ದೆಹಲಿಯಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ, ಕೆಜಿಗೆ 140 ರೂ.!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಮಳೆಯಿಂದಾಗಿ ಉತ್ಪಾದನಾ ಕೇಂದ್ರಗಳಿಂದ ಪೂರೈಕೆ ಸ್ಥಗಿತಗೊಂಡ ಕಾರಣ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ  ಟೊಮೆಟೊ ರಿಟೇಲ್ ಬೆಲೆ ಕೆಜಿಗೆ 140 ರೂ.ಗೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಮಳೆಯಿಂದಾಗಿ ಉತ್ಪಾದನಾ ಕೇಂದ್ರಗಳಿಂದ ಪೂರೈಕೆ ಸ್ಥಗಿತಗೊಂಡ ಕಾರಣ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ  ಟೊಮೆಟೊ ರಿಟೇಲ್ ಬೆಲೆ ಕೆಜಿಗೆ 140 ರೂ.ಗೆ ಏರಿಕೆಯಾಗಿದೆ.

ಏಷ್ಯಾದ ಅತಿದೊಡ್ಡ ಸಗಟು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಾದ ಆಜಾದ್‌ಪುರ ಮಂಡಿಯಲ್ಲಿ ಸೋಮವಾರ ಟೊಮೆಟೊ ವೋಲ್ ಸೇಲ್ ಬೆಲೆ ಗುಣಮಟ್ಟವನ್ನು ಅವಲಂಬಿಸಿ ಕೆಜಿಗೆ 60-120 ರೂ.ವರೆಗೆ ಮಾರಾಟವಾಗಿದೆ.

ಮದರ್ ಡೈರಿಯ ಸಫಲ್ ಭಾನುವಾರ ಟೊಮೆಟೊ ಕೆಜಿಗೆ 99 ರೂ.ಗೆ ಮಾರಾಟ ಮಾಡಿದರೆ, ಆನ್‌ಲೈನ್ ಚಿಲ್ಲರೆ ವ್ಯಾಪಾರಿ ಒಟಿಪಿ, ಟೊಮೆಟೊ ಹೈಬ್ರಿಡ್‌ಗೆ ಕೆಜಿಗೆ 140 ರೂ. ಗೆ ಮಾರಾಟ ಮಾಡಿದೆ ಮತ್ತು ಬಿಗ್‌ಬಾಸ್ಕೆಟ್ ನಲ್ಲಿ ಕೆಜಿಗೆ 105-110 ರೂ. ಇತ್ತು.

ಪ್ರಮುಖ ಉತ್ಪಾದನಾ ಕೇಂದ್ರಗಳಿಂದ ಪೂರೈಕೆ ಕಡಿಮೆಯಾದ ಕಾರಣ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ. ಮಳೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಆಜಾದ್‌ಪುರ ಟೊಮೆಟೊ ಸಂಘದ ಅಧ್ಯಕ್ಷ ಅಶೋಕ್ ಕೌಶಿಕ್ ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com