ಜಗತ್ತಿನ ಮೊದಲ ‘ರೋಬೋಟ್ ಲಾಯರ್’ ವಿರುದ್ಧ ಕೋರ್ಟ್ ನಲ್ಲಿ ಕೇಸ್; ಪದವಿ ಇಲ್ಲದೆ ಕೆಲಸ ಮಾಡಿದ ಆರೋಪ!
ತಂತ್ರಜ್ಞಾನವು ತನ್ನ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿದ್ದು, ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಂದ ನಂತರ ತಂತ್ರಜ್ಞಾನ ಹೊಸ ಕ್ರಾಂತಿಯತ್ತ ಸಾಗುತ್ತಿದೆ.
Published: 27th March 2023 04:14 PM | Last Updated: 27th March 2023 04:47 PM | A+A A-

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ತಂತ್ರಜ್ಞಾನವು ತನ್ನ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿದ್ದು, ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಂದ ನಂತರ ತಂತ್ರಜ್ಞಾನ ಹೊಸ ಕ್ರಾಂತಿಯತ್ತ ಸಾಗುತ್ತಿದೆ.
ರೋಬೋಟ್‌ಗಳು ನಿಧಾನವಾಗಿ ಮನುಷ್ಯರ ಸ್ಥಾನವನ್ನು ಪಡೆದುಕೊಳ್ಳುತ್ತಿದೆಯಾದರೂ ರೋಬೋಟ್‌ಗಳು ಮನುಷ್ಯರಂತೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆಯೇ..?. ಈ ಬಗ್ಗೆ ಇನ್ನೂ ಹಲವು ಪ್ರಶ್ನೆಗಳಿವೆ. ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಕರಣವೊಂದು ಇದೀಗ ಮುನ್ನೆಲೆಗೆ ಬಂದಿದ್ದು, ವಿಶ್ವದ ಮೊದಲ ರೋಬೋಟ್ ವಕೀಲ ಇದೀಗ ಸ್ವತಃ ಕ್ರಿಮಿನಲ್ ಆಗಿದ್ದಾರೆ.
ಹೌದು.. ತಂತ್ರಜ್ಞಾನ ಸಂಸ್ಥೆಯೊಂದು ವಿಶೇಷ ರೊಬೋಟ್ ಲಾಯರ್ ನನ್ನು ತಯಾರಿಸಿದ್ದು, ಅದಕ್ಕೆ ಕಾನೂನು ನಿಯಮಗಳನ್ನೆಲ್ಲಾ ಪ್ರೋಗ್ರಾಮಿಂಗ್ ಮಾಡಿದ್ದಾರೆ. ಆದರೆ ಅಚ್ಚರಿ ಎಂದರೆ ಕಾನೂನು ನಿಯಮಗಳನ್ನೆಲ್ಲಾ ತಿಳಿದ ರೊಬೋಟ್ ಲಾಯರ್ ನ್ಯಾಯಾಲಯದಲ್ಲಿ ಕ್ರಿಮಿನಲ್‌ನಂತೆ ವಿಚಾರಣೆ ಎದುರಿಸಬೇಕಾಗಿದೆ.
ಏನಿದು ವಿವಾದ?
ವಾಸ್ತವವಾಗಿ, ವಿಶ್ವದ ಮೊದಲ ರೋಬೋಟ್ ವಕೀಲರ ಮೇಲೆ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಚಿಕಾಗೋ ಕಾನೂನು ಸಂಸ್ಥೆ ಅಡೆಲ್ಸನ್ ಕ್ಯಾಲಿಫೋರ್ನಿಯಾದ ಸರ್ವೋಚ್ಛ ನ್ಯಾಯಾಲಯದಲ್ಲಿ ರೋಬೋಟ್ ವಕೀಲರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ, ರೋಬೋಟ್ ಯಾವುದೇ ಪದವಿ ಅಥವಾ ಪರವಾನಗಿ ಇಲ್ಲದೆ ಕಾನೂನು ಅಭ್ಯಾಸ ಮಾಡುತ್ತಿದೆ, ಇದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ಅವರು ವಾದಿಸಿದ್ದಾರೆ.
ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಅಣಬೆ ಬೇಸಾಯ: ಗುಡ್ಡಗಾಡು ಜನರಿಗೆ ಕೃಷಿ ಹೇಳಿಕೊಟ್ಟು ಇತರರಿಗೆ ಮಾದರಿಯಾದ ಉತ್ತರಾಖಂಡ ಯುವತಿ!
ಈ ರೋಬೋಟ್ ಅನ್ನು ಅಮೆರಿಕದ ಸ್ಟಾರ್ಟ್ಅಪ್ ಕಂಪನಿ ಡು ನಾಟ್ (Do Not pay) ಪೇ ತಯಾರಿಸಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ನ ಸಹಾಯದಿಂದ ವಕೀಲರಂತೆಯೇ ಇನ್ನೊಬ್ಬರ ಪ್ರಕರಣವನ್ನು ವಾದ ಮಾಡುವಂತೆ ರೋಬೋಟ್ ಅನ್ನು ಪ್ರೋಗ್ರಾಮಿಂಗ್ ಮಾಡಿ ತಯಾರಿಸಲಾಗಿದೆ. ಇದರ ವಿಚಾರಣೆ ಕೂಡ ಜನವರಿಯಲ್ಲಿ ನಡೆದಿತ್ತು. ಆದರೆ ಇದೀಗ ಜೆ ಅಡೆಲ್ಸನ್ ಕಾನೂನು ಸಂಸ್ಥೆಯು ಈ ಸ್ಟಾರ್ಟಪ್ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದೆ ಮತ್ತು ಅದರ ರೋಬೋಟ್ ವಕೀಲರನ್ನು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ಕೂಡ ನೀಡಲಾಗಿದೆ.
