ಪಶ್ಚಿಮ ಬಂಗಾಳ: ಹಿಂಸಾಚಾರ ನಡೆದ 690 ಮತಗಟ್ಟೆಗಳಲ್ಲಿ ಇಂದು ಮರು ಮತದಾನ

ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಪಂಚಾಯತ್ ಚುನಾವಣೆ ಮತದಾನ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರದಲ್ಲಿ ಮತಗಟ್ಟೆಗಳನ್ನು ಧ್ವಂಸಗೊಳಿಸಿ, ಬ್ಯಾಲೆಟ್ ಪೇಪರ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಈ ಮತದಾನವನ್ನು ಅಸಿಂಧು ಎಂದು ಚುನಾವಣಾ ಆಯೋಗ ಘೋಷಿಸಿದ್ದು, ಎಲ್ಲಾ 690 ಬೂತ್‌ಗಳಲ್ಲಿ ಸೋಮವಾರ ಮರು ಮತದಾನವನ್ನು ಪ್ರಕಟಿಸಿದೆ. 
ಹಿಂಸಾಚಾರ ಪೀಡಿತ ಮತಗಟ್ಟೆಗಳ ಚಿತ್ರ
ಹಿಂಸಾಚಾರ ಪೀಡಿತ ಮತಗಟ್ಟೆಗಳ ಚಿತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಪಂಚಾಯತ್ ಚುನಾವಣೆ ಮತದಾನ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರದಲ್ಲಿ ಮತಗಟ್ಟೆಗಳನ್ನು ಧ್ವಂಸಗೊಳಿಸಿ, ಬ್ಯಾಲೆಟ್ ಪೇಪರ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಈ ಮತದಾನವನ್ನು ಅಸಿಂಧು ಎಂದು ಚುನಾವಣಾ ಆಯೋಗ ಘೋಷಿಸಿದ್ದು, ಎಲ್ಲಾ 690 ಬೂತ್‌ಗಳಲ್ಲಿ ಸೋಮವಾರ ಮರು ಮತದಾನವನ್ನು ಪ್ರಕಟಿಸಿದೆ. 

ಭಾನುವಾರ ಸಂಜೆ ಸಭೆ ನಡೆಸಿದ ರಾಜ್ಯ ಚುನಾವಣಾ ಆಯೋಗ, ಹಿಂಸಾಚಾರ ಮತ್ತಿತರ ವರದಿಗಳನ್ನು ಪರಿಶೀಲಿಸಿದ್ದು, ಅವುಗಳು ಅನೇಕ ಕಡೆ ಮತದಾನದ ಮೇಲೆ ಪರಿಣಾಮ ಬೀರಿರುವುದನ್ನು ಪರಿಗಣಿಸಿ ನಾಳೆ ಮರು ಮತದಾನದ ಆದೇಶವನ್ನು ಪ್ರಕಟಿಸಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮರು ಮತದಾನವನ್ನು ಘೋಷಿಸಿದ ಜಿಲ್ಲೆಗಳಲ್ಲಿ, ಮುರ್ಷಿದಾಬಾದ್ ನಲ್ಲಿ ಅತಿ ಹೆಚ್ಚು 175 ಮತಗಟ್ಟೆಗಳನ್ನು ಹೊಂದಿದೆ, ನಂತರ ಮಾಲ್ಡಾ 112 ಬೂತ್‌ಗಳನ್ನು ಹೊಂದಿದೆ. ಹಿಂಸಾಚಾರ ಪೀಡಿತ ನಾಡಿಯಾದ  89 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದ್ದು, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ಕ್ರಮವಾಗಿ 46 ಮತ್ತು 36 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com