ಚೀನಾದೊಂದಿಗೆ ಎಲ್ ಎಸಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದರೂ ಅನಿರೀಕ್ಷಿತವಾಗಿದೆ: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ

ಉತ್ತರ ಭಾಗದ ಗಡಿಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದರೂ ಅನಿರೀಕ್ಷಿತವಾಗಿದೆ. ಏಳು ಸಮಸ್ಯೆಗಳಲ್ಲಿ ಐದನ್ನು ನಾವು ಪರಿಹರಿಸಲು ಸಾಧ್ಯವಾಯಿತು. ನಾವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಮುಂದುವರಿಸುತ್ತೇವೆ. ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ನಮ್ಮ ಬಳಿ ಸಾಕಷ್ಟು ವ್ಯವಸ್ಥೆಯಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
Updated on

ನವದೆಹಲಿ: ಉತ್ತರ ಭಾಗದ ಗಡಿಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದರೂ ಅನಿರೀಕ್ಷಿತವಾಗಿದೆ. ಏಳು ಸಮಸ್ಯೆಗಳಲ್ಲಿ ಐದನ್ನು ನಾವು ಪರಿಹರಿಸಲು ಸಾಧ್ಯವಾಯಿತು. ನಾವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಮುಂದುವರಿಸುತ್ತೇವೆ. ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ನಮ್ಮ ಬಳಿ ಸಾಕಷ್ಟು ವ್ಯವಸ್ಥೆಯಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.

ಇದೇ ಜನವರಿ 15ರಂದು ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ, ಫೆಬ್ರವರಿ 2021 ರಲ್ಲಿ ಮಾಡಿಕೊಂಡ ಕದನ ವಿರಾಮ ಒಪ್ಪಂದವು ಉತ್ತಮವಾಗಿದೆ ಆದರೆ ಭಯೋತ್ಪಾದನೆ ಮತ್ತು ಭಯೋತ್ಪಾದಕ ಮೂಲಸೌಕರ್ಯಕ್ಕೆ ಗಡಿಯಾಚೆಗಿನ ಬೆಂಬಲವು ಮುಂದುವರಿದಿದೆ ಎಂದರು. 

ಈಶಾನ್ಯ ಭಾಗದಲ್ಲಿ ಬಹುತೇಕ ರಾಜ್ಯಗಳಲ್ಲಿ ಶಾಂತಿ ಮರಳಿದೆ. ಆರ್ಥಿಕ ಚಟುವಟಿಕೆಗಳು ಮತ್ತು ಅಭಿವೃದ್ಧಿ ಉಪಕ್ರಮಗಳು ಉತ್ತಮ ಫಲಿತಾಂಶಗಳನ್ನು ನೀಡಿವೆ. ಈ ಸೇನಾ ದಿನವು ಸ್ವಾತಂತ್ರ್ಯದ 75 ನೇ ವರ್ಷವೂ ಆಗಿರುವುದರಿಂದ ವಿಶೇಷವಾಗಿದೆ.

ಭಾರತೀಯ ಸೇನೆಯಲ್ಲಿ ರೂಪಾಂತರ ತರಲು ನಿರ್ಧರಿಸಿದ್ದೇವೆ. ಸೇನೆಯ ಬಲವನ್ನು ಪುನರ್ರಚನೆ ಮಾಡುವುದರಿಂದ ಹಿಡಿದು ಆಧುನೀಕರಣ ಮತ್ತು ತಂತ್ರಜ್ಞಾನದ ಒಳಹರಿವು ಮತ್ತು ಮಾನವ ಸಂಪನ್ಮೂಲ ನಿರ್ವಹಣೆ, ಪರಿಸ್ಥಿತಿಯ ಉತ್ತಮ ನಿರ್ವಹಣೆ ಹೀಗೆ 5 ಕ್ಷೇತ್ರಗಳಲ್ಲಿ  ರೂಪಾಂತರ ಮಾಡಲಿದ್ದೇವೆ.

ನಾವು ಆರ್ಮಿ ಮಾರ್ಷಲ್ ಆರ್ಟ್ಸ್ ರೊಟೀನ್ (AMAR)ನ್ನು ಸಹ ಹೊಂದಿದ್ದೇವೆ ಅದು ಯುದ್ಧದ ಸಂದರ್ಭಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದು ದೇಶದ ವಿವಿಧ ಸಮರ ಕಲೆಗಳ ಸಮ್ಮಿಲನವಾಗಿದೆ ಎಂದರು.

ಭಾರತೀಯ ಸೇನೆಯ ಪಿರಂಗಿ ದಳಕ್ಕೆ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ನಾವು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ಸರ್ಕಾರ ಸ್ವೀಕರಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

ಚೀನಾ ಸೇನೆಯನ್ನು ಸಮರ್ಥವಾಗಿ ಎದುರಿಸುತ್ತೇವೆ: ಉತ್ತರದ ಗಡಿಯಲ್ಲಿ ಎದುರಾಳಿ ಕಡೆಯಿಂದ ಸೇನೆ ನಿಯೋಜನೆಯು ಅದೇ ರೀತಿಯಲ್ಲಿ ಮುಂದುವರಿಯುತ್ತದೆ. ಭಾರತ ಕಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಸೇನಾಪಡೆಯಿದೆ. ನಮ್ಮ ಪೂರ್ವ ಕಮಾಂಡ್ ಎದುರು ಚೀನಾ ಸೈನಿಕರ ಸಂಖ್ಯೆಯಲ್ಲಿ ಹೆಚ್ಚಳವಿದೆ. ಅದರ ಮೇಲೆ ನಾವು ನಿಗಾ ಹೊಂದಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com