ಇಷ್ಟಕ್ಕೂ ರೋಬೋಟ್ ಲಾಯರ್ ಮಾಡಿದ ತಪ್ಪಾದರೂ ಏನು?
ಇದರ ನಿರ್ಮಾಣ ಸಂಸ್ಥೆ ಹೇಳಿರುವಂತೆ ಈ ವಿಶೇಷ ಲಾಯರ್ ರೊಬೋಟ್ ತನ್ನ ಕಕ್ಷಿದಾರರಿಗೆ ಉಚಿತ ಕಾನೂನು ಸಲಹೆ, ಚರ್ಚೆ ಮತ್ತು ವಾದಗಳಲ್ಲಿ ನೆರವು ನೀಡುತ್ತಿತ್ತು. ಅಲ್ಲದೆ ಇದರಲ್ಲಿ ಪ್ರೋಗ್ರಾಮಿಂಗ್ ಆಗಿರುವ ಕಾನೂನು ವಿಚಾರಗಳನ್ನು ಮಿತಿ ಮೀರಿದ ವೇಗದಲ್ಲಿ ವಾದ ಮಾಡುತ್ತಿತ್ತು. ಇದು ಚಾಟ್‌ಬಾಟ್ ಶೈಲಿಯಲ್ಲಿ ಕಾನೂನಿಗೆ ಸಂಬಂಧಿಸಿದ ಯಾವುದೇ ವಿಷಯ ನೀಡಿದರೂ ನಿರರ್ಗಳವಾಗಿ ವಾದ ಮಾಡುತ್ತಿತ್ತು. ಆದರೆ ನಿರ್ಧಿಷ್ಠ ವಿಚಾರಗಳಲ್ಲಿ ಮಾತ್ರ ಅಂದರೆ ತನ್ನಲ್ಲಿ ಪ್ರೋಗ್ರಾಮಿಂಗ್ ಆಗಿರುವ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ವಾದ ಮಾಡುತ್ತಿತ್ತು. ಅಲ್ಲದೆ ಗೌಪ್ಯ ಕಾನೂನು ಮಾಹಿತಿಗಳನ್ನೂ ಬಹಿರಂಗ ಮಾಡುತ್ತಿದೆ. ಈ ರೊಬೋಟ್ ಮೂಲಕ ದೊಡ್ಡ ಸಂಸ್ಥೆಗಳ ವಿರುದ್ಧ ಹೋರಾಡುವ ಗ್ರಾಹಕರನ್ನು ಬೆಂಬಲಿಸಲು 'ಸ್ವಯಂ-ಸಹಾಯ' ಪ್ರವೇಶಿಸಬಹುದು. ಇದರಿಂದ ವಕೀಲ ವೃತ್ತಿ ಕುರಿತು ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಅರ್ಜಿದಾರರ ವಾದವಾಗಿದೆ. ಇದೇ ಕಾರಣಕ್ಕೆ ಈ ರೋಬೋಟ್ ವಿರುದ್ಧ ದಾವೆ ಹೂಡಿದ್ದಾರೆ.
ಇದನ್ನೂ ಓದಿ: ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆ
ನಿರ್ಮಾಣ ಸಂಸ್ಥೆ ಹೇಳಿದ್ದೇನು?
ನಿರ್ಮಾಣ ಸಂಸ್ಥೆಡು ನಾಟ್ ಪೇಯ ಸಿಇಒ, ಜೋಶುವಾ ಬ್ರೌಡರ್, ನಮಗೆ ಕೆಟ್ಟ ಸುದ್ದಿ ಇದೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ, ಅಮೆರಿಕದ ಶ್ರೀಮಂತ ಕಾನೂನು ಸಂಸ್ಥೆ ಅಡೆಲ್ಸನ್ ಡೋಂಟ್ ಪೇ ವಿರುದ್ಧ ಮೊಕದ್ದಮೆ ಹೂಡಿದ್ದಾರೆ, ಅದರಲ್ಲಿ ಅವರು ರೋಬೋಟ್‌ನ ಕೆಲಸವನ್ನು ಆರೋಪಿಸಿದ್ದಾರೆ. ಕೃತಕ ಬುದ್ಧಿಮತ್ತೆ ಹೊಂದಿರುವ ವಕೀಲರು ರದ್ದುಗೊಳಿಸುವಂತೆ ಮನವಿ ಮಾಡಿದರು. ಇದುವರೆಗೆ ರೋಬೋಟ್ ಕಾನೂನು ಸಲಹೆ, ಚರ್ಚೆ ಮತ್ತು ವಾದಗಳನ್ನು ಮಿತಿಮೀರಿದ ವೇಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಾತ್ರ ನೀಡುತ್ತದೆ ಎಂದು ಕಂಪನಿ ಹೇಳಿದೆ. ಆದರೆ ಇದೀಗ ಈ ಲಾಯರ್ ರೋಬೋಗೆ ಸಂಕಟ ಎದುರಾಗಿದ್ದು, ಅವರೇ ಕೋರ್ಟ್ ನಲ್ಲಿ ಕ್ರಿಮಿನಲ್ ನಂತೆ ಕಾಣಿಸಿಕೊಳ್ಳಲಿದ್ದಾರೆ.