ಒಡಿಶಾ: ಮಾಧ್ಯಮರಂಗದಲ್ಲಿ ಕ್ರಾಂತಿ ಮಾಡಲು ಬಂದಿದ್ದಾಳೆ ಎಐ ಆ್ಯಂಕರ್ 'ಲೀಸಾ'!

ಕೃತಕ ಬುದ್ಧಿಮತ್ತೆಯ ಆತಂಕಗಳ ಬಗ್ಗೆ ಸುದ್ದಿ ಹೇಳುತ್ತಿದ್ದ ಸುದ್ದಿ ವಾಚಕರಿಗೆ ಮೊದಲ ಉದ್ಯೋಗ ನಷ್ಟ ಭೀತಿ ತಂದಿಟ್ಟಿದ್ದಾಳೆ ಕೃತಕ ಸುದ್ದಿ ವಾಚಕಿ 'ಲೀಸಾ'. ಇಂಗ್ಲೀಷ್‌ ಮತ್ತು ಒಡಿಯಾ ಭಾಷೆಯಲ್ಲಿ ಸುದ್ದಿ ಓದಬಲ್ಲ ಈ ಅತಿಮಾನುಷ ಆಂಕರ್‌ ಹೆಸರು 'ಲೀಸಾ'.
ಎ ಐ ಆ್ಯಂಕರ್ ಲಿಸಾ
ಎ ಐ ಆ್ಯಂಕರ್ ಲಿಸಾ
Updated on

ಭುವನೇಶ್ವರ: ಕೃತಕ ಬುದ್ಧಿಮತ್ತೆ (ಎಐ) ಬಹುತೇಕ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಕುತ್ತು ತರಬಹುದು ಎಂಬ ಸುದ್ದಿ ಇತ್ತೀಚೆಗೆ ಎಲ್ಲೆಡೆ ಹೆಚ್ಚು ಹರಿದಾಡುತ್ತಿದೆ.

ಆದರೆ, ಕೃತಕ ಬುದ್ಧಿಮತ್ತೆಯ ಆತಂಕಗಳ ಬಗ್ಗೆ ಸುದ್ದಿ ಹೇಳುತ್ತಿದ್ದ ಸುದ್ದಿ ವಾಚಕರಿಗೆ ಮೊದಲ ಉದ್ಯೋಗ ನಷ್ಟ ಭೀತಿ ತಂದಿಟ್ಟಿದ್ದಾಳೆ ಕೃತಕ ಸುದ್ದಿ ವಾಚಕಿ 'ಲೀಸಾ'.

ಒಡಿಶಾ ಮೂಲದ ಖಾಸಗಿ ಸುದ್ದಿ ವಾಹಿನಿ 'ಒಡಿಶಾ ಟಿವಿ' ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಕೃತಕ ಸುದ್ದಿ ವಾಚಕಿಯನ್ನು ಪರಿಚಯಿಸಿದೆ. ಇಂಗ್ಲೀಷ್‌ ಮತ್ತು ಒಡಿಯಾ ಭಾಷೆಯಲ್ಲಿ ಸುದ್ದಿ ಓದಬಲ್ಲ ಈ ಅತಿಮಾನುಷ ಆಂಕರ್‌ ಹೆಸರು 'ಲೀಸಾ'. ಈಕೆ ಒಡಿಶಾದ ಮೊಟ್ಟ ಮೊದಲ 'ಎಐ' ನಿರೂಪಕಿಯೂ ಹೌದು.

ಸುದ್ದಿ ವಾಹಿನಿ ಹಾಗೂ ಸಂಸ್ಥೆಯ ಡಿಜಿಟಲ್‌ ವೇದಿಕೆಗಳಲ್ಲಿ ಸುದ್ದಿವಾಚಕಿಯಾಗಿ 'ಲೀಸಾ'ಳನ್ನು ಬಳಸಲಾಗುವುದು. ಇದು ಒಡಿಶಾದ ಟಿವಿ ಪತ್ರಿಕೋದ್ಯಮಕ್ಕೆ ಸಂಸ್ಥೆಯ ಉಡುಗೊರೆಯೂ ಹೌದು ಎಂದು ಒಡಿಶಾ ಟಿವಿ' ಹೇಳಿದೆ.

ಲೀಸಾಗೆ ಒಡಿಯಾದಲ್ಲಿ ಮಾತನಾಡಲು ತರಬೇತಿ ಕೊಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಅಂತೂ ಅದನ್ನು ಒಂದು ಹಂತದಲ್ಲಿ ಸಾಧಿಸಿದೆವು. ಆದರೆ ಇನ್ನೂ ಈ ವಿಷಯವಾಗಿ ಕೆಲಸ ಮಾಡುತ್ತಿದ್ದೇವೆ. ಆಕೆ ಇತರರೊಂದಿಗೆ ಸುಲಲಿತವಾಗಿ ಸಂವಹನ ನಡೆಸುವ ಮಟ್ಟಕ್ಕೆ ಅವಳನ್ನು ತರಬೇತಿಗೆ ಒಳಪಡಿಸಬೇಕೆಂಬುದು ನಮ್ಮ ಆಶಯವಾಗಿದೆ’ ಎಂದು ಒಟಿವಿಯ ಡಿಜಿಟಲ್​ ಬಿಸಿನೆಸ್ ಹೆಡ್ ಲಿತಿಶಾ ಮಂಗತ್​ ಪಾಂಡಾ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಡಿಶಾ ಟೆಲಿವಿಷನ್, ಒಡಿಶಾದ ಮೊದಲ ಖಾಸಗಿ ಎಲೆಕ್ಟ್ರಾನಿಕ್ ಮಾಧ್ಯಮ. 1997 ರಲ್ಲಿ ಭುವನೇಶ್ವರ ಮತ್ತು ಕಟಕ್‌ನಲ್ಲಿ ಪ್ರಾರಂಭಿಸಲಾಯಿತು. ನಂತರ ಕ್ರಮೇಣ ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ  ಚಾಲನೆ ನೀಡಲಾಯಿತು. ಡಿಸೆಂಬರ್ 2006ರಲ್ಲಿ ಕೇಬಲ್‌ ಟಿವಿಯಿಂದ ಸ್ಯಾಟಲೈಟ್​ ಚಾನೆಲ್​ಗೆ ಮಾರ್ಪಾಡುಗೊಳಿಸಲಾಯಿತು.

ಕಳೆದ ಮಾರ್ಚ್ ತಿಂಗಳಲ್ಲಿ 'ಆಜ್‌ ತಕ್‌' ಸುದ್ದಿ ವಾಹಿನಿಯು ಭಾರತದ ಮೊದಲ ಎಐ ನ್ಯೂಸ್‌ ಆಂಕರ್‌ 'ಸನಾ'ಳನ್ನು ಪರಿಚಯಿಸಿತ್ತು. ಬ್ಲ್ಯಾಕ್‌ ಅಂಡ್‌ ವೈಟ್‌' ಕಾರ್ಯಕ್ರಮದಲ್ಲಿ 'ಸನಾ' ಪರಿಚಯವಾಗಿತ್ತು. ಬಳಿಕ ಏಪ್ರಿಲ್‌ನಲ್ಲಿ 'ಕುವೈತ್‌ ನ್ಯೂಸ್‌' ಎಂಬ ಕುವೈತ್‌ನ ಮೂಲದ ಮಾಧ್ಯಮ ಸಂಸ್ಥೆ 'ಫೆದಾಹ್‌' ಎಂಬ ಎಐ ಸುದ್ದಿ ವಾಚಕಿಯನ್ನು ಪರಿಚಯಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com