ಅವಿವಾಹಿತರು, ವಿಧವೆಯರಿಗೆ ಮಾಸಿಕ 2,750 ರೂ. ಭತ್ಯೆ; ಹರಿಯಾಣ ಸರ್ಕಾರ ಘೋಷಣೆ

ಹರಿಯಾಣ ಸರ್ಕಾರ ಕಡಿಮೆ ಆದಾಯವುಳ್ಳ  45 ರಿಂದ 60 ವರ್ಷದೊಳಗಿನ  ಅವಿವಾಹಿತರಿಗೆ ಮಾಸಿಕ 2,750 ರೂಪಾಯಿಗಳ ಭತ್ಯೆಯನ್ನು ಗುರುವಾರ ಘೋಷಿಸಿದೆ. ವಿಧವೆಯವರಿಗೂ ಇದೇ ರೀತಿಯ ಯೋಜನೆಯನ್ನು ಪ್ರಕಟಿಸಿದೆ. 
ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್
ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್
Updated on

ಚಂಡೀಗಡ: ಹರಿಯಾಣ ಸರ್ಕಾರ ಕಡಿಮೆ ಆದಾಯವುಳ್ಳ  45 ರಿಂದ 60 ವರ್ಷದೊಳಗಿನ  ಅವಿವಾಹಿತರಿಗೆ ಮಾಸಿಕ 2,750 ರೂಪಾಯಿಗಳ ಭತ್ಯೆಯನ್ನು ಗುರುವಾರ ಘೋಷಿಸಿದೆ. ವಿಧವೆಯವರಿಗೂ ಇದೇ ರೀತಿಯ ಯೋಜನೆಯನ್ನು ಪ್ರಕಟಿಸಿದೆ. 

45-60 ವರ್ಷ ವಯಸ್ಸಿನ ಮತ್ತು ವಾರ್ಷಿಕವಾಗಿ 1.80 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಅವಿವಾಹಿತ ಪುರುಷ ಮತ್ತು ಮಹಿಳೆಯರಿಗೆ ತಿಂಗಳಿಗೆ 2,750 ರೂಪಾಯಿ ಭತ್ಯೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗುರುವಾರ ಹೇಳಿದರು. 

ಅದೇ ರೀತಿ ವಾರ್ಷಿಕ 3 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ 40-60 ವರ್ಷದ ವಿಧವೆಯರಿಗೂ ಪ್ರತಿ ತಿಂಗಳು 2,750 ರೂ. ಭತ್ಯೆ ನೀಡಲಾಗುವುದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 240 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ನಿಗದಿತ ವಯೋಮಿತಿ ಮತ್ತು ಆದಾಯ ಮಿತಿಯಲ್ಲಿ ಒಟ್ಟು 65,000 ಅವಿವಾಹಿತ ಪುರುಷರು,ಮಹಿಳೆಯರು ಮತ್ತು 5,687 ವಿಧವೆಯರು ಇದ್ದಾರೆ ಎಂದು ಖಟ್ಟರ್ ಹೇಳಿದರು. 

ಮಾಸಿಕ ಆದಾಯವು ಈ ಜನರ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ನೆರವಾಗಲಿದೆ. ಆದಾಯ ತೀರಾ ಕಡಿಮೆ ಇರುವವರಿಗೆ ಗೌರವಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com