ರಾಜ್ಯಸಭೆ ಚುನಾವಣೆ: ಡೆರೆಕ್ ಒ'ಬ್ರೇನ್, ಸಾಕೇತ್ ಗೋಖಲೆ ಸೇರಿ 6 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಟಿಎಂಸಿ

ಈ ತಿಂಗಳಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದ ಆರು ರಾಜ್ಯಸಭಾ ಸ್ಥಾನಗಳಿಗೆ ತೃಣಮೂಲ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಸೋಮವಾರ ಪ್ರಕಟಿಸಿದೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ನವದೆಹಲಿ/ಕೋಲ್ಕತ್ತಾ: ಈ ತಿಂಗಳಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದ ಆರು ರಾಜ್ಯಸಭಾ ಸ್ಥಾನಗಳಿಗೆ ತೃಣಮೂಲ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಸೋಮವಾರ ಪ್ರಕಟಿಸಿದೆ.

ಈ ಅಭ್ಯರ್ಥಿಗಳಲ್ಲಿ ಡೆರೆಕ್ ಒ'ಬ್ರೇನ್, ಸುಖೇಂದು ಶೇಖರ್ ರೇ ಮತ್ತು ಡೋಲಾ ಸೇನ್ ಸೇರಿದಂತೆ 6 ಅಭ್ಯರ್ಥಿಗಳನ್ನು ಟಿಎಂಸಿ ಇಂದು ಘೋಷಿಸಿದೆ.

2011 ರಿಂದ ಸಂಸದರಾಗಿರುವ ಓ'ಬ್ರೇನ್ ಅವರು ರಾಜ್ಯಸಭೆಯಲ್ಲಿ ಟಿಎಂಸಿ ನಾಯಕರಾಗಿದ್ದರೆ. 2012 ರಲ್ಲಿ ಸಂಸತ್ತಿನ ಮೇಲ್ಮನೆಗೆ ಮೊದಲ ಆಯ್ಕೆಯಾಗಿದ್ದ ರೇ ಅವರು ಉಪ ಮುಖ್ಯ ಸಚೇತಕರಾಗಿದ್ದಾರೆ. 

ಬಾಂಗ್ಲಾ ಸಂಸ್ಕೃತಿ ಮಂಚ ಅಧ್ಯಕ್ಷ ಸಮೀರುಲ್ ಇಸ್ಲಾಂ, ಟಿಎಂಸಿಯ ಅಲಿಪುರ್ದಾರ್ ಜಿಲ್ಲಾಧ್ಯಕ್ಷ ಪ್ರಕಾಶ್ ಚಿಕ್ ಬರೈಕ್, ಆರ್‌ಟಿಐ ಕಾರ್ಯಕರ್ತ ಮತ್ತು ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಅವರು  ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಓ'ಬ್ರಿಯಾನ್, ರೇ ಮತ್ತು ಸೇನ್ ಅವರಲ್ಲದೆ, ಕಾಂಗ್ರೆಸ್ ಸಂಸದ ಪ್ರದೀಪ್ ಭಟ್ಟಾಚಾರ್ಯ, ಟಿಎಂಸಿಯ ಅಸ್ಸಾಂ ನಾಯಕಿ ಸುಶ್ಮಿತಾ ದೇವ್ ಮತ್ತು ಅದರ ಡಾರ್ಜಿಲಿಂಗ್ ನಾಯಕಿ ಶಾಂತಾ ಛೆಟ್ರಿ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಈ ಆರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಗೋವಾದ ಮಾಜಿ ಮುಖ್ಯಮಂತ್ರಿ ಲುಜಿನ್ಹೋ ಫಲೈರೊ ಏಪ್ರಿಲ್‌ನಲ್ಲಿ ಟಿಎಂಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಶ್ಚಿಮ ಬಂಗಾಳದಿಂದ ಏಳನೇ ರಾಜ್ಯಸಭಾ ಸ್ಥಾನವೂ ಖಾಲಿಯಾಗಿದೆ.

ಜುಲೈ 24 ರಂದು ಈ ಏಳು ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com