ಅವರ ಹೇಳಿಕೆಯಿಂದ ನಮಗೆ ನೋವುಂಟಾಗಿತ್ತು: ಚಂದ್ರಶೇಖರ್ ಆಜಾದ್ ಮೇಲೆ ದಾಳಿ ನಡೆಸಿದ ಆರೋಪಿಗಳ ಹೇಳಿಕೆ

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲೆ ದಾಳಿ ನಡೆಸಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್

ಲಖನೌ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲೆ ದಾಳಿ ನಡೆಸಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಆಜಾದ್ ಅವರ ಹೇಳಿಕೆಯಿಂದ ನಮಗೆ ಘಾಸಿಯುಂಟಾಗಿತ್ತು. ಆದ್ದರಿಂದ ದಾಳಿ ಮಾಡಿದೆವು ಎಂದು ಆರೋಪಿಗಳು ಹೇಳಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಉತ್ತರ ಪ್ರದೇಶದ ಸಹರನ್ ಪುರ ಜಿಲ್ಲೆಯ ಡಿಯೋಬಂದ್ ನಲ್ಲಿ ದಲಿತ ನಾಯಕ ಆಜಾದ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಈ ನಾಲ್ವರು ಆರೋಪಿಗಳನ್ನು ಹರ್ಯಾಣದ ಅಂಬಾಲದಿಂದ ಬಂಧಿಸಲಾಗಿದೆ.

ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್  ಬಂಧಿತ ಆರೋಪಿಗಳ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ವಿಕಾಸ್ ಅಲಿಯಾಸ್ ವಿಕ್ಕಿ, ಪ್ರಶಾಂತ್ ಮತ್ತು ಲವಿಶ್ ಎಂದು ಗುರುತಿಸಲಾಗಿದೆ ಎಲ್ಲರೂ ದೇವಬಂದ್‌ನ ರಂಖಂಡಿ ಮತ್ತು ಕರ್ನಾಲ್ ಜಿಲ್ಲೆಯ ವಿಕಾಸ್ ನ ನಿವಾಸಿಗಳಾಗಿದ್ದಾರೆ.

ಅವರಿಂದ ಅಪರಾಧಕ್ಕೆ ಬಳಸಲಾದ ಎರಡು ದೇಶ ನಿರ್ಮಿತ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಆಜಾದ್ ನೀಡುತ್ತಿದ್ದ ಅನುಚಿತ (ಉಲ್ಟಾ ಸೀದೆ ಬಯಾನೋ) ಹೇಳಿಕೆಗಳಿಂದ ಕುಪಿತಗೊಂಡು ತಾವು ಗುಂಡಿನ ದಾಳಿ ನಡೆಸಿದ್ದಾಗಿ ಆರೋಪಿಗಳು ಪೊಲೀಸ್ ಅಧಿಕಾರಿಗಳೆದುರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com