ಮಣಿಪುರ ಹಿಂಸಾಚಾರ: ಘರ್ಷಣೆಯ ನಂತರ ಐಆರ್‌ಬಿ ಸಿಬ್ಬಂದಿ ಮನೆಗೆ ಬೆಂಕಿ ಹಚ್ಚಿದ ಗುಂಪು

ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಆಕ್ರೋಶಗೊಂಡ ಗುಂಪೊಂದು ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಸಿಬ್ಬಂದಿಯ ಮನೆಗೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ
ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ

ಇಂಫಾಲ: ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಆಕ್ರೋಶಗೊಂಡ ಗುಂಪೊಂದು ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಸಿಬ್ಬಂದಿಯ ಮನೆಗೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬಂದೂಕುಗಳನ್ನು ಲೂಟಿ ಮಾಡಲು 4 ಕಿಮೀ ದೂರದಲ್ಲಿರುವ ವಾಂಗ್ಬಾಲ್‌ನಲ್ಲಿರುವ 3ನೇ ಐಆರ್‌ಬಿ ಶಿಬಿರದ ಮೇಲೆ 700-800 ಜನರ ಗುಂಪು ದಾಳಿ ಮಾಡಲು ಯತ್ನಿಸಿದಾಗ ನಡೆದ ಘರ್ಷಣೆಯಲ್ಲಿ ರೊನಾಲ್ಡೊ ಎಂದು ಗುರುತಿಸಲಾದ 27 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ನಂತರ ಮಂಗಳವಾರ ರಾತ್ರಿ ಸಮರಂನಲ್ಲಿ ಈ ಘಟನೆ ನಡೆದಿದೆ.

ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದವು ಮತ್ತು ಮೊದಲಿಗೆ ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಬುಲೆಟ್‌ಗಳನ್ನು ಬಳಸಿದವು. ಆದರೆ, ಶಸ್ತ್ರಸಜ್ಜಿತ ಗುಂಪು ಗುಂಡು ಹಾರಿಸಿ ಪಡೆಗಳನ್ನು ಹಿಮ್ಮೆಟ್ಟಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಪಡೆಗಳು ಅಲ್ಲಿಗೆ ತಲುಪುವುದನ್ನು ತಡೆಯಲು ಗುಂಪು ಶಿಬಿರಕ್ಕೆ ಹೋಗುವ ರಸ್ತೆಗಳನ್ನು ಅನೇಕ ಸ್ಥಳಗಳಲ್ಲಿ ನಿರ್ಬಂಧಿಸಿತು. ಆದರೂ, ಪಡೆಗಳು ಅಲ್ಲಿಗೆ ತೆರಳಿದವು ಎಂದು ಅವರು ಹೇಳಿದರು.

ಶಿಬಿರಕ್ಕೆ ತೆರಳುತ್ತಿದ್ದ ಅಸ್ಸಾಂ ರೈಫಲ್ಸ್ ತಂಡದ ಮೇಲೆ ಗುಂಪು ದಾಳಿ ಮಾಡಿದೆ. ಅವರು ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದರು. ಈ ವೇಳೆ ಸೈನಿಕರೊಬ್ಬರು ಗಾಯಗೊಂಡರು ಮತ್ತು ಅವರ ವಾಹನವನ್ನು ಸುಟ್ಟುಹಾಕಿದರು. ಯೋಧನ ಕಾಲಿಗೆ ಗುಂಡೇಟು ತಗುಲಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘರ್ಷಣೆಯಲ್ಲಿ, ರೊನಾಲ್ಡೊ ಎಂದು ಗುರುತಿಸಲಾದ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಲಾಯಿತು. ಆತನನ್ನು ಮೊದಲು ತೌಬಲ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ನಂತರ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಇಂಫಾಲ್‌ನ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಲಾಯಿತು. ಆದರೆ, ರಾಜ್ಯ ರಾಜಧಾನಿಗೆ ತೆರಳುವ ಮಾರ್ಗದಲ್ಲಿ ಆತ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘರ್ಷಣೆಯಲ್ಲಿ ಇತರ ಹತ್ತು ಮಂದಿ ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಆರು ಮಂದಿ ಗಂಭೀರ ಗಾಯಗಳೊಂದಿಗೆ ಇಂಫಾಲ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com