ದೇಶ ಸೇವೆ ಮಾಡುವ ಯುವಕರ ಕನಸನ್ನು ಅಗ್ನಿಪಥ್ ಛಿದ್ರಗೊಳಿಸಿದೆ: ಕಾಂಗ್ರೆಸ್ ಆರೋಪ

ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಕುರಿತು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದ್ದು, ಯುವಕರ ದೇಶ ಸೇವೆ ಮಾಡುವ ಕನಸುಗಳನ್ನು ಭಗ್ನಗೊಳಿಸಿದೆ ಮತ್ತು ಅವರ ಮನಸ್ಸಿನಲ್ಲಿ ವಿವಿಧ ಆತಂಕಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿದೆ.
ಜೈರಾಮ್ ರಮೇಶ್
ಜೈರಾಮ್ ರಮೇಶ್

ನವದೆಹಲಿ: ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಕುರಿತು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದ್ದು, ಯುವಕರ ದೇಶ ಸೇವೆ ಮಾಡುವ ಕನಸುಗಳನ್ನು ಭಗ್ನಗೊಳಿಸಿದೆ ಮತ್ತು ಅವರ ಮನಸ್ಸಿನಲ್ಲಿ ವಿವಿಧ ಆತಂಕಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿದೆ.

‘ಅಗ್ನಿವೀರ’ರಾಗಿ ಭಾರತೀಯ ಸೇನೆಗೆ ಸೇರಿದ ಹಲವು ಯುವಕರು ತರಬೇತಿಯನ್ನು ಮಧ್ಯದಲ್ಲಿಯೇ ಬಿಡುತ್ತಿದ್ದಾರೆ ಎಂಬ ಮಾಧ್ಯಮ ವರದಿಯ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಮೇಶ್, ‘ಈ ಹಿಂದೆ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬುದು ಯುವಕರ ಕನಸಾಗಿತ್ತು. ದೇಶ ಸೇವೆ ಮಾಡುವ ಯುವಕರ ಸಂಕಲ್ಪವನ್ನು ಗೌರವಿಸಿ ಅವರಿಗೆ ಉತ್ತಮ ಸೌಲಭ್ಯ ಹಾಗೂ ಉದ್ಯೋಗ ಭದ್ರತೆ ನೀಡಲಾಗಿತ್ತು' ಎಂದಿದ್ದಾರೆ. 

ಮುಂದುವರಿದು, 'ಅಗ್ನಿವೀರ್ ಯೋಜನೆಯ ಬುನಾದಿಯೇ ತಪ್ಪಾಗಿದೆ. ಯುವಜನರ ದೇಶಸೇವೆಯ ಕನಸುಗಳನ್ನು ಭಗ್ನಗೊಳಿಸಿದೆ ಮತ್ತು ನಾನಾ ಆತಂಕಗಳನ್ನು ಸೃಷ್ಟಿಸಿದೆ. ಈಗ ಫಲಿತಾಂಶ ಎಲ್ಲರ ಮುಂದಿದೆ' ಎಂದು ರಮೇಶ್ ಹೇಳಿದರು.

ಅಗ್ನಿಪಥ್ ಯೋಜನೆಯು ನಾಲ್ಕು ವರ್ಷಗಳ ಕಾಲ ಸಶಸ್ತ್ರ ಪಡೆಗಳಿಗೆ ಯುವಕರನ್ನು ನೇಮಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಅದರಲ್ಲಿ ಶೇ 25ರಷ್ಟು ಮಂದಿಯನ್ನು ಉಳಿಸಿಕೊಳ್ಳುವ ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com