ಗುಜರಾತ್ ನ 6 ಜಿಲ್ಲೆಗಳಲ್ಲಿ ಸಾವಯವ ಕೃಷಿಯನ್ನು ಕೇಳುವವರಿಲ್ಲ!

ಕೇಂದ್ರ ಸರ್ಕಾರ ಸಾವಯವ ಕೃಷಿಯನ್ನು ದೇಶಾದ್ಯಂತ ವಿಸ್ತರಿಸಲು ಶ್ರಮಿಸುತ್ತಿದೆ. ಆದರೆ ಗುಜರಾತ್ ನ 6 ಜಿಲ್ಲೆಗಳಲ್ಲಿ ಸಾವಯವ ಕೃಷಿಯನ್ನು ಕೇಳುವವರೇ ಇಲ್ಲದಂತಾಗಿದೆ.
ಕೃಷಿ ಚಟುವಟಿಕೆ (ಸಂಗ್ರಹ ಚಿತ್ರ)
ಕೃಷಿ ಚಟುವಟಿಕೆ (ಸಂಗ್ರಹ ಚಿತ್ರ)

ಅಹ್ಮದಾಬಾದ್: ಕೇಂದ್ರ ಸರ್ಕಾರ ಸಾವಯವ ಕೃಷಿಯನ್ನು ದೇಶಾದ್ಯಂತ ವಿಸ್ತರಿಸಲು ಶ್ರಮಿಸುತ್ತಿದೆ. ಆದರೆ ಗುಜರಾತ್ ನ 6 ಜಿಲ್ಲೆಗಳಲ್ಲಿ ಸಾವಯವ ಕೃಷಿಯನ್ನು ಕೇಳುವವರೇ ಇಲ್ಲದಂತಾಗಿದೆ.

ಅಂಕಿ-ಅಂಶಗಳ ಪ್ರಕಾರ ಗುಜರಾತ್ ನಲ್ಲಿ 6 ವರ್ಷಗಳ ಅವಧಿಯಲ್ಲಿ ಸಾವಯವ ಕೃಷಿ ಮಾಡುವ ಭೂಮಿ ಒಂದೇ ಒಂದು ಇಂಚಿನಷ್ಟು ವಿಸ್ತರಿಸಿಲ್ಲ. ಪ್ರತಿ ವರ್ಷವೂ ಸರ್ಕಾರ ಸಾವಯವ ಕೃಷಿಗಾಗಿ ಬಜೆಟ್ ನ್ನು ಘೋಷಿಸುತ್ತದೆ ಆದರೆ ರೈತರನ್ನು ಉತ್ತೇಜಿಸುವಲ್ಲಿ ವಿಫಲವಾಗುತ್ತದೆ.

ಗುಜರಾತ್ ನಲ್ಲಿ 960,000 ಹೆಕ್ಟೇರ್ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿದೆ ಈ ಪೈಕಿ 32,092.51 ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಸಾವಯವ ಪದ್ಧತಿಯ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ,  2014-15 ಅವಧಿಯಲ್ಲಿ ಸಾವಯವ ಕೃಷಿಯನ್ನು 30,092 ಹೆಕ್ಟೇರ್ ಭೂಮಿಯಲ್ಲಿ ಮಾಡಲಾಗುತ್ತಿತ್ತು. ಈ ಪ್ರಮಾಣ 2015-16 ರಲ್ಲಿ 2,000 ಹೆಕ್ಟೇರ್ ಗಳಿಗೆ ಏರಿಕೆಯಾಯಿತು.  2016 ರಿಂದ 2022 ವರೆಗೆ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಪದ್ಧತಿ ಬೆಳವಣಿಗೆ ಆಗದೇ ಇರುವುದು ಬೆಳಕಿಗೆ ಬಂದಿದೆ. 

ಕೇಂದ್ರ ಸರ್ಕಾರ ಸಾವಯವ ಕೃಷಿ ಉತ್ತೇಜನಕ್ಕಾಗಿ ಪರಂಪರಾಗತ್ ಕೃಷಿ ವಿಕಾಸ್ ಯೋಜನೆ (ಪಿಕೆವಿವೈ) ಯೋಜನೆಯನ್ನು ಜಾರಿಗೊಳಿಸಿದೆ.  ಗುಜರಾತ್ ರಾಜ್ಯ ತನ್ನದೇ ಆದ ಸಾವಯವ ಕೃಷಿ ಕಾರ್ಯನೀತಿಯನ್ನು ಅಳವಡಿಸಿಕೊಂಡಿದೆ. ಆದರೆ ರೈತರನ್ನು ಅದರೆಡೆಗೆ ಆಕರ್ಷಿಸಲು ವಿಫಲವಾಗಿದೆ.

ಪಿಕೆವಿವೈ ಅಡಿಯಲ್ಲಿ ದೇಶಾದ್ಯಂತ 10,27,865  ಮಂದಿ ಸಾವಯವ ಕೃಷಿಕರಿದ್ದು, ಗುಜರಾತ್ ನ ಕೃಷಿಕರ ಹೆಸರು ದಾಖಲಾಗಿಲ್ಲ. 2023 ರ ಮಾ.21 ರಂದು ಲೋಕಸಭೆಗೆ ಕೇಂದ್ರ ನೀಡಿದ ಉತ್ತರದಲ್ಲಿ,  ಪಿಎಂಕೆವೈ ಅನುದಾನಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ನಿಧಾನಗತಿಯ ಪ್ರಗತಿ ಹೊಂದಿದ್ದಕ್ಕಾಗಿ ಕೇಂದ್ರ 2021-22 ರ ಅವಧಿಯಲ್ಲಿ ಗುಜರಾತ್ ಗೆ ಯಾವುದೇ ರೀತಿಯ ಅನುದಾನವನ್ನೂ ನೀಡಿಲ್ಲ.

6 ವರ್ಷಗಳ ಹಿಂದೆ ಗುಜರಾತ್ ನೈಸರ್ಗಿಕ ಕೃಷಿ ಹಾಗೂ ಸಾವಯವ ಕೃಷಿ ವಿವಿಯನ್ನು ರಾಜ್ಯ ಸರ್ಕಾರದಿಂದ ಸ್ಥಾಪಿಸಿ, ಆ ಮೂಲಕ ಕೃಷಿಕರನ್ನು ಹೆಚ್ಚು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ಉದ್ದೇಶವನ್ನು ಹೊಂದಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com