ಎನ್ ಸಿಪಿಯನ್ನು ಮತ್ತೆ ಕಟ್ಟುವುದು ಸುಲಭವಲ್ಲ: ನಾರಾಯಣ ರಾಣೆ

ಈಗ ಒಡೆದಿರುವ ಎನ್ ಸಿಪಿಯನ್ನು ಮತ್ತೆ ಕಟ್ಟುವುದು ಸುಲಭವಲ್ಲ ಎಂದು ಕೇಂದ್ರ ಸಚಿವ ಹಾಗೂ ಮಹಾರಾಷ್ಟ್ರ ಬಿಜೆಪಿ ಮುಖಂಡ ನಾರಾಯಣ ರಾಣೆ ಹೇಳಿದ್ದಾರೆ.
ನಾರಾಯಣ ರಾಣೆ
ನಾರಾಯಣ ರಾಣೆ

ಮುಂಬೈ: ಈಗ ಒಡೆದಿರುವ ಎನ್ ಸಿಪಿಯನ್ನು ಮತ್ತೆ ಕಟ್ಟುವುದು ಸುಲಭವಲ್ಲ ಎಂದು ಕೇಂದ್ರ ಸಚಿವ ಹಾಗೂ ಮಹಾರಾಷ್ಟ್ರ ಬಿಜೆಪಿ ಮುಖಂಡ ನಾರಾಯಣ ರಾಣೆ ಹೇಳಿದ್ದಾರೆ.

ಎನ್‌ಸಿಪಿ ವಿಭಜನೆ ಕುರಿತು ಮಾತನಾಡಿದ ಅವರು,  ಚುನಾವಣಾ ಸಮೀಪದಲ್ಲಿ ಅನೇಕ ಎಂವಿಎ ನಾಯಕರು ನಮ್ಮನ್ನು ಸೇರಲಿದ್ದಾರೆ. ತಮ್ಮ ಪಕ್ಷ ಪ್ರಬಲವಾಗಿದೆ ಎಂದು ಹಿಂದೆ ಶರದ್ ಪವಾರ್ ಹೇಳಿದ್ದರು. ಆದರೆ, ಈಗ 40 ಜನರು ಅವರನ್ನು ತೊರೆದಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಉದ್ಧವ್ ಠಾಕ್ರೆ  ಆತಂಕದಲ್ಲಿದ್ದಾರೆ ಅವರಿಗೆ ಏನೂ ಉಳಿದಿಲ್ಲ  ಎಂದರು. 

ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಪಕ್ಷದ ನಾಯಕರು ಮಹಾರಾಷ್ಟ್ರದಲ್ಲಿ ಭಾನುವಾರ ಅಚ್ಚರಿಯ ಮತ್ತು ನಾಟಕೀಯ ರಾಜಕೀಯ ನಡೆಯಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ನಂತರ, ಪಕ್ಷ ತನ್ನ ಒಂಬತ್ತು ನಾಯಕರ ವಿರುದ್ಧ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಅನರ್ಹತೆ ಅರ್ಜಿ ಸಲ್ಲಿಸಿದೆ.

ಪಕ್ಷ ತೊರೆಯುತ್ತಿರುವ ಬಗ್ಗೆ  ಅವರು ಯಾರಿಗೂ ತಿಳಿಸಿಲ್ಲ, ಇದು ಎನ್ ಸಿಪಿಗೆ ವಿರುದ್ಧವಾಗಿದ್ದು, ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ. ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಎನ್ ಸಿಪಿ ಮುಖಂಡ ಜಯಂತ್ ಪಾಟೀಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com