ಪರೇಡ್ ವೇಳೆ ಪ್ರದರ್ಶನಗೊಂಡ ಸ್ತಬ್ಧಚಿತ್ರ.
ಪರೇಡ್ ವೇಳೆ ಪ್ರದರ್ಶನಗೊಂಡ ಸ್ತಬ್ಧಚಿತ್ರ.

ಗಣರಾಜ್ಯೋತ್ಸವ 2023: ಕರ್ತವ್ಯಪಥ​​ದಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶದಿಂದ 23 ಸ್ತಬ್ಧ ಚಿತ್ರಗಳ ಪ್ರದರ್ಶನ

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸಚಿವಾಲಯದ 23 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡಿದ್ದು, ದೇಶದ ಸಂಸ್ಕೃತಿಗಳನ್ನು ಅನಾವರಣಗೊಳಿಸಲಾಯಿತು.
Published on

ನವದೆಹಲಿ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸಚಿವಾಲಯದ 23 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡಿದ್ದು, ದೇಶದ ಸಂಸ್ಕೃತಿಗಳನ್ನು ಅನಾವರಣಗೊಳಿಸಲಾಯಿತು.

ರಾಜ್ಯ, ಕೇಂದ್ರಾಡಳಿತ ಪ್ರದೇಶದ 17, ಕೇಂದ್ರದ ವಿವಿಧ ಸಚಿವಾಲಯಗಳ 6 ಸ್ತಬ್ಧಚಿತ್ರಗಳು ಪ್ರದರ್ಶನವಾಗಿದ್ದು, ಒಟ್ಟು 23 ಸ್ತಬ್ಧ ಚಿತ್ರಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿವೆ.

ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರಾ, ಪಶ್ಚಿಮ ಬಂಗಾಳ, ಜಮ್ಮು,ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ, ದಮನ್ ಮತ್ತು ದಿಯು, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ 17 ರಾಜ್ಯಗಳು ಭಾಗಿಯಾಗಿದ್ದವು.

ಪರೇಡ್ ನಲ್ಲಿ ಪ್ರದರ್ಶನಗೊಂಡ ಸ್ತಬ್ಧಚಿತ್ರಗಳ ವಿವರ ಇಂತಿದೆ...

  • ಆಂಧ್ರಪ್ರದೇಶ -ಪ್ರಬಲ ತೀರ್ಥಂ ಥೀಮ್​
  • ಅಸ್ಸಾಂ -ವೀರರ ಭೂಮಿ, ಆಧ್ಯಾತ್ಮಿಕತೆ ಸಂದೇಶದ ಥೀಮ್​
  • ಕೇಂದ್ರಾಡಳಿತ ಪ್ರದೇಶ ಲಡಾಖ್- ಲಡಾಖ್​ನ ಪ್ರವಾಸೋದ್ಯಮ & ಸಂಯೋಜಿತ ಸಂಸ್ಕೃತಿ
  • ಉತ್ತರಾಖಂಡ್ – ‘ಮಾನಸಖಂಡ’ ಥೀಮ್​
  • ತ್ರಿಪುರ -ಪ್ರವಾಸೋದ್ಯಮ, ಸಾವಯವ ಕೃಷಿ
  • ಗುಜರಾತ್​ - ‘ಕ್ಲೀನ್​ ಗ್ರೀನ್​ ಎನರ್ಜಿ ಸಮರ್ಥ ಗುಜರಾತ್’​
  • ಜಾರ್ಖಂಡ್​ -ದಿಯೋಘರ್​ನಲ್ಲಿರುವ ಪ್ರಖ್ಯಾತ ದೇಗುಲ, ಬಾಬಾಧಾಮ್​ ದೇವಾಲಯದ ಪ್ರದರ್ಶನ
  • ಅರುಣಾಚಲ ಪ್ರದೇಶ -‘ಪ್ರವಾಸೋದ್ಯಮದ ನಿರೀಕ್ಷೆಗಳು’​
  • ಜಮ್ಮು-ಕಾಶ್ಮೀರ -‘ನಯಾ ಜಮ್ಮು ಮತ್ತು ಕಾಶ್ಮೀರ’
  • ಕೇರಳ – ‘ನಾರಿ ಶಕ್ತಿ’
  • ಕೋಲ್ಕತ್ತಾ -ದುರ್ಗಾ ಪೂಜೆ, ದುರ್ಗಾ ಪೂಜೆಯ ವಿಶೇಷತೆ
  • ಮಹಾರಾಷ್ಟ್ರ -ಶಕ್ತಿಪೀಠ
  • ತಮಿಳುನಾಡು -‘ಮಹಿಳಾ ಸಬಲೀಕರಣ & ಸಂಸ್ಕೃತಿ
  • ಕರ್ನಾಟಕ -‘ನಾರಿ ಶಕ್ತಿ’
  • ಹರಿಯಾಣ – ‘ಅಂತಾರಾಷ್ಟ್ರೀಯ ಗೀತ ಮಹೋತ್ಸವ’, ದಾದ್ರಾ ನಗರ್‌ಹವೇಲಿ ಮತ್ತು ದಮನ್​ & ದಿಯು
  • ಕೇಂದ್ರಾಡಳಿತ ಪ್ರದೇಶ -ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆ ಅನಾವರಣ
  • ಉತ್ತರ ಪ್ರದೇಶ -‘ಅಯೋಧ್ಯೆ ದೀಪೋತ್ಸವ’

