ಯಮುನಾ ನದಿ ಹರಿವು ಹೆಚ್ಚಳ: ದೆಹಲಿಯಲ್ಲಿ 12 ಎನ್ ಡಿಆರ್ ಎಫ್ ತಂಡ ನಿಯೋಜನೆ

ದೆಹಲಿಯಲ್ಲಿ ಯಮುನಾ ನದಿಯ ಹರಿವು ಅಪಾಯದ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 12 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ. 
ದೆಹಲಿಯಲ್ಲಿ  ಪ್ರವಾಹ
ದೆಹಲಿಯಲ್ಲಿ ಪ್ರವಾಹ

ನವದೆಹಲಿ: ದೆಹಲಿಯಲ್ಲಿ ಯಮುನಾ ನದಿಯ ಹರಿವು ಅಪಾಯದ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 12 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ. 

ಕೇಂದ್ರ, ಪೂರ್ವ, ಈಶಾನ್ಯ ದೆಹಲಿಗಳಲ್ಲಿ ತಲಾ 3 ತಂಡಗಳನ್ನು ನಿಯೋಜಿಸಲಾಗಿದ್ದು, ಮತ್ತೊಂದು ತಂಡವನ್ನು ಶಾದರ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಎನ್ ಡಿಆರ್ ಎಫ್ ವಕ್ತಾರರು ಹೇಳಿದ್ದಾರೆ. ಪ್ರವಾಹ ಪರಿಸ್ಥಿತಿ ಇರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲು ಜಿಲ್ಲಾಡಳಿತಕ್ಕೆ ಈ ತಂಡಗಳು ಸಹಾಯ ಮಾಡುತ್ತಿವೆ.
 
ಬೋಟ್, ಹಗ್ಗ ಇತರ ಅಗತ್ಯ ಉಪಕರಣಗಳನ್ನು ತಂಡಗಳಿಗೆ ನೀಡಲಾಗಿದೆ. ಬೆಳಿಗ್ಗೆ 10 ಗಂಟೆಗೆ ಯಮುನಾ ನದಿಯ ನೀರು 208.53 ಮೀಟರ್ ಗಳಿಗೆ ತಲುಪಿದ್ದು, 45 ವರ್ಷ ವರ್ಷಗಳ ದಾಖಲೆ ಮುರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com