ದೇಶದ ಭ್ರಾತೃತ್ವ ಮತ್ತು ಏಕತೆಯಿಂದ ಭಾರತ್ ಜೋಡೋ ಯಾತ್ರೆ ಯಶಸ್ವಿ: ರಾಹುಲ್ ಗಾಂಧಿ

ಭಾರತ ಸಹೋದರತ್ವ, ಏಕತೆ ಮತ್ತು ಗೌರವದ ಮೇಲೆ ನಿಂತಿದೆ. ಅದಕ್ಕಾಗಿಯೇ ನಮ್ಮ ‘ಭಾರತ್ ಜೋಡೋ ಯಾತ್ರೆ’ ಎಂದು ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಅವರು ಬುಧವಾರ ಪ್ರತಿಪಾದಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಫತೇಘರ್ ಸಾಹಿಬ್(ಪಂಜಾಬ್): ಭಾರತ ಸಹೋದರತ್ವ, ಏಕತೆ ಮತ್ತು ಗೌರವದ ಮೇಲೆ ನಿಂತಿದೆ. ಅದಕ್ಕಾಗಿಯೇ ನಮ್ಮ ‘ಭಾರತ್ ಜೋಡೋ ಯಾತ್ರೆ’ ಎಂದು ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಅವರು ಬುಧವಾರ ಪ್ರತಿಪಾದಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ಇಂದು ಪಂಜಾಬ್ ಪ್ರವೇಶಿಸುವ ಮುನ್ನಗುರುದ್ವಾರ ಫತೇಘರ್ ಸಾಹಿಬ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,  ಬಿಜೆಪಿಯು ದೇಶದಲ್ಲಿ ಭಯ ಮತ್ತು ದ್ವೇಷವನ್ನು ಹರಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಮತ್ತು ಆರೆಸ್ಸೆಸ್ ನವರು ದೇಶವನ್ನು ವಿಭಜಿಸಿ, ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು, ಒಂದು ಜಾತಿಯ ವಿರುದ್ಧ ಇನ್ನೊಂದು ಜಾತಿಯನ್ನು, ಒಂದು ಭಾಷೆಯ ವಿರುದ್ಧ ಇನ್ನೊಂದು ಭಾಷೆಯನ್ನು ಎತ್ತಿಕಟ್ಟಿ ದೇಶದಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಇದರಿಂದ ಭಾತೃತ್ವದ ವಾತಾವರಣ ಹಾಳಾಗುತ್ತಿದೆ ಎಂದರು.

ದೇಶದಲ್ಲಿ ಪ್ರೀತಿ, ಏಕತೆ, ಭ್ರಾತೃತ್ವದ ನೆಲೆಸಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ. ಯಾತ್ರೆಗೆ ಅಪಾರ ಜನಸ್ಪಂದನೆ ವ್ಯಕ್ತವಾಗಿದೆ. ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ಮಾಧ್ಯಮಗಳು ತಮ್ಮ "ಸ್ನೇಹಿತ"ರೂ ಎಂದು ಕರೆದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪ್ರಧಾನಿ ನರೇಂದ್ರ ಮೋದಿಯವರ ಮುಖವನ್ನು ಹಗಲಿರುಳು ತೋರಿಸುತ್ತಿವೆ. ಆದರೆ ನಿರುದ್ಯೋಗ ಅಥವಾ ಹಣದುಬ್ಬರದಂತಹ ಸಮಸ್ಯೆಗಳನ್ನು ತೋರಿಸುತ್ತಿಲ್ಲ ಎಂದು ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com