ಎನ್‌ಸಿಪಿ ಪಕ್ಷವನ್ನು ಒಡೆಯಲು ಬಿಜೆಪಿ ಬಯಸಿತ್ತು ಎಂಬುದು ಗೊತ್ತಿತ್ತು: ರೋಹಿತ್ ಪವಾರ್

ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್, ಪಕ್ಷವನ್ನು ಒಡೆಯುವ ಬಿಜೆಪಿಯ 'ಉದ್ದೇಶ'ದ ಬಗ್ಗೆ ಹಿರಿಯ ನಾಯಕರಿಗೆ ಸುಳಿವು ಇತ್ತು. ಆದರೆ, ಆಡಳಿತದ ಮೈತ್ರಿಕೂಟದೊಂದಿಗೆ ಕೈಜೋಡಿಸುವ ಅಜಿತ್ ಪವಾರ್ ಅವರ ತ್ವರಿತ ನಡೆಯ ಬಗ್ಗೆ ಸುಳಿವು ಇರಲಿಲ್ಲ ಎಂದು ಸೋಮವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್
ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್

ಮುಂಬೈ: ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್, ಪಕ್ಷವನ್ನು ಒಡೆಯುವ ಬಿಜೆಪಿಯ 'ಉದ್ದೇಶ'ದ ಬಗ್ಗೆ ಹಿರಿಯ ನಾಯಕರಿಗೆ ಸುಳಿವು ಇತ್ತು. ಆದರೆ, ಆಡಳಿತದ ಮೈತ್ರಿಕೂಟದೊಂದಿಗೆ ಕೈಜೋಡಿಸುವ ಅಜಿತ್ ಪವಾರ್ ಅವರ ತ್ವರಿತ ನಡೆಯ ಬಗ್ಗೆ ಸುಳಿವು ಇರಲಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಪವಾರ್, ತಾನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆಗಿದ್ದೇನೆ ಎಂದರು.

ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ತನ್ನ ಬೆಂಬಲಿಗ ಶಾಸಕರ ಜೊತೆ ಸೇರಿ ಶಿವಸೇನಾ (ಶಿಂದೆ ಬಣ)-ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಅಜಿತ್ ಪವಾರ್ ಭಾನುವಾರ ಮಧ್ಯಾಹ್ನ ಉಪಮುಖ್ಯಮಂತ್ರಿಯಾಗಿ, ಇತರ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಅವರ ಹಿರಿಯ ಸಹೋದರರಾದ ಅಪ್ಪಾಸಾಹೇಬ್ ಪವಾರ್ ಅವರ ಮೊಮ್ಮಗ ರೋಹಿತ್ ಪವಾರ್, 'ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ನಮಗೆ ಯಾವುದೇ ಸುಳಿವಿರಲಿಲ್ಲ. ಆದರೆ, ಬಿಜೆಪಿಯು ಎನ್‌ಸಿಪಿಯನ್ನು ಒಡೆಯಲು ಉತ್ಸುಕವಾಗಿದೆ, ನಮಗೆ ಇದು ತಿಳಿದಿತ್ತು' ಎಂದಿದ್ದಾರೆ.

ಆದರೆ, ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ನನ್ನಂತಹವರು ರಾಜಕೀಯಕ್ಕೆ ಸೇರುವ ಮೂಲಕ ತಪ್ಪು ಮಾಡಿದ್ದೇವೆಯೇ ಎಂದು ನಮಗೆ ಆಶ್ಚರ್ಯವಾಗುತ್ತದೆ ಎಂದು ಅವರು ಹೇಳಿದರು.

ಅಜಿತ್ ಪವಾರ್ ಅವರ ನಡೆಯ ಬಗ್ಗೆ ಕೇಳಿದ ಪ್ರಶ್ನೆಗೆ, ತಮ್ಮ ಚಿಕ್ಕಪ್ಪ ಈ ರೀತಿ ಮಾಡಿದ್ದಕ್ಕೆ ನನಗೆ ನೋವಾಗಿದೆ. 'ಅವರು (ಅಜಿತ್ ಪವಾರ್) ವೈಯಕ್ತಿಕವಾಗಿಯೂ ನನಗೆ ಸಹಾಯ ಮಾಡಿದ್ದಾರೆ. ಆದರೆ, ರಾಜಕೀಯವಾಗಿ, ನಾವೆಲ್ಲರೂ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಜೊತೆಗಿದ್ದೇವೆ' ಎಂದು ಅವರು ಹೇಳಿದರು.

ಹೀಗೊಂದು ವೇಳೆ ಬಹುಮತ ಸಾಬೀತಿಗೆ ಅವಕಾಶ ಸಿಕ್ಕರೆ, ಶರದ್ ಪವಾರ್ ಅವರೇ ಜನ ನಾಯಕನಾಗಿ ಹೊರಬರುತ್ತಾರೆ. 'ರಾಜ್ಯವು ಹೋರಾಟ ಮತ್ತು ಪರಿಶ್ರಮದ ಇತಿಹಾಸವನ್ನು ಹೊಂದಿದೆ, ನಾವು ಅದನ್ನು ಮುಂದುವರಿಸುತ್ತೇವೆ' ಎಂದು ರೋಹಿತ್ ಪವಾರ್ ಹೇಳಿದರು. 

ಒಂಬತ್ತು ಎನ್‌ಸಿಪಿ ನಾಯಕರು ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ, ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಜುಲೈ 5 ರಂದು ಮುಂಬೈನಲ್ಲಿ ಈಗಿನ ಬೆಳವಣಿಗೆಗಳು ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com