ಪ್ರಧಾನಿ ಮೋದಿ ಆಯೋಜಿಸಿದ್ದ ವರ್ಚ್ಯುಯಲ್ ಎಸ್ ಸಿಒ ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಪುಟಿನ್, ಷಿ ಜಿನ್ಪಿಂಗ್

ಪ್ರಧಾನಿ ಮೋದಿ ಆಯೋಜಿಸಿರುವ ವರ್ಚ್ಯುಯಲ್ ಎಸ್ ಸಿಒ ಶೃಂಗಸಭೆಯನ್ನು ಆಯೋಜಿಸಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಭಾಗಿಯಾಗಲಿದ್ದಾರೆ. 
ಪ್ರಧಾನಿ ಮೋದಿ-ವ್ಲಾದಿಮಿರ್ ಪುತಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್
ಪ್ರಧಾನಿ ಮೋದಿ-ವ್ಲಾದಿಮಿರ್ ಪುತಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್
Updated on

ನವದೆಹಲಿ: ಪ್ರಧಾನಿ ಮೋದಿ ಆಯೋಜಿಸಿರುವ ವರ್ಚ್ಯುಯಲ್ ಎಸ್ ಸಿಒ ಶೃಂಗಸಭೆಯನ್ನು ಆಯೋಜಿಸಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಭಾಗಿಯಾಗಲಿದ್ದಾರೆ. 

ಈ ಶೃಂಗಸಭೆಯಲ್ಲಿ ಭಾರತ ಇರಾನ್ ನ್ನು ಸೇರಿಸಿಕೊಂಡು ಹಾಗೂ ಬೆಲಾರಸ್ ಗೆ ಸದಸ್ಯತ್ವದ ಹಾದಿಯನ್ನು ಸುಗಮಗೊಳಿಸಿ ಯುರೇಷಿಯನ್ ಗುಂಪಿನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಿದೆ. 

ಮಂಗಳವಾರ ವರ್ಚ್ಯುಯಲ್ ಸಭೆ ನಡೆಯಲಿದ್ದು, ರಷ್ಯಾದಲ್ಲಿ ವ್ಯಾಗ್ನರ್ ಬಂಡಾಯದ ಪ್ರಹಸನದ ಬಳಿಕ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

2001 ರಲ್ಲಿ ರಚನೆಯಾದ ಶಾಂಘೈ ಸಹಕಾರ ಸಂಘದಲ್ಲಿ ಚೀನಾ, ರಷ್ಯಾ, ಕೇಂದ್ರ ಏಷ್ಯಾದ ಕೆಲವು ರಾಷ್ಟ್ರಗಳಿದ್ದು, ನಂತರದಲ್ಲಿ ಭಾರತ ಪಾಕ್ ಸೇರ್ಪಡೆಗೊಂಡಿದ್ದವು,  ಈಗ 8 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಶಾಂಘೈ ಸಹಕಾರ ಸಂಘದಲ್ಲಿ ಯುರೇಷಿಯಾದಲ್ಲಿ ಪಶ್ಚಿಮದ ಪ್ರಭಾವವನ್ನು ತಗ್ಗಿಸುವ ಉದ್ದೇಶ ಹೊಂದಿರುವ ರಾಜಕೀಯ ಮತ್ತು ಭದ್ರತಾ ಗುಂಪಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com