ಭೀಕರ ವಿಡಿಯೋ: ನಾಗಾಲ್ಯಾಂಡ್‌ನಲ್ಲಿ ಭೂಕುಸಿತ; ಕಾರಿನ ಮೇಲೆ ಹರಿದ ಬೃಹತ್ ಬಂಡೆ, ಕಾರು ಜಖಂ ಇಬ್ಬರ ಸಾವು!

ಈಶಾನ್ಯ ಭಾರತದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭಾರಿ ಮಳೆಯಿಂದ ಸಂಭವಿಸುತ್ತಿರುವ ಭೂಕುಸಿತದಿಂದಾಗಿ ಬೃಹತ್ ಬಂಡೆಯೊಂದು ಕಾರಿನ ಮೇಲೆ ಉರುಳಿದ್ದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ಜಾರೆ.
ಕಾರಿನ ಮೇಲೆ ಹರಿದ ಬೃಹತ್ ಬಂಡೆ
ಕಾರಿನ ಮೇಲೆ ಹರಿದ ಬೃಹತ್ ಬಂಡೆ

ಗುವಾಹತಿ: ಈಶಾನ್ಯ ಭಾರತದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭಾರಿ ಮಳೆಯಿಂದ ಸಂಭವಿಸುತ್ತಿರುವ ಭೂಕುಸಿತದಿಂದಾಗಿ ಬೃಹತ್ ಬಂಡೆಯೊಂದು ಕಾರಿನ ಮೇಲೆ ಉರುಳಿದ್ದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ಜಾರೆ.

ನಾಗಾಲ್ಯಾಂಡ್‌ನ ದಿಮಾಪುರ್ ಮತ್ತು ಕೊಹಿಮಾ ನಡುವಿನ ಚುಮೌಕೆಡಿಮಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 29 ರಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆಯ ನಡುವೆ ಸಂಜೆ 5 ಗಂಟೆ ಸುಮಾರಿಗೆ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ. ಈ ವೇಳೆ ಬೃಹತ್ ಬಂಡೆಯೊಂದು ರಸ್ತೆ ಮೇಲೆ ಉರುಳಿದ್ದು ರಸ್ತೆ ಮೇಲೆ ಚಲಿಸುತ್ತಿದ್ದ ಕಾರಿನ ಮೇಲೆ ಹರಿದಿದೆ.

ಈ ವೇಳೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಮತ್ತೋರ್ವ ಗಾಯಾಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಅಂತೆಯೇ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಇಡೀ ಘಟನೆ ಹಿಂಬದಿಯಲ್ಲಿದ್ದ ಕಾರಿನಲ್ಲಿದ್ದ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ಭೀಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಗಾಯಾಳುಗಳಿಗೆ ತುರ್ತು ಸೇವೆಗಳು ಮತ್ತು ಅಗತ್ಯ ವೈದ್ಯಕೀಯ ನೆರವು ನೀಡಲು ತಮ್ಮ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಸಂತ್ರಸ್ತರ ಕುಟುಂಬಗಳಿಗೆ ₹ 4 ಲಕ್ಷ ಧನಸಹಾಯವನ್ನು ನಾಗಾಲ್ಯಾಂಡ್ ಸಿಎಂ ಘೋಷಣೆ ಮಾಡಿದ್ದಾರೆ.

'ಪಕಲಾ ಪಹಾರ್' ರಹಸ್ಯ
ಇನ್ನು ದುರಂತ ನಡೆದ ದಿಮಾಪುರ್ ಮತ್ತು ಕೊಹಿಮಾ ನಡುವಿನ ಚುಮೌಕೆಡಿಮಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 29ರ ಈ ರಸ್ತೆ 'ಪಕಲಾ ಪಹಾರ್' ಎಂದೇ ಖ್ಯಾತಿ ಪಡೆದಿದೆ. ಈ ಪ್ರದೇಶ ಭೂಕುಸಿತಗಳು ಮತ್ತು ಬಂಡೆಗಳ ಕುಸಿತಕ್ಕೆ ಕುಖ್ಯಾತಿ ಪಡೆದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com