
ಮಥುರಾ: ಮಥುರಾದಲ್ಲಿ ಬಂಕಿ ಬಿಹಾರಿ ದೇವಸ್ಥಾನದ ಕಾರಿಡಾರ್‌ನ ಉದ್ದೇಶಿತ ಅಭಿವೃದ್ಧಿಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ಮತ್ತು ಅಂಗಡಿ ಮಾಲೀಕರು ಈಗ ರಕ್ತದಲ್ಲಿ ಬರೆದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಳುಹಿಸಿದ್ದಾರೆ.
ಉದ್ದೇಶಿತ ಅಭಿವೃದ್ಧಿಯು ಅಪೇಕ್ಷಣೀಯವಲ್ಲ ಮತ್ತು ಇದು ಅವರ ಪೂರ್ವಜರ ಮನೆಗಳನ್ನು ಕಸಿದುಕೊಳ್ಳುತ್ತದೆ ಮತ್ತು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಅಲ್ಲದೆ, ಇದರ ನಿರ್ಮಾಣದಿಂದ ಪ್ರದೇಶದ ಪಾರಂಪರಿಕ ಮೌಲ್ಯ ಹಾಳಾಗುತ್ತದೆ. ಉದ್ದೇಶಿತ ಕಾರಿಡಾರ್‌ಗಾಗಿ 300ಕ್ಕೂ ಹೆಚ್ಚು ಅಂಗಡಿಗಳು ಮತ್ತು ಮನೆಗಳನ್ನು ನೆಲಸಮಗೊಳಿಸಬೇಕಾಗಿದೆ ಎಂದಿದ್ದಾರೆ.
ಬಂಕಿ ಬಿಹಾರಿ ಮಾರುಕಟ್ಟೆ ಸಂಘದ ಅಧ್ಯಕ್ಷ ಅಮಿತ್ ಗೌತಮ್ ಮಂಗಳವಾರ ಮಾತನಾಡಿ, ಕಾರಿಡಾರ್‌ನ ಉದ್ದೇಶಿತ ಅಭಿವೃದ್ಧಿಯನ್ನು ವಿರೋಧಿಸಿ ಸೋಮವಾರ ದೇವಸ್ಥಾನದ ಸುತ್ತಮುತ್ತಲಿನ 300ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಲಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ದೋಷಪೂರಿತ ಯೋಜನೆಯು ಈ ಪ್ರದೇಶವನ್ನು ನಾಶಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ನಾವು ನಮ್ಮ ರಕ್ತವನ್ನು ಶಾಯಿಯಂತೆ ಬಳಸಿ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇವೆ ಎಂದರು.
ಸರ್ಕಾರ ಯೋಜನೆ ಹಿಂಪಡೆಯದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.
ಉದ್ದೇಶಿತ ಕಾರಿಡಾರ್‌ಗಾಗಿ ಅಲಹಾಬಾದ್ ಹೈಕೋರ್ಟ್‌ನ ಆದೇಶದ ಮೇರೆಗೆ ಎಂಟು ಸದಸ್ಯರ ಸಮಿತಿಯು ಈ ತಿಂಗಳ ಆರಂಭದಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿತ್ತು.
Advertisement