ಕೇಂದ್ರದ ವಿವಿಧ ಸಚಿವಾಲಯಗಳ 6 ಸ್ತಬ್ಧ ಚಿತ್ರಗಳು

  • ಕೇಂದ್ರದ ಕೃಷಿ ಸಂಶೋಧನಾ ಸಚಿವಾಲಯದಿಂದ ‘ಅಂತಾರಾಷ್ಟ್ರೀಯ ಮಿಲೆಟ್ಸ್​ ವರ್ಷ-2023’ ಥೀಮ್​ ವುಳ್ಳ ಸ್ತಬ್ಧಚಿತ್ರ.
  • ಗಿರಿಜನರ ಸಮಸ್ಯೆಗಳ ಸಚಿವಾಲಯದಿಂದ ಏಕಲವ್ಯ ಮಾಡೆಲ್​ ರೆಸಿಡೆನ್ಸಿಯಲ್​ ಸ್ಕೂಲ್ ಸ್ತಬ್ಧಚಿತ್ರ
  • ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋದಿಂದ ‘ನಶಾ ಮುಕ್ತ ಗುರಿ ನಮ್ಮ ಭಾರತ’ ಎಂಬ ಸಂದೇಶ
  • ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಿಂದ ‘ನಾರಿಶಕ್ತಿ’ ಥೀಮ್​ವುಳ್ಳ ಟ್ಯಾಬ್ಲೊ ಪ್ರದರ್ಶನ. ಭಾರತೀಯ ವಾಯುಸೇನೆ. ಯುದ್ಧ ವಿಮಾನ, ಸೇನೆಯಲ್ಲಿ ಮಹಿಳೆಯರ ಕರ್ತವ್ಯ ಕುರಿತ ಸ್ತಬ್ಧಚಿತ್ರ ಪ್ರದರ್ಶನ.
  • ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ‘ಜೈವಿಕ ವೈವಿಧ್ಯತೆಯ ಸಂರಕ್ಷಣೆ’ ಕುರಿತ ಸ್ತಬ್ಧಚಿತ್ರ
  • ಸಂಸ್ಕೃತಿ ಸಚಿವಾಲಯದಿಂದ ಪಶ್ಚಿಮ ಬಂಗಾಳ, ಕೇರಳ ಸಂಸ್ಕೃತಿಯ ಅನಾವರಣ. ಪಶ್ಚಿಮ ಬಂಗಾಳದ ಪುಡುದಿಯಾ, ಚಾವು ನೃತ್ಯ ಹಾಗೂ ಕೇರಳದ ವಿವಿಧ ನೃತ್ಯ ಪ್ರಕಾರಗಳ ಸ್ತಬ್ಧಚಿತ್ರ ಪ್ರದರ್ಶನ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com