ರಾಜ್ಯಸಭಾ ಚುನಾವಣೆ: ಗುಜರಾತ್‍ನ ಗಾಂಧಿನಗರ ಕ್ಷೇತ್ರದಿಂದ ಎಸ್ ಜೈಶಂಕರ್ ನಾಮಪತ್ರ ಸಲ್ಲಿಕೆ!

ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಗುಜರಾತ್‍ನ ಗಾಂಧಿನಗರ ಕ್ಷೇತ್ರದಿಂದ ರಾಜ್ಯಸಭೆಗೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಎಸ್ ಜೈಶಂಕರ್
ಎಸ್ ಜೈಶಂಕರ್

ನವದೆಹಲಿ: ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಗುಜರಾತ್‍ನ ಗಾಂಧಿನಗರ ಕ್ಷೇತ್ರದಿಂದ ರಾಜ್ಯಸಭೆಗೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಜೈಶಂಕರ್ ಅವರು ಗುಜರಾತ್ ನ ಗಾಂಧಿನಗರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ಸದಸ್ಯರು ಜುಲೈ ಮತ್ತು ಆಗಸ್ಟ್ ನಲ್ಲಿ ನಿವೃತ್ತರಾಗುತ್ತಿರುವುದರಿಂದ ಜುಲೈ 24 ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.

ಸದಸ್ಯರ ನಿವೃತ್ತಿಯಿಂದಾಗಿ ರಾಜ್ಯಸಭೆಯಲ್ಲಿ ತೆರವಾಗಲಿರುವ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳದ ಡೆರೆಕ್ ಒ’ಬ್ರಿಯಾನ್ ಮತ್ತು ಗುಜರಾತ್‍ನ ಎಸ್ ಜೈಶಂಕರ್ ಸೇರಿದ್ದಾರೆ. ತೆರವಾಗಿರುವ ರಾಜ್ಯಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಜುಲೈ 13 ಕೊನೆಯ ದಿನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜುಲೈ 24 ರಂದು ಮತ ಎಣಿಕೆ ನಡೆಯಲಿದ್ದು, ವಿನಯ್ ಡಿ. ತೆಂಡೂಲ್ಕರ್ ಜುಲೈ 28 ರಂದು ನಿವೃತ್ತರಾಗಲಿರುವ ಕಾರಣ ಗೋವಾದಿಂದ ಒಂದು ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಗುಜರಾತ್‍ನಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ದಿನೇಶ್ಚಂದ್ರ ಜೆಮಲ್‍ಭಾಯ್ ಅನವಾಡಿಯಾ, ಲೋಖಂಡವಾಲಾ ಜುಗಲ್‍ಸಿನ್ನಾ ಮಾಥುರ್ಜಿ, ಸುಬ್ರಹ್ಮಣ್ಯಂ ಜೈಶಂಕರ್ ಕೃಷ್ಣಸ್ವಾಮಿ ಅವರು ಆಗಸ್ಟ್ 18 ರಂದು ನಿವೃತ್ತರಾಗುತ್ತಿದ್ದಾರೆ.

ಜೈಶಂಕರ್ ಅವರು 2019 ರಲ್ಲಿ ಗುಜರಾತ್‍ನಿಂದ ರಾಜ್ಯಸಭೆಗೆ ಆಯ್ಕೆಯಾದರು ಮತ್ತು ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರ ಸಚಿವರು 104 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಗೌರವ್ ಪಾಂಡ್ಯ 70 ಮತಗಳನ್ನು ಪಡೆದುಕೊಂಡಿದ್ದರು. ಇತ್ತೀಚಿನ ರಾಷ್ಟ್ರೀಯ ಚುನಾವಣೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಸ್ಮತಿ ಇರಾನಿ ಲೋಕಸಭೆಗೆ ಆಯ್ಕೆಯಾದ ನಂತರ ಗುಜರಾತ್‍ನಿಂದ ಎರಡು ಸ್ಥಾನಗಳು ತೆರವಾದವು. 182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿಯ ಬಲ 156 ಇರುವುದರಿಂದ ಜೈಶಂಕರ್ ಗೆಲುವು ನಿಶ್ಚಿತವಾಗಿದೆ.

ಡೆರೆಕ್ ಒ’ಬ್ರಿಯಾನ್ ಡೋಲಾ ಸೇನ್, ಪ್ರದೀಪ್ ಭಟ್ಟಾಚಾರ್ಯ, ಸುಶ್ಮಿತಾ ದೇವ್, ಶಾಂತಾ ಛೆಟ್ರಿ, ಸುಖೇಂದು ಶೇಖರ್ ರೇ ಅವರು ಆಗಸ್ಟ್ 18 ರಂದು ನಿವೃತ್ತರಾಗಲಿರುವುದರಿಂದ ಪಶ್ಚಿಮ ಬಂಗಾಳದ ಆರು ರಾಜ್ಯಸಭಾ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com