ಪಶ್ಚಿಮ ಬಂಗಾಳ: 73 ಸಾವಿರ ಪಂಚಾಯತಿಗಳಿಗೆ ಮತದಾನ ಆರಂಭ; ಕಣದಲ್ಲಿ ಎರಡು ಲಕ್ಷ ಅಭ್ಯರ್ಥಿಗಳು!

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಬಿಗಿ ಭದ್ರತೆಯ ನಡುವೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಸುಮಾರು 5.67 ಕೋಟಿ ಜನರು ಮತದಾನಕ್ಕೆ ಅರ್ಹರಾಗಿದ್ದಾರೆ .
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕೋತಾ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಬಿಗಿ ಭದ್ರತೆಯ ನಡುವೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಸುಮಾರು 5.67 ಕೋಟಿ ಜನರು ಮತದಾನಕ್ಕೆ ಅರ್ಹರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ 73,887 ಸ್ಥಾನಗಳಿಗೆ ಒಟ್ಟು 2.06 ಲಕ್ಷ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ಸಂಘಟನಾ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಿರ್ಣಯಿಸಲು ಇದು ಒಂದು ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ ಎಂದು  ಹೇಳಲಾಗಿದೆ.

ರಾಜಕೀಯ ಪಕ್ಷಗಳಿಗೆ ಈ ಚುನಾವಣೆಯು ಮಹತ್ವದ್ದಾಗಿದೆ, ಜೊತೆಗೆ TMC ಸರ್ಕಾರದ ಸತತ ಮೂರನೇ ಅವಧಿಯ ಎರಡು ವರ್ಷಗಳ ನಂತರ ರಾಜ್ಯದ ಜನತೆಯ ಮನಸ್ಥಿತಿಯನ್ನು ಸ್ಥೂಲವಾಗಿ ವಿವರಿಸುತ್ತದೆ. ಜೂನ್ 8 ರಂದು ಚುನಾವಣೆಗೆ ದಿನಾಂಕಗಳನ್ನು ಘೋಷಿಸಿದ ನಂತರ ರಾಜ್ಯಾದ್ಯಂತ ಹಿಂಸಾಚಾರ ಘಟನೆಗಳು ವರದಿಯಾಗಿದ್ದು, 15 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

22 ಜಿಲ್ಲೆಗಳಲ್ಲಿ 63,229-ಗ್ರಾಮ ಪಂಚಾಯತ್ ಸ್ಥಾನಗಳು ಮತ್ತು 9,730 ಪಂಚಾಯತ್ ಸಮಿತಿ ಸ್ಥಾನಗಳಿವೆ. ಆದರೆ ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್‌ನಂತೆ 20 ಜಿಲ್ಲೆಗಳಲ್ಲಿ 928 ಜಿಲ್ಲಾ ಪರಿಷತ್ ಸ್ಥಾನಗಳು ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ (GTA) ಮತ್ತು ಸಿಲಿಗುರಿ ಉಪ-ವಿಭಾಗೀಯ ಮಂಡಳಿಗಳಿವೆ.

ಬೆಳಿಗ್ಗೆ 6 ಗಂಟೆಯಿಂದಲೇ ಮತಗಟ್ಟೆಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದವು, ಮಳೆಯ ನಡುವೆ ಜನರು ಬೇಗನೆ ಮತದಾನಕ್ಕೆ ಆಗಮಿಸಿದ್ದಾರೆ. ಆಡಳಿತಾರೂಢ ಟಿಎಂಸಿ ಜಿಲ್ಲಾ ಪರಿಷತ್‌ನ ಎಲ್ಲಾ 928 ಸ್ಥಾನಗಳು, ಪಂಚಾಯತ್ ಸಮಿತಿಗಳ 9,419 ಸ್ಥಾನಗಳು ಮತ್ತು ಗ್ರಾಮ ಪಂಚಾಯಿತಿಗಳ 61,591 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಬಿಜೆಪಿ 897 ಜಿಲ್ಲಾ ಪರಿಷತ್ ಸ್ಥಾನಗಳು, 7,032 ಪಂಚಾಯತ್ ಸಮಿತಿ ಸ್ಥಾನಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ 38,475 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಪಿಐ(ಎಂ) 747 ಜಿಲ್ಲಾ ಪರಿಷತ್ ಸ್ಥಾನಗಳು, 6,752 ಪಂಚಾಯತ್ ಸಮಿತಿ ಸ್ಥಾನಗಳು ಮತ್ತು 35,411-ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ಹೋರಾಡುತ್ತಿದೆ.

ಕಾಂಗ್ರೆಸ್ 644 ಜಿಲ್ಲಾ ಪರಿಷತ್ ಸ್ಥಾನಗಳು, 2,197 ಪಂಚಾಯತ್ ಸಮಿತಿ ಸ್ಥಾನಗಳು ಮತ್ತು 11,774 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಸುಮಾರು 70,000 ರಾಜ್ಯ ಪೊಲೀಸರೊಂದಿಗೆ ಕನಿಷ್ಠ 600 ಕಂಪನಿಗಳ ಕೇಂದ್ರ ಪಡೆಗಳನ್ನು ಚುನಾವಣೆಗೆ ನಿಯೋಜಿಸಲಾಗಿದೆ.

ತಪ್ಪದೇ ಮತದಾನ ಮಾಡುವಂತೆ ಜನರನ್ನು  ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ಶುಕ್ರವಾರ ಜನರಲ್ಲಿ ಮನವಿ ಮಾಡಿದ್ದಾರೆ.  ಅವರು ಉತ್ತರ 24 ಪರಗಣ ಜಿಲ್ಲೆಯ ಬ್ಯಾರಕ್‌ಪೋರ್ ಮತ್ತು ಬಸಿರ್ಹಾತ್ ಮತ್ತು ನಾಡಿಯಾ ಜಿಲ್ಲೆಯ ಕೆಲವು ಭಾಗಗಳಿಗೆ ಭೇಟಿ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com