ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ: ಇಂದಿನಿಂದ ಚುನಾವಣಾ ಬಾಂಡ್ ಗಳ ಮಾರಾಟ ಆರಂಭ

ಪಂಚರಾಜ್ಯಗಳ ಚುನಾವಣೆಗೆ ಕೆಲ ತಿಂಗಳು ಬಾಕಿಯಿರುವಂತೆಯೇ ಚುನಾವಣಾ ಬಾಂಡ್ ಗಳ ಮಾರಾಟ ಆರಂಭವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲಾ 29 ಶಾಖೆಗಳಲ್ಲಿ ಇಂದಿನಿಂದ ಏಪ್ರಿಲ್ 12 ರವರೆಗೂ ಈ ಮಾರಾಟ ಮುಂದುವರೆಯಲಿದೆ. ಇದು ಚುನಾವಣಾ ಬಾಂಡ್ ಗಳ 27ನೇ ಮಾರಾಟವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಂಚರಾಜ್ಯಗಳ ಚುನಾವಣೆಗೆ ಕೆಲ ತಿಂಗಳು ಬಾಕಿಯಿರುವಂತೆಯೇ ಚುನಾವಣಾ ಬಾಂಡ್ ಗಳ ಮಾರಾಟ ಆರಂಭವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲಾ 29 ಶಾಖೆಗಳಲ್ಲಿ ಇಂದಿನಿಂದ ಏಪ್ರಿಲ್ 12 ರವರೆಗೂ ಈ ಮಾರಾಟ ಮುಂದುವರೆಯಲಿದೆ. ಇದು ಚುನಾವಣಾ ಬಾಂಡ್ ಗಳ 27ನೇ ಮಾರಾಟವಾಗಿದೆ. 

ಈ ವರ್ಷದ ಕೊನೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. 2018ರ ಜನವರಿ 2 ರಂದು ಚುನಾವಣಾ ಬಾಂಡ್ ಗಳ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. 
ದೇಶದಲ್ಲಿ ರಾಜಕೀಯ ದೇಣಿಗೆ ವ್ಯವಸ್ಥೆಯನ್ನು ಶುದ್ಧೀಕರಿಸಲು ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುಂಚೆ ಏಪ್ರಿಲ್ ನಲ್ಲಿ 26ನೇ ಕಂತಿನ ಚುನಾವಣಾ ಬಾಂಡ್ ಗಳ ಮಾರಾಟ ವಾಗಿತ್ತು.

ಸಾಮಾನ್ಯವಾಗಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ  10 ದಿನಗಳ ಕಾಲ ಚುನಾವಣಾ ಬಾಂಡ್ ಗಳ ಮಾರಾಟ ನಡೆಯುತ್ತದೆ ಅಥವಾ ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಬಹುದು. ನಿಬಂಧನೆಗಳ ಪ್ರಕಾರ, ಭಾರತದ ಪ್ರಜೆ ಅಥವಾ ಭಾರತದಲ್ಲಿ ಸಂಘಟಿತ ಅಥವಾ ಸ್ಥಾಪಿಸಿದ ವ್ಯಕ್ತಿಯಿಂದ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು. ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳೊಂದಿಗೆ ಜಂಟಿಯಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು.

ಕಳೆದ ಸಾರ್ವತ್ರಿಕ ಚುನಾವಣೆ ಅಥವಾ ವಿಧಾನಸಭೆಯಲ್ಲಿ ಶೇಕಡಾ 1ರಷ್ಟು ಮತಗಳನ್ನು ಪಡೆದ ನೋಂದಾಯಿತ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಚುನಾವಣಾ ಬಾಂಡ್‌ಗಳನ್ನು ಅರ್ಹ ರಾಜಕೀಯ ಪಕ್ಷವು ಅಧಿಕೃತ  ಬ್ಯಾಂಕ್ ಖಾತೆಯ ಮೂಲಕ ಸಲ್ಲಿಸಬೇಕಾಗುತ್ತದೆ.

ಚುನಾವಣಾ ಬಾಂಡ್ ಗಳ ಮಾರಾಟವಾದ ದಿನದಿಂದ 15 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಮಾನ್ಯತೆ ಅವಧಿಯ ನಂತರ ಚುನಾವಣಾ ಬಾಂಡ್ ಠೇವಣಿ ಮಾಡಿದರೆ ಯಾವುದೇ ರಾಜಕೀಯ ಪಕ್ಷಕ್ಕೆ ಪಾವತಿ ಮಾಡಲು ಆಗಲ್ಲ.  ಅರ್ಹ ರಾಜಕೀಯ ಪಕ್ಷವು ತನ್ನ ಖಾತೆಯಲ್ಲಿ ಠೇವಣಿ ಮಾಡಿದ ಎಲೆಕ್ಟೋರಲ್ ಬಾಂಡ್ ನ್ನು ಅದೇ ದಿನ ಜಮಾ ಆಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com