದ್ದಾರೆಂದು ತಿಳಿದುಬಂದಿದೆ.

2020-21ರಲ್ಲಿ ಹೇಳಿಕೆಯ ವೆಚ್ಚದ ಪಟ್ಟಿಯಲ್ಲಿ 2.4 ಲಕ್ಷ ರೂ ಎಂದು ತೋರಿಸಿರುವ ಮೆಹ್ರಾ ಅವರ ಪಾವತಿಯು 2021-22ರಲ್ಲಿ ರೂ 3.9 ಕೋಟಿಗೆ ಏರಿಕೆಯಾಗಿದೆ.

2021-2022ರ ಅವಧಿಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಕೀಲರಿಗೆ 16.09 ಕೋಟಿ ರೂ ಪಾವತಿಸಲಾಗಿದ್ದು, 2022-2023ರ ಎಂಟು ತಿಂಗಳ ಅವಧಿಯಲ್ಲಿ 5.24 ಕೋಟಿ ರೂ.ಗಳ ಪಾವತಿಸಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಮದ್ಯದ ಹಗರಣ ಬೆಳಕಿಗೆ ಬರುವ ಮೊದಲು, ದೆಹಲಿಯಲ್ಲಿ ಎಎಪಿ ಸರ್ಕಾರದ ಒಟ್ಟು ಖರ್ಚು ವೆಚ್ಚವು ಕೇವಲ 6.70 ಕೋಟಿ ರೂಪಾಯಿಗಳಷ್ಟಿತ್ತು, ಅದರಲ್ಲಿ ಬಹುತೇಕ ಹಣವು ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಮತ್ತು ಆರೋಗ್ಯ ಇಲಾಖೆಗೆ ಹೋಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com