ಆಕ್ಸಿಜನ್ ಸಿಲಿಂಡರ್‌ನೊಂದಿಗೆ ದೆಹಲಿ ವಿಧಾನಸಭೆ ಪ್ರವೇಶಿಸಿದ ಬಿಜೆಪಿ ಶಾಸಕರು; 10 ನಿಮಿಷ ಮುಂದೂಡಲ್ಪಟ್ಟ ಸದನ
ನವದೆಹಲಿ: ದೆಹಲಿ ವಿಧಾನಸಭೆಯ ಮೂರು ದಿನಗಳ ಅಧಿವೇಶನ ಸೋಮವಾರದಿಂದ ಆರಂಭಗೊಂಡಿದ್ದು, ವಾಯುಮಾಲಿನ್ಯ ತಡೆಗಟ್ಟಲು ಎಎಪಿ ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ಬಿಜೆಪಿ ಶಾಸಕರು ಸದನದೊಳಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಹೊತ್ತುಕೊಂಡು ಪ್ರತಿಭಟಿಸಿದರು.
ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು ಸಿಲಿಂಡರ್‌ಗಳನ್ನು ತೆಗೆದುಕೊಂಡು ಹೋಗುವಂತೆ ಬಿಜೆಪಿ ಸದಸ್ಯರನ್ನು ಕೇಳಿಕೊಂಡರು ಮತ್ತು ಭದ್ರತೆಯ ಹೊರತಾಗಿಯೂ ಅವುಗಳನ್ನು ಹೇಗೆ ಸದನದೊಳಗೆ ತಂದರು ಎಂದು ಪ್ರಶ್ನಿಸಿದರು.
ತಪ್ಪಾಗಿರುವುದನ್ನು ಕಂಡುಕೊಂಡ ಅವರು, ಈ ಸಂಬಂಧ ಭದ್ರತಾ ಸಿಬ್ಬಂದಿಯನ್ನು ತಮ್ಮ ಕೋಣೆಗೆ ಕರೆದು ವಿಚಾರಿಸಿದರು.
ಆದಾಗ್ಯೂ, ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಹಸ್ತಕ್ಷೇಪದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು. ಬಳಿಕ ದೆಹಲಿ ವಿಧಾನಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಎಎಪಿ ಶಾಸಕ ಸೌರಭ್ ಭಾರದ್ವಾಜ್ ಅವರು, ಮಕ್ಕಳ ಶಿಕ್ಷಣ ಮತ್ತು ಶಿಕ್ಷಕರ ತರಬೇತಿಯಲ್ಲಿ ಕಾನೂನುಬಾಹಿರ ಮತ್ತು ಅನಗತ್ಯ ಅಡೆತಡೆಗಳು ಮತ್ತು ಹಸ್ತಕ್ಷೇಪಗಳ ಕುರಿತು ಗಮನ ಸೆಳೆಯುವ ಚರ್ಚೆಯನ್ನು ಪ್ರಾರಂಭಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