
ಭಿಂಡ್: ಮಧ್ಯ ಪ್ರದೇಶದ ಭಿಂಡ್‌ನಲ್ಲಿ ಕಳೆದ ವರ್ಷ ನಡೆದ ಪಂಚಾಯತಿ ಚುನಾವಣಾ ಫಲಿತಾಂಶದಿಂದ ಹುಟ್ಟಿಕೊಂಡ ರಾಜಕೀಯ ದ್ವೇಷಕ್ಕೆ ಭಾನುವಾರ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಹಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಚೇರಾ ಗ್ರಾಮದಲ್ಲಿ ಈ ತ್ರಿವಳಿ ಕೊಲೆ ನಡೆದಿದ್ದು, ಮೃತರನ್ನು ಹಕೀಮ್ ಪ್ರಸಾದ್ ತ್ಯಾಗಿ (55), ಅವರ ಸೋದರಳಿಯ ಗೋಲು ಅಕಾ ಮಹೇಶ್ ತ್ಯಾಗಿ (22 ಮತ್ತು ಪಿಂಕು ತ್ಯಾಗಿ (35) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಸಿಂಗ್ ಹೇಳಿದ್ದಾರೆ.
ಈ ಸಂಬಂಧ ಹದಿನಾರು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
"ದೂರುದಾರ ಮನೋಜ್ ತ್ಯಾಗಿ ಪ್ರಕಾರ, ಪಂಚಾಯತಿ ಚುನಾವಣೆಯ ಫಲಿತಾಂಶದಿಂದ ಹುಟ್ಟಿಕೊಂಡ ದ್ವೇಷಕ್ಕೆ ಮೂವರು ಬಲಿಯಾಗಿದ್ದಾರೆ" ಎಂದು ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಮೃತರ ಪೈಕಿ ಒಬ್ಬ ಅಭ್ಯರ್ಥಿಯು ಆರೋಪಿಗೆ ಹತ್ತಿರವಿರುವ ವ್ಯಕ್ತಿಯನ್ನು ಸೋಲಿಸಿದ್ದರು.
Advertisement